ವೈರಲ್ ವಿಡಿಯೋ; ಗಾಳಿಪಟದೊಂದಿಗೇ ಮೇಲೆ ಹಾರಿದ ಬಾಲಕ

ಇಂಡೋನೇಷ್ಯಾ, ಡಿಸೆಂಬರ್ 09: ಗಾಳಿಪಟ ಹಾರಿಸುತ್ತಿದ್ದ ಸಂದರ್ಭ ಗಾಳಿಪಟದೊಂದಿಗೆ ಬಾಲಕನೂ ಮೇಲೆ ಹಾರಿ, 30 ಅಡಿ ಎತ್ತರದಿಂದ ಬಿದ್ದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

ಇಂಡೋನೇಷ್ಯಾದ ಲ್ಯಾಂಪಂಗ್ ನ ರಿಂಗ್ಸೆವು ರೆಗೆನ್ಸಿ ಎಂಬಲ್ಲಿ ಡಿಸೆಂಬರ್ 1ರಂದು ಈ ಘಟನೆ ನಡೆದಿದೆ. ಬಾಲಕ ಬಿದ್ದಿರುವ ಈ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

12 ವರ್ಷದ ಬಾಲಕನೊಬ್ಬ ದೊಡ್ಡ ಗಾಳಿಪಟವನ್ನು ಹಾರಿಸುತ್ತಿದ್ದ. ಈ ಸಂದರ್ಭ ಗಾಳಿ ಜೋರಾಗಿ ಬೀಸಿದ್ದು, ಗಾಳಿಯೊಂದಿಗೆ ಗಾಳಿಪಟ ಹಿಡಿದಿದ್ದ ಬಾಲಕನೂ ಮೇಲೆ ಹಾರಿಕೊಂಡು ಹೋಗಿದ್ದಾನೆ. ಮೇಲೆ ಹಾರುತ್ತಿದ್ದ ಬಾಲಕನನ್ನು ಕಂಡ ಜನರು ಹೌಹಾರಿ ಏನು ಮಾಡಲೂ ತೋಚದೆ ಕೂಗಿಕೊಳ್ಳಲು ಆರಂಭಿಸಿದ್ದಾರೆ.

Video Of Boy Flung With Kite In Indonesia Viral

ಮೇಲೆ ಹೋಗುತ್ತಿದ್ದಂತೆ ಆ ಬಾಲಕ ಗಾಳಿಪಟದ ಸೂತ್ರವನ್ನು ಹರಿದಿದ್ದಾನೆ. ಸೂತ್ರ ಹರಿಯುತ್ತಿದ್ದಂತೆ ತಕ್ಷಣವೇ ಕೆಳಕ್ಕೆ ಬಿದ್ದಿದ್ದಾನೆ. ಸುಮಾರು 30 ಅಡಿ ಎತ್ತರದಿಂದ ಬಾಲಕ ಬಿದ್ದಿದ್ದಾನೆ. ಆತನನ್ನು ಹಿಡಿದುಕೊಳ್ಳುವ ಪ್ರಯತ್ನವೂ ಸಫಲವಾಗಿಲ್ಲ. ಬಾಲಕನನ್ನು ಅಲ್ಲಿದ್ದವರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನ ಎರಡೂ ಭುಜಗಳಿಗೆ ಹಾನಿಯಾಗಿದ್ದು, ಆರು ಕಡೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+