ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಆಕಸ್ಮಿಕವಾಗಿ ಬಲೆಗೆ ಸಿಕ್ಕ 16 ಅಡಿ 'ಶಾಪಗ್ರಸ್ತ ಮೀನು'

|
Google Oneindia Kannada News

ಸಾಗರ ಹಲವು ರಹಸ್ಯಗಳನ್ನು ಹೊಂದಿದೆ. ಈ ಸಾಗರದಲ್ಲಿ ಅಪರೂಪದ ಕೆಲವು ಜೀವಿಗಳು ಕಂಡುಬರುತ್ತವೆ. ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ಅದನ್ನು ಕಂಡಾಗ ಜನ ಆಶ್ಚರ್ಯಗೊಳ್ಳುವುದು ಸಾಮಾನ್ಯ. ಇದೀಗ ಚಿಲಿಯಿಂದ ವಿಚಿತ್ರ ಘಟನೆಯೊಂದು ಹೊರಬಿದ್ದಿದೆ. ಮೀನುಗಾರರ ಬಲೆಯಲ್ಲಿ ದೈತ್ಯ ಮೀನು ಸಿಕ್ಕಿಬಿದ್ದಿದೆ ಎನ್ನಲಾಗುತ್ತಿದ್ದು, ಇದರಿಂದ ನಗರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ದಿ ಮಿರರ್ ವರದಿಗಳ ಪ್ರಕಾರ, ಕೆಲವು ಮೀನುಗಾರರು ತಮ್ಮ ಹಡಗಿನಲ್ಲಿ ಚಿಲಿಯ ಅರಿಕಾದಲ್ಲಿನ ಸಮುದ್ರಕ್ಕೆ ಹೋಗಿದ್ದರು. ಇವರು ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಹೀಗೆ ಸಮುದ್ರಕ್ಕಿಳಿಯುವ ಅವರು ನಿತ್ಯ ಮೀನುಗಳನ್ನು ಹಿಡಿಯುತ್ತಾರೆ. ಈ ವೇಳೆ ಬೃಹತ್ ಮೀನೊಂದು ಅವರ ಬಲೆಗೆ ಸಿಕ್ಕಿ ಬಿದ್ದಿದೆ. ಆರಂಭದಲ್ಲಿ ಜಾಕ್ ಪಾಟ್ ಸಿಕ್ಕಿದೆ ಎಂದುಕೊಂಡಿದ್ದ ಮೀನುಗಾರರು ಅದರೊಂದಿಗೆ ದಡ ಸೇರಿದಾಗ ಆತಂಕಗೊಂಡಿದ್ದಾರೆ. ದೈತ್ಯ ಮೀನನ್ನು ಶಾಪಗ್ರಸ್ತ ಮೀನು ಎಂದು ಕರೆಯಲಾಗುತ್ತಿದೆ.

ವಿಡಿಯೋ ವೈರಲ್

ಮೀನುಗಾರರು ಬಲೆಗೆ ಸಿಕ್ಕ ಮೀನನ್ನು ದಡಕ್ಕೆ ಎಳೆದು ತಂದಿದ್ದಾರೆ. ಸಿಕ್ಕಿ ಮೀನಿನಿಂದ ತಮ್ಮ ಆರ್ಥಿಕ ಸಂಕಷ್ಟ ದೂರವಾಯ್ತು ಎಂದು ಮೀನುಗಾರರು ಅಂದುಕೊಂಡಿದ್ದರು. ಬಲೆ ಭಾರದಿಂದ ಸಂತೋಷಗೊಂಡಿದ್ದ ಮೀನುಗಾರರು ದಡಕ್ಕೆ ಬಂದಾಗ ಭಯಭೀತರಾಗಿದ್ದಾರೆ. ಯಾಕೆಂದರೆ ಮೀನು ನಿರೀಕ್ಷೆಗೂ ಮೀರಿ ದೈತ್ಯವಾಗಿರುವುದು ಕಂಡುಬಂದಿದೆ. ನೀರಿನಲ್ಲಿ ಸುಲಭವಾಗಿ ಎಲೆತಂದ ಮೀನುಗಾರರಿಗೆ ದಡದಲ್ಲಿ ದೈತ್ಯ ಮೀನು ಕಂಡು ಆಶ್ಚರ್ಯಗೊಂಡಿದ್ದಾರೆ. ಮೀನುಗಾರರಿಗೆ ಸಿಕ್ಕ ಮೀನು 16 ಅಡಿ ಇತ್ತು. ಈ ಮೀನು ದಡ ಸೇರಿದಾಗ ಅಲ್ಲಿನ ಜನರು ಅದನ್ನು ಶಾಪಗ್ರಸ್ತ ಮೀನು ಎಂದು ಪರಿಗಣಿಸಿದ್ದಾರೆ. ಈ ಮೀನು ಸಿಕ್ಕಿದ ಸುದ್ದಿ ನಗರದಲ್ಲಿ ಬೆಂಕಿಯಂತೆ ಹಬ್ಬಿದ್ದು, ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಇದಾದ ನಂತರ ಯಾರೋ ಅದನ್ನು ವಿಡಿಯೋ ಮಾಡಿ ಟಿಕ್‌ಟಾಕ್‌ನಲ್ಲಿ ಹಾಕಿದ್ದು, ಲಕ್ಷಾಂತರ ವೀಕ್ಷಣೆಗಳು ಬಂದಿವೆ.

ಕಡಲತೀರದಲ್ಲಿ ದೈತ್ಯ ಮೀನು ಪತ್ತೆ

ಕಡಲತೀರದಲ್ಲಿ ದೈತ್ಯ ಮೀನು ಪತ್ತೆ

ಈ ಮೀನನ್ನು ಕೋಲೋಸಸ್ ಸೈಜ್ ಓರ್ಫಿಶ್ ಎಂದು ಕರೆಯಲಾಗುತ್ತದೆ. ಇದನ್ನು ಕಿಂಗ್ ಆಫ್ ಹೆರಿಂಗ್ಸ್ ಎಂದೂ ಕರೆಯಲಾಗುತ್ತದೆ. ಜೀವಶಾಸ್ತ್ರಜ್ಞರ ಪ್ರಕಾರ, ಅದರ ಉದ್ದವು 5 ಮೀಟರ್ಗಳಿಗಿಂತ ಹೆಚ್ಚು ಇರಬಹುದು ಮತ್ತು ಇದು ಸಾಕಷ್ಟು ಅಪರೂಪ. ಅದು 200 ರಿಂದ 1000 ಮೀಟರ್ ಆಳದಲ್ಲಿ ಸಮುದ್ರದಲ್ಲಿ ವಾಸಿಸುತ್ತದೆ. ಆದರೆ ಮೀನುಗಾರರು ಅದನ್ನು ಕಡಲತೀರದ ಬಳಿ ಹಿಡಿದಿದ್ದಾರೆ. ಆದ್ದರಿಂದ ಅದು ಅಲ್ಲಿಗೆ ಹೇಗೆ ಬಂದಿತು ಎಂಬುದು ಅರ್ಥವಾಗುತ್ತಿಲ್ಲ. ಕೆಲವರು ಭೂಕಂಪಕ್ಕೆ ತುತ್ತಾದಾಗ ಮಾತ್ರ ಜಲಚರಗಳು ಕರಾವಳಿಯುದ್ದಕ್ಕೂ ಬರುತ್ತವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದನ್ನು ವಿಜ್ಞಾನಿಗಳು ಇದನ್ನು ನಿರಾಕರಿಸುತ್ತಾರೆ.

ಭವಿಷ್ಯ ನುಡಿದ ಜನ

ಭವಿಷ್ಯ ನುಡಿದ ಜನ

ಈ ಮೀನು ಭವಿಷ್ಯವನ್ನು ಹೇಳುತ್ತದೆ ಎಂದು ಕೆಲವರು ಹೇಳುತ್ತಾರೆ. ನೀವು ಇದನ್ನು ಕರಾವಳಿಯ ಭಾಗದಲ್ಲಿ ನೋಡಿದರೆ, ಆ ಪ್ರದೇಶದಲ್ಲಿ ಅನಾಹುತ ಸಂಭವಿಸಲಿದೆ ಎಂದು ಅರ್ಥ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. 2011 ರಲ್ಲಿ, ಈ ಮೀನು ಜಪಾನ್‌ನಲ್ಲಿ ಕಾಣಿಸಿಕೊಂಡಿತು. ನಂತರ ಫುಕುಶಿಮಾದಲ್ಲಿ ತೀವ್ರ ಭೂಕಂಪ ಸಂಭವಿಸಿತು. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಈ ಕಾರಣದಿಂದಾಗಿ ಅವರನ್ನು ಶಾಪಗ್ರಸ್ತವೆಂದು ಪರಿಗಣಿಸಲಾಗಿದೆ.

ಇದು ಭೂಕಂಪದ ಸೂಚನೆ ಎಂದ ಜನ

ಇದು ಭೂಕಂಪದ ಸೂಚನೆ ಎಂದ ಜನ

ಸದ್ಯ ಈ ಮೀನನ್ನು ಚಿಲಿಯಲ್ಲಿ ಕ್ರೇನ್ ಸಹಾಯದಿಂದ ದೋಣಿಯಿಂದ ಕೆಳಗಿಳಿಸಲಾಗಿದೆ. ಅದರ ಭಾರದಿಂದಾಗಿ ಮೀನುಗಾರರೂ ಸಾಕಷ್ಟು ತೊಂದರೆ ಅನುಭವಿಸಿದರು. ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿ ಘರ್ಷಣೆ ಉಂಟಾದಾಗ, ಅವುಗಳನ್ನು ಪತ್ತೆ ಮಾಡಲಾಗುತ್ತದೆ ಎಂಬ ಸಿದ್ಧಾಂತವೂ ಇದೆ. ಈ ವೇಳೆ ಅವು ಭೂಕಂಪವನ್ನು ಊಹಿಸಿ ತಪ್ಪಿಸಿಕೊಳ್ಳಲು ಸಮುದ್ರದ ದಡದ ಕಡೆಗೆ ಬರುತ್ತವೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ಬಂದಿಲ್ಲ.

Recommended Video

Jaggesh ಮೋದಿಯವರನ್ನೇ ಲಾಂಛನದ ಸಿಂಹಕ್ಕೆ ಹೋಲಿಸಿದ್ದಾರೆ | *Politics | OneIndia Kannada

English summary
A cursed fish is caught in a fisherman's net in the sea off Arica, Chile. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X