ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಪೋಟಕ್ಕೆ 15 ಬಲಿ

Subscribe to Oneindia Kannada

ಕ್ವೆಟ್ಟಾ, ಆಗಸ್ಟ್ 13: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಬಾಂಬ್ ಸ್ಫೋಟಕ್ಕೆ 15 ಜನ ಸಾವನ್ನಪ್ಪಿದ್ದಾರೆ.

ಮಿಲಿಟರಿ ಟ್ರಕ್ ಮೇಲೆ ಈ ಬಾಂಬ್ ದಾಳಿ ನಡೆದಿದ್ದು 8 ಸೈನಿಕರು, 7 ನಾಗರಿಕರು ಸಾವನ್ನಪ್ಪಿದ್ದು , 32 ಜನರು ಗಾಯಗೊಂಡಿದ್ದಾರೆ.

Venkaiah NaiduDeadly blast strikes Pakistan's Quetta, killed 15

ಇಲ್ಲಿನ ಸ್ಟೇಡಿಯಂನಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ 70ನೇ ವರ್ಷಾಚರಣೆಯ ಸಿದ್ಧತೆ ನಡೆಯುತ್ತಿತ್ತು. ಇಲ್ಲೇ ಬಾಂಬ್ ಸ್ಪೋಟ ಸಂಭವಿಸಿದೆ.

ಕಳೆದ ಜೂನ್ ನಲ್ಲಿ ಇಲ್ಲಿನ ಐಜಿಪಿ ಕಚೇರಿ ಸಮೀಪ ಸಂಭವಿಸಿದ ಬಾಂಬ್ ಸ್ಪೋಟಕ್ಕೆ 12 ಜನ ಸಾವನ್ನಪ್ಪಿ, 14 ಜನ ಗಾಯಗೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Parrikar - Karnataka Planting ECO Bomb Through Dams | Oneindia Kannada

ಚಿತ್ರ ಕೃಪೆ: ಎನ್ಡಿಟಿವಿ ಟ್ವಿಟ್ಟರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A blast in the Pakistani city of Quetta in Balochistan province has killed at least 15 people and injured 32 others.
Please Wait while comments are loading...