Get Updates
Get notified of breaking news, exclusive insights, and must-see stories!

ಹಣದುಬ್ಬರ ಬಿಕ್ಕಟ್ಟು: ಕರೆನ್ಸಿಯಲ್ಲಿ 5 ಸೊನ್ನೆ ಕಡಿತಗೊಳಿಸಿದ ವೆನಿಜುವೆಲಾ

ಕರಾಕಸ್, ಜುಲೈ 26: ತೀವ್ರ ಹಣದುಬ್ಬರದಿಂದ ತತ್ತರಿಸಿರುವ ವೆನೆಜಿವೆಲಾ, ತನ್ನ ಕರೆನ್ಸಿಯಲ್ಲಿ ಐದು ಸೊನ್ನೆಗಳ ಕಡಿತವನ್ನು ಪ್ರಕಟಿಸಿದೆ.

ದೇಶದ ಹಣದುಬ್ಬರ ಪ್ರಮಾಣದ ಈ ವರ್ಷಾಂತ್ಯದ ವೇಳೆಗೆ ಶೇಕಡ ಒಂದು ಮಿಲಿಯನ್‌ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹೇಳಿದೆ.

ಅದರ ನಡುವೆಯೇ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಕರೆನ್ಸಿ ಮೌಲ್ಯವನ್ನು ಕಡಿತಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ಅಧ್ಯಕ್ಷ ನಿಕೊಲಸ್ ಮಡುರೊ ನೇತೃತ್ವದ ಸರ್ಕಾರವು ಕರೆನ್ಸಿಯಿಂದ ಮೂರು ಸೊನ್ನೆಗಳನ್ನು ತೆಗೆದುಹಾಕಲು ಉದ್ದೇಶಿಸಿತ್ತು. ಆದರೆ, ಹಣದುಬ್ಬರದ ಪ್ರಮಾಣ ತ್ವರಿತಗತಿಯಲ್ಲಿರುವುದರಿಂದ ಐದು ಸೊನ್ನೆಗಳ ಕಡಿತ ಮಾಡಲು ನಿರ್ಧರಿಸಿದೆ.

venezuela inflation currency 5 zeroes removed from bolivar

ಹಣಕಾಸಿನ ಪುನರ್‌ಮಾರ್ಪಾಡು ಯೋಜನೆಯನ್ನು ಒಳಗೊಂಡ ಆರ್ಥಿಕ ಸುಧಾರಣೆ ಯೋಜನೆಯು ಆಗಸ್ಟ್ 20ರಿಂದ ಜಾರಿಯಾಗಲಿದೆ ಎಂದು ಮಡುರೊ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಸ್ಥಳೀಯ ಕರೆನ್ಸಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಮಡುರೊ ತಿಳಿಸಿದ್ದಾರೆ.

ಇದಕ್ಕೂ ಮೊದಲು ಅವರು, ಹೊಸ ಬೊಲಿವರ್ (ವೆನಿಜುವೆಲಾ ಕರೆನ್ಸಿ) ಬಿಲ್‌ಗಳು ಆಗಸ್ಟ್ 4ರಂದು ಚಲಾವಣೆಗೆ ಬರಲಿದೆ ಎಂದು ಪ್ರಕಟಿಸಿದ್ದರು. ಆದರೆ, ಬ್ಯಾಂಕ್‌ಗಳ ಮನವಿ ಮೇರೆಗೆ ಅದನ್ನು ಹಿಂಪಡೆಯಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+