ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮವಾಗಿ ಸಂತ ಪದವಿಗೇರಲಿರುವ ಮದರ್ ತೆರೆಸಾ

|
Google Oneindia Kannada News

ವ್ಯಾಟಿನಕ್ ಸಿಟಿ, ಮಾರ್ಚ್, 15: ಮದರ್ ತೆರೆಸಾ ಅವರಿಗೆ ವಿಶ್ವದ ಮತ್ತೊಂದು ಅತ್ಯುನ್ನತ ಗೌರವ ಸಿಕ್ಕಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃ‌ತ ಮದರ್‌ ತೆರೆಸಾ ಅವರಿಗೆ ಸಂತ ಪದವಿ ನೀಡಲು ಪೋಪ್‌ ಫ್ರಾನ್ಸಿಸ್‌ ಮಂಗಳವಾರ ಅಧಿಕೃತ ಸಮ್ಮತಿ ನೀಡಿದ್ದಾರೆ.[ಸೆಪ್ಟೆಂಬರ್ ನಲ್ಲಿ ಸಂತ ಪದವಿಗೇರಲಿರುವ ಮದರ್ ತೆರೆಸಾ!]

ಸೆಪ್ಟೆಂಬರ್ 4ರಂದು ಮದರ್ ತೆರೆಸಾ ಸಂತ ಪದವಿಗೆ ಏರಲಿದ್ದಾರೆ. ತೆರೆಸಾ ಅವರು ಮೃತರಾಗಿ 19 ವರ್ಷಗಳ ಬಳಿಕ ಸಂತ ಪದವಿ ದೊರೆಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿಯೇ ಮದರ್ ತೆರೆಸಾ ಅವರಿಗೆ ಸಂತ ಪದವಿ ನೀಡಲು ತೀರ್ಮಾನ ಮಾಡಿಕೊಳ್ಳಲಾಗಿತ್ತು.[ಮದರ್ ತೆರೆಸಾ ಹೆಸರಿನ ಅನಾಥಾಶ್ರಮಗಳು ಇನ್ನಿಲ್ಲ]

Vatican set to approve Mother Teresa's elevation to sainthood

'ಮಿಷನರೀಸ್‌ ಆಫ್‌ ಚಾರಿಟಿ' ಸೇವಾ ಸಂಸ್ಥೆ ಸ್ಥಾಪಿಸಿದ್ದ ತೆರೆಸಾ ಸುಮಾರು 45 ವರ್ಷಗಳ ಕಾಲ ಅಸಹಾಯಕರ ನೆರವಿಗೆ ನಿಂತಿದ್ದರು. ಭಾರತದಲ್ಲಿ ನೆಲೆಸಿ ಸೇವೆಗೆ ಹೊಸ ಅರ್ಥ ನೀಡಿದ್ದ ತೆರೆಸಾ ಅವರಿಗೆ ಸಂತ ಪದವಿ ದೊರೆಯುತ್ತಿರುವುದು ದೇಶವಾಸಿಗಳಿಗೂ ಹೆಮ್ಮೆ ತಂದಿದೆ.[ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್]

ರತದ ಕೋಲ್ಕತಾದಲ್ಲಿ ನೆಲೆನಿಂತಿದ್ದ ತೆರೆಸಾ ಅವರಿಗೆ ಪ್ರತಿಷ್ಠಿತ ನೋಬೆಲ್ ಪುರಸ್ಕಾರ ಮತ್ತು ಭಾರತ ರತ್ನವೂ ಸಿಕ್ಕಿದೆ.1979 ರಲ್ಲೇ ತೆರೆಸಾ ಅವರಿಗೆ ನೋಬೆಲ್ ಸಿಕ್ಕಿದ್ದರೂ ಸಂತ ಪದವಿ ದೊರೆಯಲು ಇಷ್ಟು ವರ್ಷ ಬೇಕಾಯಿತು.[ಮದರ್ ತೆರೆಸಾ ಹೆಸರಿನ ಅನಾಥಾಶ್ರಮಗಳು ಇನ್ನಿಲ್ಲ]

English summary
The Vatican committee that approves elevations to sainthood will meet tomorrow to consider a recommendation that Mother Teresa becomes Saint Teresa, the Holy See announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X