ಪ್ರೇಮಿಗಳ ದಿನದಂದು ಪಾಕಿಸ್ತಾನದಲ್ಲಿ ಮಾರ್ಗಸೂಚಿ: ಕಟ್ಟುನಿಟ್ಟಿನ ಕ್ರಮಗಳು ಯಾವವು?
ಇಸ್ಲಾಮಾಬಾದ್ ಫೆಬ್ರವರಿ 14: ಪಾಕಿಸ್ತಾನದ ರಾಷ್ಟ್ರ ರಾಜಧಾನಿಯ ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಪ್ರೇಮಿಗಳ ದಿನದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹುಡುಗಿಯರು ಹಿಜಾಬ್ ಧರಿಸುವಂತೆ ಮತ್ತು ಹುಡುಗರು ಬಿಳಿ ಪ್ರಾರ್ಥನಾ ಟೋಪಿಗಳನ್ನು ಧರಿಸಬೇಕು ಮತ್ತು ಯಾವಾಗಲೂ ಹುಡುಗಿಯರು ಮತ್ತು ಹುಡುಗರು ಎರಡು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇಸ್ಲಾಮಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸದಂತೆ ಸುತ್ತೋಲೆ ಹೊರಡಿಸಿದೆ. ''ಕಾಲೇಜ್ ವಿದ್ಯಾರ್ಥಿಗಳಿಗೆ ಅದು ಯುವಕರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಚಟುವಟಿಕೆಗಳು ಎಂದಿದೆ" ಎಂದು ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಹಿಜಾಬ್ ವಿವಾದ: ವಿದ್ಯಾರ್ಥಿನಿ ಪರ ವಕೀಲರನ್ನು ಸಮರ್ಥಿಸಿದ ರಾಮಕೃಷ್ಣ ಆಶ್ರಮ
ವಿಶ್ವವಿದ್ಯಾನಿಲಯದ ಡ್ರೆಸ್ ಕೋಡ್ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರನ್ನು ಸರಿಯಾಗಿ ಹಿಜಾಬ್ ಧರಿಸಬೇಕು. ಕುತ್ತಿಗೆ ಮತ್ತು ಎದೆಯನ್ನು ಹಿಜಾಬ್‌ನೊಂದಿಗೆ ಮುಚ್ಚಿಕೊಳ್ಳಬೇಕು. ಎಲ್ಲಾ ಪುರುಷ ವಿದ್ಯಾರ್ಥಿಗಳಿಗೆ ಬಿಳಿ ಪ್ರಾರ್ಥನಾ ಕ್ಯಾಪ್‌ಗಳನ್ನು ಧರಿಸಲು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಹಿಡಿಯಲು ಕಾಲೇಜು ಸಿಬ್ಬಂದಿ ಸದಸ್ಯರು ಕ್ಯಾಂಪಸ್‌ನಲ್ಲಿ ಗಸ್ತು ತಿರುಗುತ್ತಾರೆ ಎಂದು ಅದು ಎಚ್ಚರಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸುವವರಿಗೆ PKR 5,000 ದಂಡ ವಿಧಿಸಲಾಗುವುದು ಎಂದು ಕಾಲೇಜು ಸುತ್ತೋಲೆಯನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ಕಾಲೇಜನ್ನು 1996 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ರಿಫಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯೊಂದಿಗೆ ಸಂಯೋಜಿತವಾಗಿರುವ ವೈದ್ಯಕೀಯ ಶಾಲೆಯಾಗಿದೆ.
ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದೂ ಕರೆಯಲ್ಪಡುವ ಪ್ರೇಮಿಗಳ ದಿನವನ್ನು ವಾರ್ಷಿಕವಾಗಿ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಇದು ಸೇಂಟ್ ವ್ಯಾಲೆಂಟೈನ್ ಎಂಬ ಕ್ರಿಶ್ಚಿಯನ್ ಹುತಾತ್ಮರನ್ನು ಗೌರವಿಸುವ ಕ್ರಿಶ್ಚಿಯನ್ ಹಬ್ಬದ ದಿನವಾಗಿ ಹುಟ್ಟಿಕೊಂಡಿತು ಮತ್ತು ವರ್ಷಗಳಲ್ಲಿ ಪ್ರಪಂಚದಾದ್ಯಂತ ಪ್ರಣಯದ ಮಹತ್ವದ ಸಾಂಸ್ಕೃತಿಕ ಆಚರಣೆಯಾಗಿದೆ.
ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವುದರಲ್ಲಿ ನೆರೆಯ ದೇಶ ಪಾಕಿಸ್ತಾನ ನಿಸ್ಸೀಮ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಪಕ್ಕದವರ ತಟ್ಟೆ ಸರಿಯಿಲ್ಲ ಎನ್ನುವ ಜಾಯಮಾನ. ಇಲ್ಲಿ ಹಿಜಾಬ್ ಗಲಾಟೆ ನಡೆಯುತ್ತಾ ಇದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಸಚಿವರು, ಸರ್ಕಾರಿ ಅಧಿಕಾರಿಗಳು ಕಮೆಂಟ್ ಮಾಡುತ್ತಿದ್ದಾರೆ. ಆದರೀಗ ಸೋಶಿಯಲ್ ಮೀಡಿಯಾಗಳ ಪಾಲಿಗೆ ಪಾಕಿಸ್ತಾನವೇ ಆಹಾರವಾಗಿದೆ. ಅಲ್ಲಿ ಚುನಾಯಿತ ಜನ ಪ್ರತಿನಿಧಿ ಅಂದರೆ ಸಂಸದನೊಬ್ಬ (MP) 3ನೇ ಮದುವೆಯಾಗಿದ್ದಾನೆ. ಅಲ್ಲಿ ಮೂರನೇ ಮದುವೆಗೆ ಅನುಮತಿಯಿದ್ದರೂ, ಆತ ಹಾಗೂ 3ನೇ ಮದುವೆಯಾಗಿರೋ ಹುಡುಗಿನ ವಯಸ್ಸಿನ ಅಂತರದ ಮಧ್ಯೆ ಭಾರೀ ಚರ್ಚೆ ಶುರುವಾಗಿದೆ.
ಇಸ್ಲಾಮಾಬಾದ್‌ನ ಸಂಸದ ಅಮೀರ್ ಲಿಯಾಖತ್‌ನೇ ಮೂರನೇ ಮದುವೆಯಾಗಿರುವ ಸಂಸದ. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ -ಇ-ಇನ್ಸಾಫ್ ಪಕ್ಷದ ಸಂಸದ ಈತ. ಅಲ್ಲದೇ ಈತ ಅಲ್ಲಿನ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕನೂ ಆಗಿದ್ದಾನೆ. ಅಂದಹಾಗೆ ಅಮೀರ್ ಲಿಯಾಖತ್‌ಗೆ ಇದು ಮೂರನೇ ಮದುವೆ. ಈ ಹಿಂದೆಯೇ ಆತ ಎರಡು ಮದುವೆಯಾಗಿದ್ದಾನೆ. ಈಗ ಕೇವಲ 1 ತಿಂಗಳ ಹಿಂದಷ್ಟೇ 2ನೇ ಪತ್ನಿಯಿಂದ ದೂರವಾಗಿದ್ದ ಎನ್ನಲಾಗಿದೆ. ಇದೀಗ ಆತ ಮೂರನೇ ಪತ್ನಿಯ ಕೈಹಿಡಿದಿದ್ದಾನೆ. ಪ್ರೇಮಿಗಳ ದಿನದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ತಂದಿದಿರುವ ಇಸ್ಲಾಮಾಬಾದ್ ನಲ್ಲಿ ಇಂಥಹ ಘಟನೆಗಳು ಅಪಹಾಸ್ಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತವೆ.
Recommended Video
ಇನ್ನೂ ದೇಶದ ಗಮನ ಸೆಳೆದಿರುವ ಕರ್ನಾಟಕ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಸರ್ಕಾರ ಇಸ್ಲಾಮಾಬಾದಿನ ಭಾರತೀಯ ಹೈಕಮಿಷನ್ ಗೆ ಸಮನ್ಸ್ ವಿಧಿಸಿದೆ. ಹಿಜಾಬ್ ಧರಿಸಿದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನಿರಾಕರಿಸಿರುವುದಕ್ಕೆ ಪಾಕ್ ಆತಂಕ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಈ ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರು ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ಧರಿಸುವುದು ಬಿಡುವುದು ಅವರವರ ವೈಯಕ್ತಿಕ ನಿರ್ಧಾರ. ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪಾಕ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications