Get Updates
Get notified of breaking news, exclusive insights, and must-see stories!

USS Ford: ಇರಾನ್ ಎದುರು ನಿಂತ ಅಮೆರಿಕ ಯುದ್ಧನೌಕೆಯಲ್ಲಿ ಟಾಯ್ಲೆಟ್ ಪ್ರಾಬ್ಲಂ: ಸಮರಕ್ಕೆ ಬಂದವರ ಕಷ್ಟಗಳು

US-Iran Conflict: ವಿಶ್ವದ ದೊಡ್ಡಣ್ಣ ಅಮೆರಿಕ ಇರಾನ್ ಮೇಲೆ ಯುದ್ಧ ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಇರಾನ್ ಮತ್ತು ಯುಎಸ್ ಮಧ್ಯ ರಾಜತಾಂತ್ರಿಕ ಸಂಬಂಧ ಸರಿ ಇಲ್ಲ. ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಯಾವಾಗ ಬೇಕಾದರೂ ಯುದ್ಧ ಆರಂಭವಾಗುವ ಲಕ್ಷಣಗಳಿವೆ. ಇತ್ತೀಚೆಗೆ ಅಮೆರಿಕ ಅಣ್ವಸ್ತ್ರ ಒಪ್ಪಂದಕ್ಕೆ ಬಾರದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೆ ಮಣಿಯದ ಇರಾನ್ ದೇಶ ಪ್ರತಿದಾಳಿಯ ಮಾತುಗಳನ್ನಾಡಿದೆ. ಒಪ್ಪಂದ ಏರ್ಪಡುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಅಮೆರಿಕ ವಿಶ್ವದ ಅತ್ಯಂತ ದುಬಾರಿ ಹಡಗನ್ನು (USS Gerald R. Ford) ಯುದ್ಧಕ್ಕೆ ಸಜ್ಜುಗೊಳಿಸಿದೆ. ಆದರೆ ಈ ಯುದ್ಧನೌಕೆಯಲ್ಲಿ ಶೌಚಾಲಯ ಸಮಸ್ಯೆ ಎದುರಾಗಿದ್ದು, ಯುದ್ಧ ಮಾಡಬೇಕಾದ ಸೈನಿಕರು ಮೂಲಭೂತ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಾಗಿದ್ದರೆ ಯುದ್ಧ ನೌಕೆಯಲ್ಲಿರುವ ಸಮಸ್ಯೆಗಳೇನು? ಏನಿದು ಯುಎಸ್ ಬೃಹತ್ ಹಡಗಿನ ಸುದ್ದಿ ಇಲ್ಲಿದೆ ಮಾಹಿತಿ

ಅಮೆರಿಕದ ದಶಕಗಳ ಇತಿಹಾಸದಲ್ಲಿ ಇರಾನ್ ಮೇಲಿನ ಎಚ್ಚರಿಕೆ ಬಳಿಕ ಮಧ್ಯಪ್ರಾಚ್ಯದಲ್ಲಿ ತನ್ನ ಅತಿದೊಡ್ಡ ನೌಕಾಪಡೆಗಳಲ್ಲಿ ಒಂದನ್ನು ಸಮರಕ್ಕೆ ಸದ್ದಿಲ್ಲದೆ ಜೋಡಿಸುತ್ತಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ. ದುಬಾರಿ ಯುದ್ಧನೌಕೆ ಜೊತೆಗೆ ವಿಮಾನವಾಹಕ ನೌಕೆಗಳು, ವಿಧ್ವಂಸಕ ನೌಕೆಗಳು ಮತ್ತು ಫೈಟರ್ ಜೆಟ್‌ಗಳನ್ನು ಸಂಭಾವ್ಯ ಯುದ್ಧ ಎದುರಿಸಲು ಸಜ್ಜುಗೊಳಿಸುತ್ತಿದೆ. ಇದೆಲ್ಲ ಯುದ್ಧೋಪಕರಣಗಳ ಮಧ್ಯೆ ಅಮೆರಿಕದ ಹೊಸ ಮತ್ತು ಅತ್ಯಂತ ದುಬಾರಿ ವಾಹಕ ನೌಕೆಯಲ್ಲಿ ಒಂದಾಗಿರುವ 'ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್' ಅನ್ನು ಸಿದ್ಧಗೊಳಿಸಿದೆ. ಆದರೆ ಈ ಯುದ್ಧನೌಕೆಯಲ್ಲಿ ಆಗಿರುವ ಸಮಸ್ಯೆಯೊಂದು ಸೈನಿಕರ ಹೊಸ ತಲೆ ನೋವು ತಂದಿದೆ.

USS Gerald R Ford

ತಿಂಗಳುಗಳಿಂದ ಸಮುದ್ರದಲ್ಲಿ ನಿಂತಿರುವ 'ಫೋರ್ಡ್'

ವಿಶ್ವದ ಅತಿದೊಡ್ಡ ವಿಮಾನವಾಹಕ ನೌಕೆಯಾದ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್. ಈ ಹಡಗು ಆರು ತಿಂಗಳ ಅವಧಿಯ ಕಾರ್ಯಾಚರಣೆಗಾಗಿ ಸಮುದ್ರಕ್ಕೆ ಇಳಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಇದರ ಅವಧಿಯನ್ನು ಎರಡನೇ ಬಾರಿ ವಿಸ್ತರಿಸಲಾಗಿದೆ. ಇದರ ಕಾರ್ಯಾಚರಣೆ, ನಿರ್ವಹಣೆಯು ಐತಿಹಾಸಿಕ ಮತ್ತು ದೀರ್ಘಕಾಲದ ಮಿಷನ್ ಆಗಿದೆ. ಮತ್ತೊಂದೆಡೆ ನಿರಂತರವಾಗಿ ಸಮುದ್ರದಲ್ಲೇ ಇರುವುದರಿಂದ ಈ ನೌಕೆಯಲ್ಲಿರುವ ನೌಕಾಪಡೆ ಸಿಬ್ಬಂದಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ತಾಗಿದ್ದಾರೆ. ಅಷ್ಟೇ ಅಲ್ಲದೆ, ದೀರ್ಘಕಾಲದ ಬಳಕೆಯಿಂದಾಗಿ ನೌಕೆಯ ಯಂತ್ರೋಪಕರಣಗಳು (ಸ್ಟೀಲ್) ಕೂಡ ಇದೀಗ ಬಳಕೆಯ ಗರಿಷ್ಠ ಮಿತಿಯನ್ನು ತಲುಪಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದುರಸ್ತಿ ವಿಳಂಬ, ಸಿಬ್ಬಂದಿ ಮೇಲೆ ಹೆಚ್ಚಾದ ಒತ್ತಡ

ಆರು ತಿಂಗಳಿನಿಂದ ಸಮುದ್ರದಲ್ಲಿ ನಿಂತ ಈ ಯುದ್ಧ ನೌಕೆಯನ್ನು ಯುದ್ಧಕ್ಕೆ ನಿಯೋಜಿಸುವುದು ತಡವಾಗಿದೆ. ಶಾಂತಿ ಒಪ್ಪಂದಗಳು ಏರ್ಪಡುತ್ತವೆಯೆನೋ ಎಂದು ಕಾದು ನೋಡಲಾಗುತ್ತಿತ್ತು. ಅದರಿಂದಾಗಿ ಆರು ತಿಂಗಳು ಕಳೆದ ಅಮೆರಿಕ ಇದೀಗ ಬೃಹತ್ ದುಬಾರಿ ಯುದ್ಧನೌಕೆಯನ್ನು ಯುದ್ಧಕ್ಕೆ ಅಣಿಗೊಳಿಸುತ್ತಿದೆ. ಈ ವೇಳೆ ಹಡಗಿನ ಒಳಗಿನ ಆಂತರಿಕ ವಿಷಯ ಬೆಳಕಿಗೆ ಬಂದಿವೆ ಎಂದು ನೌಕಾಪಡೆಯ ತಜ್ಞರು ಹೇಳುತ್ತಾರೆ. ಫೋರ್ಡ್ ಸಮುದ್ರದಲ್ಲಿ ನಿಂತು ಒಟ್ಟಾರೆ ಎಂಟು ತಿಂಗಳುಗಳನ್ನು ದಾಟಿದೆ. ಇದು ಇನ್ನೂ ಐದಾರು ತಿಂಗಳು ಸಮುದ್ರದಲ್ಲೇ ನಿಲ್ಲಬೇಕಾದ ಸಾಧ್ಯತೆ ಇದೆ. ನಿರ್ವಹಣೆಯು ಸರಿಯಾಗಿ ಆಗದೇ, ದುರಸ್ತಿ ಎದುರು ನೋಡುತ್ತಿದೆ. ಸಕಾಲಕ್ಕೆ ದುರಸ್ತಿ ಆಗದೇ ಟಾಯ್ಲೆಟ್ ಇನ್ನಿತರ ಸಮಸ್ಯೆ ಉಲ್ಬಣಿಸಿವೆ.

ದುಬಾರಿ ಹಡಗು ಎನ್ನುವುದೇಕೆ?

ಅಮೆರಿಕಾದ ಈ ಯುದ್ಧನೌಕೆಯು ಬರೋಬ್ಬರಿ 13 ಬಿಲಿಯನ್ ಮೌಲ್ಯದ್ದಾಗಿದೆ. ಇದು ದುಬಾರಿ ಯುದ್ಧನೌಕೆಯಾಗಿದ್ದು, ಇದರಲ್ಲಿ ಈ ಯುದ್ಧನೌಕೆಯ ಒಳಗೆ ಶೌಚಾಲಯಗಳು ಸುಸೂತ್ರವಾಗಿ ಬಳಕೆಗೆ ಲಭ್ಯವಾಗದೇ ವಿಫಲವಾಗುತ್ತಿವೆ. ಅಲ್ಲಿ ಪ್ಲಂಬಿಂಗ್ ವ್ಯವಸ್ಥೆಗಳು ಹದಗೆಟ್ಟಿದ್ದು, ಒಳಗಿನ ಸೈನಿಕರ ಉಸಿರುಗಟ್ಟುವಂತಾಗಿದೆ. ಇಂತಹ ವೈಫಲ್ಯಗಳು ಎದುರಾದಾಗ ಪರಿಹರಿಸುವ ಮತ್ತು ಹಡಗಿನ ಸಂಪೂರ್ಣ ವಿಭಾಗಗಳು ಕಾರ್ಯನಿರ್ವಹಿಸುವ ಮುಖ್ಯಸ್ಥರು ಇದಾಗಿದೆ. ಹೀಗಾಗಿ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ.

ನಾವಿಕರು ಗಡಿಯಾರ ನೋಡಿಕೊಂಡು ದಿನ ದೂಡುವಂತಾಗಿದೆ. ಸಂಭಾವ್ಯ ಇರಾನ್ ಜತೆಗಿನ ಯುದ್ಧಕ್ಕಿಂತ ಹೆಚ್ಚಾಗಿ ನೌಕೆಯ ಒಳಗಿನ ಸಮಸ್ಯೆಗಳ ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಪ್ಲಂಬಿಂಗ್ ಸಮಸ್ಯೆ ನಿವಾರಿಸುವಲ್ಲಿ ಹೈರಾಣಾಗಿ ಸಂಕಷ್ಟ ಎದುರಿಸುವಂತಾಗಿದೆ. ಟಾಯ್ಲೆಟ್ ಪೈಪ್‌ಗಳು ತುಂಬಿಕೊಂಡು ನೀರು ಸರಾಗವಾಗಿ ಹೋಗದ ಸ್ಥಿತಿ ಇದ್ದು, ಒಟ್ಟಾರೆ ವ್ಯವಸ್ಥೆಯು ಹಳೆಯದಾಗಿದೆ. ಈ ವಿಷಯ ಇದೀಗ ಇರಾನ್-ಅಮೆರಿಕಾ ಯುದ್ಧ ಸನ್ನಿವೇಶದಲ್ಲಿ ಮುನ್ನೆಲೆಗೆ ಬರುತ್ತಿದೆ.

USS Gerald R Ford

ವೆನೆಜುವೆಲಾ ಕಾರ್ಯಾಚರಣೆಯಿಂದ ಅವ್ಯವಸ್ಥೆವರೆಗೆ..

ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಯುದ್ಧನೌಕೆಯೊಂದಿಗೆ ಅಮೆರಿಕಾ ಸೈನ್ಯವು ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿದಿದ್ದರು. ಈ ಕಾರ್ಯಾಚರಣೆಯಲ್ಲಿ ಇದೇ ಯುದ್ಧನೌಕೆ ಪ್ರಮುಖ ಪಾತ್ರ ವಹಿಸಿತ್ತು. ವೆನೆಜುವೆಲಾ ಮೇಲಿನ ದಾಳಿ ಬಳಿಕ ಹಡಗಿನ ನಾವಿಕರು (ಸಿಬ್ಬಂದಿ) ಶೀಘ್ರದಲ್ಲೇ ಮನೆಗೆ ಹಿಂತಿರುಗುವ ನಿರೀಕ್ಷೆಯಲ್ಲಿದ್ದರು. ಆದರೆ ಯುಎಸ್ ಆದೇಶ ಅವರ ಆಸೆಯನ್ನು ತಲೆಕೆಳಗೆ ಮಾಡಿತು. ಈ ಹಡಗನ್ನು ಮಧ್ಯಪ್ರಾಚ್ಯದ ಕಡೆಗೆ ನಿಯೋಜಿಸಲು ಸಜ್ಜುಗೊಳಿಸುವಂತೆ ಸೂಚಿಸಲಾಯಿತು. ಹೀಗಾಗಿ ಕೆಲವು ತಿಂಗಳುಗಳಿಂದ ಸಮುದ್ರದಲ್ಲೇ ನಿಲ್ಲುವಂತಾಯಿತು. ಇದೀಗ ಇರಾನ್ ಮೇಲಿನ ಯುದ್ಧ ಹತ್ತಿರ ಅನ್ನಿಸಿದಾಗ ಯುದ್ಧಕ್ಕೆ ಸಜ್ಜುಗೊಳಿಸುವ ಪ್ರಕ್ರಿಯೆಗೆ ಮತ್ತಷ್ಟು ವೇಗ ದೊರೆತಿದ್ದು, ಇನ್ನೇನು ಅಂತಿಮ ಆದೇಶ ದೊರೆತಲ್ಲಿ ಇರಾನ್ ದೇಶ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಆರಂಭವಾಗಬೇಕಿದೆ. ಇದರ ನಡುವೆ ಹಡಗಿನಲ್ಲಿ ಸಮಸ್ಯೆಯು ಜಾಗತಿಕ ಸುದ್ದಿಯಾಗಿದೆ.

ಘೋಸ್ಟ್ ಮೋಡ್: ಮಾನಸಿಕವಾಗಿ ಕುಗ್ಗಿದ ಯುವ ಸಿಬ್ಬಂದಿ

ಹಡಗಿನಲ್ಲಿ 5,000 ನೌಕಾ ಸಿಬ್ಬಂದಿಗಳಿದ್ದಾರೆ. ಅದರಲ್ಲಿ 20ರ ಹರೆಯದ ಯುವಕರೂ ಇದ್ದಾರೆ. ಅವರೆಲ್ಲರೂ ತಮ್ಮ ಕುಟುಂಬದಿಂದ ದೂರವಿದ್ದು ದಣಿದಿದ್ದಾರೆ. ಇನ್ನೂ ಹಡಗಿನ ಚಲನವಲನಗಳನ್ನು ರಹಸ್ಯವಾಗಿಡಲು ಘೋಸ್ಟ್ ಮೋಡ್ ಬಳಸಲಾಗುತ್ತದೆ. ಈ ಸಮಯದಲ್ಲಿ ಹೊರ ಜಗತ್ತಿನೊಂದಿಗೆ ಅಥವಾ ಕುಟುಂಬದವರೊಂದಿಗೆ ಮಾತನಾಡಲು ಅವರಿಗೆ ಯಾವುದೇ ಅವಕಾಶ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿರುವ ಜಾಗದಲ್ಲಿ ಮೂಲಭೂತ ಸಮಸ್ಯೆ ಆಗುತ್ತಿದೆ. ಇದು ಅವರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ.


ಅಮೆರಿಕ-ಇರಾನ್ ಸಂಘರ್ಷ ಬಗ್ಗೆ ಜನರು ಪದೇ ಪದೇ ಕೇಳುವ ಪ್ರಶ್ನೆಗಗಳು (FAQs)

1. ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ (USS Gerald R. Ford) ನೌಕೆಯ ವಿಶೇಷತೆಯೇನು?

ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಸುಧಾರಿತ ವಿಮಾನವಾಹಿ ನೌಕೆಯಾಗಿದೆ. ಇದರ ನಿರ್ಮಾಣ ವೆಚ್ಚ ಸುಮಾರು 13 ಬಿಲಿಯನ್ ಡಾಲರ್ (ಅಂದಾಜು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ). ಇದು ಅಮೆರಿಕ ನೌಕಾಪಡೆಯ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಯಾಗಿದೆ.

2. ಯುಎಸ್ ಯುದ್ಧನೌಕೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಯಾವುದು?

ದೀರ್ಘಕಾಲದ ಬಳಕೆಯಿಂದಾಗಿ ನೌಕೆಯಲ್ಲಿ ಶೌಚಾಲಯ ಮತ್ತು ಪ್ಲಂಬಿಂಗ್ (Plumbing) ವ್ಯವಸ್ಥೆ ಹದಗೆಟ್ಟಿದೆ. ವ್ಯಾಕ್ಯೂಮ್ ವೈಫಲ್ಯದಿಂದಾಗಿ ಹಡಗಿನ ಹಲವು ಭಾಗಗಳಲ್ಲಿ ಶೌಚಾಲಯಗಳು ಬಳಕೆಗೆ ಬಾರದಂತಾಗಿದ್ದು, ಸೈನಿಕರು ಮೂಲಭೂತ ಸೌಕರ್ಯಕ್ಕಾಗಿ ಪರದಾಡುವಂತಾಗಿದೆ.

3. ಈ ಹಡಗು ಎಷ್ಟು ದಿನಗಳಿಂದ ಸಮುದ್ರದಲ್ಲಿದೆ?

ಕಳೆದ ವರ್ಷದ ಜೂನ್‌ನಿಂದ ಈ ನೌಕೆ ಸಮುದ್ರದಲ್ಲಿದೆ. ಸಾಮಾನ್ಯ ಆರು ತಿಂಗಳ ಕಾರ್ಯಾಚರಣೆಯ ಬದಲಿಗೆ, ಈಗ ಎಂಟು ತಿಂಗಳು ಕಳೆದರೂ ಇದು ಸಮುದ್ರದಲ್ಲೇ ಬೀಡುಬಿಟ್ಟಿದೆ. ಇದು ಒಟ್ಟು 11 ತಿಂಗಳುಗಳ ಕಾಲ ಸಮುದ್ರದಲ್ಲೇ ಉಳಿಯುವ ಸಾಧ್ಯತೆಯಿದೆ.

4. ಸೈನಿಕರ ಮೇಲೆ ಈ ಸುದೀರ್ಘ ಕಾರ್ಯಾಚರಣೆ ಎಂತಹ ಪರಿಣಾಮ ಬೀರಿದೆ?

ಹಡಗಿನಲ್ಲಿರುವ ಸುಮಾರು 5,000 ನೌಕಾ ಸಿಬ್ಬಂದಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೈರಾಣಾಗಿದ್ದಾರೆ. ಕುಟುಂಬದಿಂದ ದೂರವಿರುವುದು ಮತ್ತು ರಹಸ್ಯ ಕಾರ್ಯಾಚರಣೆಯ (Ghost Mode) ಕಾರಣದಿಂದಾಗಿ ಮನೆಯವರೊಂದಿಗೆ ಸಂಪರ್ಕ ಕಡಿತಗೊಂಡಿರುವುದು ಅವರಲ್ಲಿ ಅತೃಪ್ತಿ ಮೂಡಿಸಿದೆ.

5. ಅಮೆರಿಕ ಇರಾನ್ ವಿರುದ್ಧ ಈ ನೌಕೆಯನ್ನು ಏಕೆ ನಿಯೋಜಿಸಿದೆ?

ಇರಾನ್ ತನ್ನ ಅಣ್ವಸ್ತ್ರ ಒಪ್ಪಂದಕ್ಕೆ ಸಹಕರಿಸದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ. ಇರಾನ್‌ನ ಪ್ರತಿದಾಳಿಯ ಬೆದರಿಕೆಯನ್ನು ಹತ್ತಿಕ್ಕಲು ಮತ್ತು ಮಧ್ಯಪ್ರಾಚ್ಯದಲ್ಲಿ ತನ್ನ ಬಲ ಪ್ರದರ್ಶಿಸಲು ಅಮೆರಿಕ ಈ ಬೃಹತ್ ನೌಕೆಯನ್ನು ಸನ್ನದ್ಧಗೊಳಿಸಿದೆ.

6. 'ಘೋಸ್ಟ್ ಮೋಡ್' (Ghost Mode) ಎಂದರೇನು?

ಯುದ್ಧದ ಸನ್ನಿವೇಶದಲ್ಲಿ ಹಡಗಿನ ಚಲನವಲನಗಳು ಶತ್ರು ರಾಷ್ಟ್ರಗಳಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಎಲ್ಲಾ ರೀತಿಯ ಸಂವಹನ ಮತ್ತು ಲೊಕೇಶನ್ ಸಿಗ್ನಲ್‌ಗಳನ್ನು ಆಫ್ ಮಾಡಲಾಗುತ್ತದೆ. ಈ ಸಮಯದಲ್ಲಿ ಸೈನಿಕರಿಗೆ ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ಇರುವುದಿಲ್ಲ.

7. ಈ ನೌಕೆಯ ದುರಸ್ತಿ ಕಾರ್ಯ ಏಕೆ ವಿಳಂಬವಾಗುತ್ತಿದೆ?

ನೌಕೆಯು ನಿರಂತರವಾಗಿ ಸಮುದ್ರದಲ್ಲೇ ಇರುವುದರಿಂದ ಮತ್ತು ಯುದ್ಧದ ಭೀತಿಯಿಂದಾಗಿ ಅದನ್ನು ಬಂದರಿಗೆ ತಂದು ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಸಣ್ಣಪುಟ್ಟ ರಿಪೇರಿಗಳನ್ನು ಹಡಗಿನ ಒಳಗೇ ಮಾಡಬೇಕಾಗಿದ್ದು, ಪೈಪ್‌ಗಳಲ್ಲಿ ಬಟ್ಟೆ, ಹಗ್ಗದಂತಹ ತ್ಯಾಜ್ಯಗಳು ಸಿಲುಕಿಕೊಳ್ಳುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+