ಗಾಜಾ ಆಸ್ಪತ್ರೆ ಮೇಲೆ ಅಟ್ಯಾಕ್ ಮಾಡಿದ್ದು ಇಸ್ರೇಲ್ ಅಲ್ವಾ?

ನಿನ್ನೆ ರಾತ್ರಿ ಗಾಜಾಪಟ್ಟಿಯ ಅಲ್-ಶಿಫಾ ಆಸ್ಪತ್ರೆ ಮೇಲೆ, ಭೀಕರ ವಾಯು ದಾಳಿ ನಡೆದು 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆದರೆ ಈ ದಾಳಿಯನ್ನ ಇಸ್ರೇಲ್ ಸೇನೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಇಡೀ ಅರಬ್ ದೇಶಗಳು, ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕುವ ಸಮಯದಲ್ಲೇ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಬೇರೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಜೋ ಬೈಡನ್ ಹೇಳಿದ್ದೇನು ಗೊತ್ತಾ?

ಹೌದು, ಅಮೆರಿಕ ಹಾಗೂ ಇಸ್ರೇಲ್ ನಡುವೆ ಬಿಡಿಸಲಾರದ ನಂಟು ಇದೆ. ಹೀಗಾಗಿ ಇದೀಗ ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುವಾಗ ಇಸ್ರೇಲ್ ಪರ ಅಮೆರಿಕ ನಿಂತಿದೆ. ಇದೆಲ್ಲಾ ಒಂದ್ಕಡೆ ಇರಲಿ, ಆದರೆ ಅಮಾಯಕರನ್ನೂ ಇಸ್ರೇಲ್ ಸೇನೆ ಹತ್ಯೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲದರ ನಡುವೆ ನಿನ್ನೆ ರಾತ್ರಿ ದಿಢೀರ್ ಗಾಜಾಪಟ್ಟಿಯ ಮಧ್ಯ ಭಾಗದಲ್ಲಿ ಇರುವ ಆಸ್ಪತ್ರೆ ಮೇಲೆ ದಾಳಿ ನಡೆದಿತ್ತು. ಈ ದಾಳಿಯ ವೇಳೆ ಸುಮಾರು 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಏನು ಹೇಳುತ್ತಿದ್ದಾ ಗೊತ್ತಾ?

hospital-attack-done-by-other-team

ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕ!

ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದಿಢೀರ್ ವಿಸಿಟ್ ಕೊಟ್ಟಿದ್ದಾರೆ. ವಿಶೇಷ ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಂದಿದ್ದು, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಜೋ ಬೈಡನ್ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ನಗರದ ಮೇಲೆ ನಡೆದಿರುವ ದಾಳಿ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಈ ತಪ್ಪನ್ನು ನೀವು ಮಾಡಿಲ್ಲ ಬಿಡಿ, ಬೇರೆಯವರು ದಾಳಿ ಮಾಡಿದ್ದಾರೆ ಎನ್ನುವ ಮೂಲಕ ಇಸ್ರೇಲ್ ಬೆನ್ನಿಗೆ ನಿಂತಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ, ಇಸ್ರೇಲ್ ಸೇನೆ ಮರುದಾಳಿ ಶುರುಮಾಡಿದೆ. ನೋಡ ನೋಡುತ್ತಲೇ ಗಾಜಾದಲ್ಲಿ 3500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 12,500 ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, 500 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

hospital-attack-done-by-other-team

ಅರಬ್ ದೇಶಗಳಿಗೆ ಸಿಕ್ಕಾಪಟ್ಟೆ ಕೋಪ!

ಇದೇ ವೇಳೆ ಅರಬ್ ದೇಶಗಳ ಜೊತೆ ಅಮೆರಿಕ ಅಧ್ಯಕ್ಷ ಬೈಡನ್ ನಿಗದಿ ಮಾಡಿದ್ದ ಮಹತ್ವದ ಸಭೆ ರದ್ದಾಗಿದೆ. ಇಡೀ ಜಗತ್ತಿಗೆ ಇಸ್ರೇಲ್ & ಹಮಾಸ್ ಯುದ್ಧ ಗ್ಯಾಂಗ್ರಿನ್ ರೀತಿ ಹಬ್ಬುವ ಭೀತಿ ಮಧ್ಯೆ ದಿಢೀರ್ ಜೋ ಬೈಡನ್ ಇಸ್ರೇಲ್‌ಗೆ ಬಂದು ಇಳಿದಿದ್ದಾರೆ. ಈಗ ಇಸ್ರೇಲ್ ಪರ ಮಾತನಾಡಿದ ಜೋ ಬೈಡನ್, ಆಸ್ಪತ್ರೆ ಮೇಲಿನ ದಾಳಿ ನಿಮ್ಮಿಂದ ಆಗಿಲ್ಲ ಬಿಡಿ ಎಂದಿದ್ದಾರಂತೆ. ಇದು ಸಹಜವಾಗಿ ಅರಬ್ ದೇಶಗಳಿಗೆ ಮತ್ತಷ್ಟು ಅಸಮಾಧಾನ ತರುವುದು ಪಕ್ಕಾ.

ಎಲ್ಲೆಲ್ಲೂ ಹದ್ದಿನ ಕಣ್ಣಿಟ್ಟ ಸೇನೆ

ಹಮಾಸ್ ಯಾವ ಸಮಯದಲ್ಲಿ ಬೇಕಾದರೂ ಇಸ್ರೇಲ್ ಮೇಲೆ ಮತ್ತೆ ಭೀಕರ ಅಟ್ಯಾಕ್ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅಲರ್ಟ್ ಆದ ಇಸ್ರೇಲ್‌ನ ಭದ್ರತಾ ಪಡೆ, ಇಸ್ರೇಲ್ ರಾಜಧಾನಿಗೆ ಭಾರಿ ಪ್ರಮಾಣದ ಭದ್ರತೆ ಒದಗಿಸಿದೆ. ಅಮೆರಿಕ ಅಧ್ಯಕ್ಷರಿಗೆ ಏನು ಆಗದಂತೆ ಈಗ ಹದ್ದಿನ ಕಣ್ಣಿಟ್ಟಿದೆ. ಟೆಲ್ ಅವೀವ್ ಮೇಲೆ ಯಾವುದೇ ರೀತಿ ಸಂಭಾವ್ಯ ದಾಳಿ ನಡೆದರೂ ತಡೆಯುವ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದ್ರೆ ಇದೀಗ ಬೈಡನ್ ನೀಡಿರುವ ಹೇಳಿಕೆ ಬಗ್ಗೆ ಅರಬ್ ದೇಶಗಳು ಯಾವ ರೀತಿ ಪ್ರತಿಕ್ರಿಯೆ ನೀಡಲಿವೆ? ಅನ್ನೋದನ್ನ ಕಾದು ನೋಡಬೇಕಿದೆ. ಅಕಸ್ಮಾತ್ ಈ ಮೂಲಕ ಅರಬ್ ದೇಶಗಳು ಹಾಗೂ ಅಮೆರಿಕ ನಡುವೆ ಕೋಪ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+