ಇಲ್ಲಿನ ಕೆರೆಗಳಲ್ಲಿ ಈಜಾಡಿದರೆ ಸಾವು ಗ್ಯಾರಂಟಿ: ಯಾಕೆ ಗೊತ್ತಾ?
ವಾಷಿಂಗ್ಟನ್: ಬೇಸಿಗೆ ಅಂತಾ ಕೆರೆಯಲ್ಲಿ ಈಜೋದು, ಸೆಕೆಯಿಂದ ರಿಲೀಫ್ ಪಡೆಯೋದು ಮನುಷ್ಯರು ಮಾಡುವ ಮಾಮೂಲಿ ಕೆಲಸ. ಹಾಗಂತಾ ನೀವು ಅಮೆರಿಕದಲ್ಲಿನ ಕೆರೆಗಳಲ್ಲಿ ಈಜಾಡಲು ಹೋದರೆ ಸಾವು ಪಕ್ಕಾ. ಯಾಕಂದ್ರೆ ಅಮೆರಿಕದಲ್ಲಿ ಕೆರೆಗಳು ಕೂಡ ಸಾವಿನ ಕೂಪವಾಗಿ ಬದಲಾಗಿವೆ. ಆ ಭಯಾನಕ ಪರಿಸ್ಥಿತಿಯ ಸಂಪೂರ್ಣ ವರದಿ ಇಲ್ಲಿದೆ.
ಮನುಷ್ಯನ ಮೇಲೆ ಎಂತೆಂಥ ಜೀವಿ, ವೈರಸ್ & ಬ್ಯಾಕ್ಟೀರಿಯಾ ದಾಳಿ ನಡೆಸುತ್ತವೋ ಅದನ್ನ ದೇವರೇ ಬಲ್ಲ. ಅದರಲ್ಲೂ ಅಮೆರಿಕದಲ್ಲಿ ಮನುಷ್ಯನ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಕೊರೊನಾ ಸಮಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಬಲಿಯಾಗಿದ್ದರು. ಇದೀಗ ಮತ್ತೊಂದು ವಿನಾಶಕಾರಿ ವೈರಸ್ ಅಥವಾ ಸೂಕ್ಷ್ಮಾಣು ಜೀವಿ ಅಮೆರಿಕದ ಪ್ರಜೆಗಳ ಜೀವ ತೆಗೆಯುತ್ತಿದೆ. ನೀರಿನ ಮೂಲಕ ದೇಹ ಸೇರುತ್ತಿರುವ ಮೆದುಳು ತಿನ್ನುವ 'ಹುಳು' ಮನುಷ್ಯರ ಪ್ರಾಣ ತೆಗೆಯುತ್ತಿದೆ. ಹೀಗಾಗಿ ಅಮೆರಿಕದ ಕೆರೆಗಳಲ್ಲಿ ಈಜಾಡಲು ನಿಷೇಧ ಹೇರಲಾಗಿದ್ದು, ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

ಮೂಗಲ್ಲಿ ನೀರು ಹೋದರೆ ಖತಂ!
ಮೆದುಳು ತಿನ್ನುವ ಅಮೀಬಾ ಬರಸಿಡಿಲಿನಂತೆ ಅಪ್ಪಳಿಸಿದೆ. 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಆರ್ಭಟದ ಬಳಿಕ ಮೆದುಳು ತಿನ್ನುವ 'ಹುಳು'ಗಳ (Brain Eating Amoeba) ಆರ್ಭಟವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ದಕ್ಷಿಣ ಅಮೆರಿಕದ ಸೂಕ್ಷ್ಮಾಣು ಜೀವಿ, ಉತ್ತರದಲ್ಲೂ ಆವರಿಸಿದೆ. ಹೀಗಾಗಿ ಕೋಟ್ಯಂತರ ಅಮೆರಿಕನ್ನರು ಮತ್ತೊಮ್ಮೆ ಸಾವಿನ ಸುಳಿಗೆ ಸಿಲುಕಿದ್ದಾರೆ. ಅಮೆರಿಕದ ಸಾಕಷ್ಟು ಕೆರೆಗಳಲ್ಲಿ ಸ್ನಾನ ಮಾಡದಂತೆ ಸೂಚನೆ ನೀಡಲಾಗಿದ್ದು, ಮೂಗಿನ ಒಳಗೆ ನೀರು ಹಾಕಿ ಸಮಸ್ಯೆಗೆ ತುತ್ತಾಗಬೇಡಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕೆರೆಗಳ ಬಳಿ ಡೇಂಜರ್ ಬೋರ್ಡ್
ಉತ್ತರ ಅಮೆರಿಕದ ಹಲವು ಕಡೆ ವ್ಯಾಪಕವಾಗಿ ಮೆದುಳು ತಿನ್ನುವ ವೈರಸ್ ಹರಡುತ್ತಿದೆ. ವೈರಸ್ ಬದುಕಿ ಉಳಿಯಲು ಬೆಚ್ಚಗಿನ ನೀರು ಅಗತ್ಯ. ಉತ್ತರ ಅಮೆರಿಕದಲ್ಲಿ ಹವಾಮಾನ ವೈಪರಿತ್ಯದ ಪರಿಣಾಮ ಚಳಿ ಮಾಯವಾಗುತ್ತಿದ್ದು ಹಾಗೇ ಬಿಸಿ ಹೆಚ್ಚಾಗುತ್ತಿದೆ. ಹೀಗಾಗಿ ಉತ್ತರ ಅಮೆರಿಕ ರಾಜ್ಯಗಳ ಮಣ್ಣು ಹಾಗೂ ಶುದ್ಧ ನೀರಲ್ಲಿ ಮೆದುಳು ತಿನ್ನುವ ಜೀವಿ ಹೆಚ್ಚಾಗಿ ಪತ್ತೆಯಾಗಿದೆ. ಜೊತೆಗೆ ಮನೆ ನೀರಿನ ಟ್ಯಾಂಕರ್ ಮತ್ತು ಹೀಟರ್ ಅಥವಾ ಪೈಪ್‌ಗಳಲ್ಲೂ ಮೆದುಳು ತಿನ್ನುವ ವೈರಸ್ ಕಂಡುಬರುತ್ತಿದೆ. ಹೀಗೆ ದಕ್ಷಿಣ ಅಮೆರಿಕದಲ್ಲೂ ಹಾವಳಿ ಎಬ್ಬಿಸಿದ್ದ ಸೂಕ್ಷ್ಮಾಣು ಜೀವಿ, ಉತ್ತರ ಅಮೆರಿಕದ ಜನರನ್ನೂ ನಡುಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಗಳ ಬಳಿ ಡೇಂಜರ್ ಬೋರ್ಡ್ ಹಾಕಲಾಗಿದೆ.
ಮಕ್ಕಳು ಹೊರಗೆ ಹೋದರೆ ಆತಂಕ
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಒಂದು ಏಕಕೋಶ ಜೀವಿ, ಅಂದ್ರೆ ಇದು ಅಮೀಬಾ. ಮೊದಲು ಮನುಷ್ಯನ ಮೂಗಿನ ಒಳಗೆ ಪ್ರವೇಶ ಮಾಡುವ ವೈರಸ್, ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೂ ನುಸುಳುತ್ತದೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳನ್ನ ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವ ತೆಗೆಯುತ್ತದೆ. ಹೀಗಾಗಿ ನಾಗ್ಲೆರಿಯಾ ಫೌಲೆರಿ ಡೆಡ್ಲಿ ಆಗಿದ್ದು, ಅಮೆರಿಕದಲ್ಲಿ ಪೋಷಕರು ಮಕ್ಕಳನ್ನ ಕೆರೆಗಳಲ್ಲಿ ಈಜಲು ಬಿಡೋದಕ್ಕೂ ಯೋಚಿಸುತ್ತಿದ್ದಾರೆ. ಈಗಾಗಲೇ ಹಲವರು ಪ್ರಾಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ ಅಮೆರಿಕದ ಸಮುದ್ರ ತೀರಗಳು ಮತ್ತು ನದಿಯಲ್ಲೂ ಮೆದುಳು ತಿನ್ನುವ ಅಮೀಬಾ ಕಂಡುಬಂದಿದೆ.
ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದ್ರೆ ಮೆಲ್ಲಗೆ ಕೆಲಸ ಆರಂಭಿಸುತ್ತದೆ. ಸೂಕ್ಷ್ಮಾಣು ಜೀವಿ ಕೆಲಸ ಆರಂಭಿಸಿದ ಒಂದೆರಡು ದಿನದಲ್ಲಿ ಜ್ವರ & ತಲೆನೋವು ಶುರು ಆಗುತ್ತದೆ. ಹೀಗೆ ಆರಂಭವಾದ ಸೋಂಕಿನ ಲಕ್ಷಣ ವಾಂತಿಯಾಗುವಂತೆ ಮಾಡಿ, ಮನುಷ್ಯನ ರೋಗನಿರೋಧಕ ಶಕ್ತಿ ಕುಂದಿಸುತ್ತದೆ. 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿಯೇ ಅಮೆರಿಕದ ಕೆರೆಗಳ ನೀರನ್ನು ಪರೀಕ್ಷೆಗೆ ಒಳಪಡಿಸಿ, ಸೂಕ್ಷ್ಮಾಣು ಜೀವಿ ಕೊಲೆಗೆ ಅಮೆರಿಕದ ಆರೋಗ್ಯ ಇಲಾಖೆ ಸುಪಾರಿ ನೀಡಿದೆ.












Click it and Unblock the Notifications