• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

|

ವಾಷಿಂಗ್ಟನ್, ಜೂನ್ 1: ಅಮೆರಿಕದಲ್ಲಿರುವ ಸ್ಥಳೀಯ ಪಾಕಿಸ್ತಾನದ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಲು ಅಮೆರಿಕ ಸರ್ಕಾರ ಆದೇಶಿಸಿದೆ.

ಅಮೆರಿಕ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಅಮೆರಿಕದಲ್ಲಿ ವಾಸಿಸುತ್ತಿರುವ 20ಕ್ಕೂ ಅಧಿಕ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಲಾಗಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಟ್ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಮೇಲೆ ಇಂತಹ ಕಠಿಣ ಕ್ರಮಗಳು ಜರುಗುತ್ತಲೇ ಇವೆ. ಈಗ ಮುಂದುವರೆದ ಭಾಗವಾಗಿ ತೆರಿಗೆ ವಿನಾಯಿತಿ ರದ್ದುಗೊಳಿಸಲಾಗಿದೆ.

ಈಗಾಗಲೇ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಗಳು ವಾಷಿಂಗ್ಟನ್‌ನ 25 ಕಿ.ಮೀ ವ್ಯಾಪ್ತಿಯ ಹೊರಗೆ ಕೆಲಸ ಮಾಡಬಾರದು ಎಂದು ಆದೇಶಿಸಿತ್ತು.

ಇದಲ್ಲದೆ ಪಾಕಿಸ್ತಾನಕ್ಕೆ ನೀಡುತ್ತಿರುವ ಆರ್ಥಿಕ ನೆರವನ್ನೂ ಕೂಡ ಅಮೆರಿಕ ನಿಲ್ಲಿಸಿತ್ತು.ಈಗ ಈ ನಿರ್ಧಾರವು ಪಾಕಿಸ್ತಾನದ ಮೇಲಿನ ಇನ್ನೊಂದು ಕ್ರಮವಾಗಿದೆ. ಈ ನಿರ್ಧಾರಕ್ಕೆ ಸಂಬಂಧಿಸಿ ಪಾಕಿಸ್ತಾನ ಸರ್ಕಾರ ಅಧಿಕೃತ ತೀರ್ಮಾನ ನೀಡಿಲ್ಲ.

English summary
In a move likely to plunge the already strained relations between the United States and Pakistan to a new low, Washington on Friday announced that it has withdrawn its tax exemption programme for Pakistani diplomats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X