ಪಾಕ್ ಸೇನಾ ವೆಚ್ಛ ಮರುಪಾವತಿ ಇಲ್ಲ: ಅಮೆರಿಕ ಖಡಕ್ ನಿರ್ಧಾರ

Posted By:
Subscribe to Oneindia Kannada

ವಾಷಿಂಗ್ಟನ್, ಜುಲೈ 22: ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡಬೇಕಿದ್ದ 'ಸೇನಾ ವೆಚ್ಛದ ಮರುಪಾವತಿ'ಯನ್ನು ನೀಡಲಾಗುವುದಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಪೆಂಟಗನ್ ನ ವಕ್ತಾರ ಆ್ಯಡಮ್ ಸ್ಟಂಪ್, ''2016ರಲ್ಲಿ ಅಮೆರಿಕವು, ಪಾಕಿಸ್ತಾನಕ್ಕೆ ತನ್ನಲ್ಲಿರುವ ಹಕ್ಕಾನಿ ಉಗ್ರರ ಜಾಲವನ್ನು ಹತ್ತಿಕ್ಕುವಂತೆ ಸೂಚಿಸಿತ್ತು. ಅದರಂತೆ, ಪಾಕಿಸ್ತಾನ ತನ್ನ ಸ್ವಂತ ಖರ್ಚಿನಲ್ಲಿ ಹಕ್ಕಾನಿ ಉಗ್ರ ಜಾಲವನ್ನು ದಮನ ಮಾಡಬೇಕು. ಆನಂತರ, ಖರ್ಚನ್ನು ಅಮೆರಿಕ ನೀಡುವುದಾಗಿ ಹೇಳಿತ್ತು'' ಎಂದರು.

US Will Not Pay Pakistan For Military Reimbursements: Pentagon

ನಂತರ, ತಮ್ಮ ಮಾತು ಮುಂದುವರಿಸಿದ ಸ್ಟಂಪ್, ''ಪಾಕಿಸ್ತಾನ ಸರ್ಕಾರ ಹಕ್ಕಾನಿ ಜಾಲದ ವಿರುದ್ಧ ಸಮರ್ಪಕ ಕ್ರಮ ಕೈಗೊಂಡಿಲ್ಲ. ಆದರೆ, ಸೇನಾ ವೆಚ್ಛವನ್ನು ಮಾತ್ರ ತೋರಿಸುತ್ತಿದೆ. ಹಾಗಾಗಿ, ನಾವು (ಅಮೆರಿಕ) ಆ ವೆಚ್ಛವನ್ನು ನೀಡುವುದಿಲ್ಲ'' ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Pentagon will not make the remaining military reimbursements to Pakistan for fiscal year 2016 after US Defence Secretary Jim Mattis told Congress Islamabad had not taken sufficient action against the Haqqani network, a US official said on July 21, 2017.
Please Wait while comments are loading...