ಭಾರತದಲ್ಲಿ ಎಚ್ಚರಿಕೆಯಿಂದ ಇರುವಂತೆ ಅಮೆರಿಕ ಪ್ರಜೆಗಳಿಗೆ ಸೂಚನೆ
ಐಎಸ್ ಉಗ್ರ ಸಂಘಟನೆ ಭಾರತದಲ್ಲಿ ಕೆಲ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿವೆ. ಇದರಿಂದ ಎಚ್ಚರಿಕೆಯಿಂದ ಇರಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ರಾತ್ರಿ ಸೂಚನೆ ಹೊರಡಿಸಿದೆ.
ನವದೆಹಲಿ, ನವೆಂಬರ್.2 : ಭಾರತದಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸೂಚಿಸಿದೆ.
ಉಗ್ರ ಸಂಘಟನೆ ಐಎಸ್ ಭಾರತದಲ್ಲಿ ಕೆಲವು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಯುಎಸ್ಎ ರಾಯಭಾರಿ ಕಚೇರಿ ಮಂಗಳವಾರ ರಾತ್ರಿ ತನ್ನ ನಾಗರಿಕರಿಗೆ ಎಚ್ಚರಿಕೆ ರವಾನಿಸಿದೆ.

ಕೆಲವೊಂದು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಐಎಸ್ ದಾಳಿ ನಡೆಸಲಿದೆ ಎಂಬ ಬಗ್ಗೆ ಭಾರತದ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಅಂಥ ಸ್ಥಳಗಳಿಂದ ದೂರವಿರಬೇಕು ಎಂದು ಹೇಳಿದೆ.
ಅಮೆರಿಕದ ಎಲ್ಲ ನಾಗರಿಕರೂ ಗರಿಷ್ಠ ಪ್ರಮಾಣದ ಎಚ್ಚರಿಕೆ ಕಾಯ್ದುಕೊಳ್ಳಬೇಕು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮಂಗಳವಾರ ರಾತ್ರಿ ಹೊರಡಿಸಿರುವ ಸಲಹೆಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ಪಾಶ್ಚಿಮಾತ್ಯ ಅದರಲ್ಲೂ ಅಮೆರಿಕ ವಿರೋ ಇಸ್ಲಾಮಿಕ್ ತೀವ್ರವಾದಿಗಳು ಹೆಚ್ಚಾಗಿದ್ದಾರೆಂದು ಸೂಚಿಸಲಾಗಿದೆ.












Click it and Unblock the Notifications