ಉಕ್ರೇನ್‌ ಯುದ್ಧದಲ್ಲಿ ಚೀನಾದ ಪಾತ್ರದ ಬಗ್ಗೆ ಯುಎಸ್‌ ತಪ್ಪು ಮಾಹಿತಿ ಹಬ್ಬಿಸುತ್ತಿದೆ: ಬೀಜಿಂಗ್‌

ಬೀಜಿಂಗ್‌, ಮಾರ್ಚ್ 14: ಉಕ್ರೇನ್‌ನ ಮೇಲೆ ರಷ್ಯಾ ದಾಳಿ ಮಾಡಿ ಸಾಕಷ್ಟು ಹಾನಿ ಉಂಟಾಗುತ್ತಿದೆ. ಈ ನಡುವೆ ಚೀನಾ ಹಾಗೂ ಯುಎಸ್‌ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿಬಂದಿದೆ. ಉಕ್ರೇನ್ ಯುದ್ಧದಲ್ಲಿ ಬೀಜಿಂಗ್ ವಹಿಸುತ್ತಿರುವ ಪಾತ್ರದ ಬಗ್ಗೆ ಯುಎಸ್ 'ತಪ್ಪು ಮಾಹಿತಿ' ಹರಡುತ್ತಿದೆ ಎಂದು ಚೀನಾ ಆರೋಪ ಮಾಡಿದೆ.

ರೋಮ್‌ನಲ್ಲಿ ಉಭಯ ದೇಶಗಳ ರಾಯಭಾರಿಗಳ ನಡುವಿನ ಮಾತುಕತೆಗೆ ಮುನ್ನ ಈ ಹೇಳಿಕೆ ಸುದ್ದಿಯಾಗಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, "ಯುಎಸ್ ಯುಕ್ರೇನ್ ವಿಷಯದಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುತ್ತಿದೆ," ಎಂದು ಹೇಳಿದ್ದಾರೆ.

ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ಬ್ರೀಫಿಂಗ್‌ನಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಆರಂಭ ಮಾಡಿದ ಬಳಿಕ ಚೀನಾ ನೇರವಾಗೊ ರಷ್ಯಾವನ್ನು ಎಲ್ಲೂ ಕೂಡಾ ಖಂಡನೆ ಮಾಡಿಲ್ಲ. ಹಾಗೆಯೇ ಯಾವುದೇ ನಿರ್ಬಂಧ ಹೇರಿಲ್ಲ. ಈ ನಡುವೆ ರಷ್ಯಾವು ಚೀನಾದ ಬಳಿ ಮಿಲಿಟರಿ ಸಹಾಯ ಕೋರಿದೆ ಎಂಬ ಸುದ್ದಿಯಾಗಿದೆ.

US Spreading Disinformation Over Chinas Role In Ukraine War Says Beijing

ಚೀನಾದ ಬಳಿ ಮಿಲಿಟರಿ ಸಹಾಯ ಕೋರಿದ ರಷ್ಯಾ?

ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಬೆಂಬಲಿಸಲು ಡ್ರೋನ್‌ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾಕ್ಕೆ ಮನವಿ ಮಾಡಿದೆ ಎಂದು ಯುಎಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ನಂತರ, ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‌ಗಳು ಮೇಲೆ ನಿರ್ಬಂಧವನ್ನು ವಿಧಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ನಿರ್ಬಂಧವನ್ನು ಜಾರಿಗೆ ತಂದಿದೆ. ಜೊತೆಗೆ ರಷ್ಯಾವನ್ನು SWIFT ಹಣಕಾಸು ವ್ಯವಸ್ಥೆಯಿಂದ ಹೊರಹಾಕಲಾಗಿದೆ.

ಈ ನಡುವೆ ರಷ್ಯಾವು ಚೀನಾದಿಂದ ಮಿಲಿಟರಿ ನೆರವು ಕೋರಿದೆ ಎಂದು ಯುಎಸ್‌ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು, ರಷ್ಯಾಕ್ಕೆ ಸಹಾಯ ಮಾಡಲು ಚೀನಾ ಸಿದ್ಧರಿರುವ ಯಾವುದೇ ಸಲಹೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು.

ಈ ಬಗ್ಗೆ ಬ್ರಿಫಿಂಗ್‌ನಲ್ಲಿ ಹೇಳಿಕೆ ನೀಡಿರುವ ಚೀನಾವು ಮಾಹಿತಿ ನೀಡಿದೆ. "ಯುಎಸ್ ಯುಕ್ರೇನ್ ವಿಷಯದಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುತ್ತಿದೆ," ಎಂದು ತಿಳಿಸಿದೆ.

ಈ ಮಧ್ಯೆ ಉಕ್ರೇನ್ ಪಶ್ಚಿಮದಲ್ಲಿರುವ ವಿಮಾನ ನಿಲ್ದಾಣದ ಮೇಲೆ ರಷ್ಯಾವು ವಾಯುದಾಳಿಗಳನ್ನು ಮಾಡಿದೆ. ರಾಜಧಾನಿಯ ಈಶಾನ್ಯದಲ್ಲಿರುವ ಚೆರ್ನಿಹಿವ್‌ನಲ್ಲಿ ಭಾರೀ ಶೆಲ್ ದಾಳಿ ಮತ್ತು ದಕ್ಷಿಣದ ಪಟ್ಟಣವಾದ ಮೈಕೊಲೈವ್ ಮೇಲೆ ದಾಳಿಗಳು ನಡೆದಿವೆ. ಫೆಬ್ರವರಿ 24 ರಂದು ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಕಪ್ಪು ಸಮುದ್ರದ ಬಂದರು ನಗರವಾದ ಮರಿಯುಪೋಲ್‌ನ 2,500 ಕ್ಕೂ ಹೆಚ್ಚು ನಿವಾಸಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಯುಎನ್‌ಎಚ್‌ಸಿಆರ್‌ ಶನಿವಾರದ ವೇಳೆಗೆ ಸುಮಾರು 2.7 ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ, ಅವರಲ್ಲಿ ಸುಮಾರು 1.7 ಮಿಲಿಯನ್ ಜನರು ಪೋಲೆಂಡ್‌ಗೆ ಹೋಗುತ್ತಿದ್ದಾರೆ ಎಂದು ತಿಳಿಸಿದೆ. ಇನ್ನು ರಷ್ಯಾ ದಾಳಿಯಿಂದಾಗಿ ಮರಿಯುಪೋಲ್‌ನಲ್ಲಿ ನಾಗರಿಕರ ಸಾವಿನ ಸಂಖ್ಯೆ 2,500 ಮೀರಿದೆ ಎಂದು ನೆಕ್ಸ್ಟಾ ವರದಿ ಮಾಡಿದೆ. ರಷ್ಯಾದ ಶೆಲ್ ದಾಳಿಗೆ ಬೆಂಕಿ ತಗುಲಿ ಕಟ್ಟಡ ಕುಸಿದು ಕೀವ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ನಡುವೆ ರಷ್ಯಾದ ಪಡೆಗಳು ಉಕ್ರೇನ್‌ನ ಕಪ್ಪು ಸಮುದ್ರದ ಕರಾವಳಿಯನ್ನು ನಿರ್ಬಂಧಿಸಿವೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+