ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50ನೇ ದಿನದ ವಿಶೇಷ: ರಷ್ಯಾ ಕಾದಾಟ V/s ಉಕ್ರೇನ್‌ ಬತ್ತಳಿಕೆಗೆ ಯುಎಸ್ ಶಸ್ತ್ರಾಸ್ತ್ರ!

|
Google Oneindia Kannada News

ಕೀವ್, ಏಪ್ರಿಲ್ 14: ಉಕ್ರೇನ್‌ನ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಶುರು ಮಾಡಿ 50 ದಿನಗಳೇ ಕಳೆದು ಹೋಗಿದೆ. ಇದರ ಮಧ್ಯೆ ಉಕ್ರೇನ್ ಸೇನೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನೀಡಿರುವ ಒಂದೇ ಒಂದು ಭರವಸೆಯು ಆನೆಬಲವನ್ನು ನೀಡಿದೆ.

ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುಎಸ್ ನೆರವು ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹೊಸ ಹೂವಿಟ್ಜರ್ ಮತ್ತು ಹೆಲಿಕಾಪ್ಟರ್ ಸೇರಿದಂತೆ ಭಾರಿ ಪ್ರಮಾಣದ ಸೇನಾ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ನೀಡುವುದಾಗಿ ಅವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಹರಿದ ನಾಗರಿಕರ ನೆತ್ತರು; 39 ಜನರ ಹತ್ಯೆ ಬಗ್ಗೆ ರಷ್ಯಾ ಹೇಳುವುದೇನು?ಉಕ್ರೇನ್‌ನಲ್ಲಿ ಹರಿದ ನಾಗರಿಕರ ನೆತ್ತರು; 39 ಜನರ ಹತ್ಯೆ ಬಗ್ಗೆ ರಷ್ಯಾ ಹೇಳುವುದೇನು?

ಉಕ್ರೇನ್‌ಗೆ ಹೆಚ್ಚಿನ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅನ್ನು ಭೇಟಿ ಮಾಡುವುದಕ್ಕೆ ಯುಎಸ್ ಉನ್ನತ ಮಟ್ಟದ ಅಧಿಕಾರಿಯೊಬ್ಬರನ್ನು ಕಳುಹಿಸಲು ಯೋಜನೆ ಹಾಕಿಕೊಂಡಿದೆ. ಸದ್ಯ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೇಶವನ್ನು ಪ್ರತಿನಿಧಿಸುವ ಪ್ರತಿನಿಧಿಗಳಾಗಿದ್ದಾರೆ. ಆದರೆ ಇವರ ಬದಲಿಗೆ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅಥವಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಂತಹ ಅಧಿಕಾರಿಗಳು ಕೀವ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.

ಅಮೆರಿಕಾದಿಂದ ಉಕ್ರೇನ್‌ಗೆ ಭಾರೀ ಶಸ್ತ್ರಾಸ್ತ್ರ ಪೂರೈಕೆ

ಅಮೆರಿಕಾದಿಂದ ಉಕ್ರೇನ್‌ಗೆ ಭಾರೀ ಶಸ್ತ್ರಾಸ್ತ್ರ ಪೂರೈಕೆ

ರಷ್ಯಾ ಯುದ್ಧ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಯುಎಸ್ ಉಕ್ರೇನ್‌ಗೆ ಹೆಚ್ಚಿನ ಶಕ್ತಿ ಸಾಮರ್ಥ್ಯಗಳೊಂದಿಗೆ ಭಾರೀ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಇದಕ್ಕೆ ಉಕ್ರೇನ್‌ ಮಾಡಿರುವ ವಿನಂತಿಯಷ್ಟೇ ಕಾರಣವಲ್ಲ. ಅದರ ಬದಲಿಗೆ ಆಗ್ನೇಯ ಉಕ್ರೇನ್‌ನಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸುವ ರಷ್ಯಾದ ಯೋಜನೆಗಳಿಗೆ ಪ್ರತಿಕ್ರಿಯೆಯೂ ಆಗಿದೆ. ಈ ಯೋಜನೆ ಅಡಿಯಲ್ಲಿ 11 Mi-17 ಹೆಲಿಕಾಪ್ಟರ್‌ಗಳು, 18 155 mm ಹೊವಿಟ್ಜರ್ ಫಿರಂಗಿಗಳು, 300ಕ್ಕೂ ಹೆಚ್ಚಿನ ಸ್ವಿಚ್‌ಬ್ಲೇಡ್ ಡ್ರೋನ್‌ಗಳು ಮತ್ತು ಒಳಬರುವ ಬೆಂಕಿಯನ್ನು ಪತ್ತೆಹಚ್ಚಲು ಮತ್ತು ಅದರ ಮೂಲವನ್ನು ಗುರುತಿಸುವ ಸಾಮರ್ಥ್ಯವಿರುವ ರಾಡಾರ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಹೃದಯಪೂರ್ವಕ ಧನ್ಯವಾದ ತಿಳಿಸಿದ ವೊಲೊಡಿಮಿರ್ ಝೆಲೆನ್ಸ್ಕಿ

ಹೃದಯಪೂರ್ವಕ ಧನ್ಯವಾದ ತಿಳಿಸಿದ ವೊಲೊಡಿಮಿರ್ ಝೆಲೆನ್ಸ್ಕಿ

ಉಕ್ರೇನ್‌ಗೆ 800 ಮಿಲಿಯನ್ ಡಾಲರ್ ಸೇನಾ ನೆರವು ನೀಡಿದ ಯುಎಸ್ ಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ "ಹೃದಯಪೂರ್ವಕ ಧನ್ಯವಾದ" ತಿಳಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಪೋಲೆಂಡ್, ಎಸ್ಟೋನಿಯಾ, ಲಿಥುವೇನಿಯಾ ಮತ್ತು ಲಾಟ್ವಿಯಾ ಅಧ್ಯಕ್ಷರ ಬುಧವಾರದ ಭೇಟಿಗೆ ಧನ್ಯವಾದ ಅರ್ಪಿಸುವುದಾಗಿ ಝೆಲೆನ್ಸ್ಕಿ ಹೇಳಿದರು. ನಮಗೆ ಶಸ್ತ್ರಾಸ್ತ್ರಗಳನ್ನು ನೀಡಲು ಹಿಂಜರಿಯದವರು, ನಿರ್ಬಂಧಗಳನ್ನು ವಿಧಿಸಬೇಕೇ ಎಂದು ಅನುಮಾನಿಸದವರ ಮಧ್ಯೆ ಈ ನಾಯಕರು ಮೊದಲ ದಿನದಿಂದ ನಮಗೆ ಸಹಾಯ ಮಾಡಿದ್ದಾರೆ," ಎಂದು ಹೇಳಿದರು.

ಯುಎಸ್ ಅಧ್ಯಕ್ಷ ಜೋ ಬೈಡೆನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ಹೊಸ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದು, ರಷ್ಯಾದ ವಿರುದ್ಧ ಇನ್ನೂ ಕಠಿಣ ನಿರ್ಬಂಧಗಳನ್ನು ವಿಧಿಸುವುದು ಮತ್ತು ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳನ್ನು ಮಾಡಿದ ರಷ್ಯಾದ ಸೈನಿಕರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಕುರಿತು ಚರ್ಚಿಸಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದರು.

ಉಕ್ರೇನ್‌ಗೆ ಭೇಟಿ ನೀಡಿದ ನಾಲ್ಕು ರಾಷ್ಟ್ರಗಳು

ಉಕ್ರೇನ್‌ಗೆ ಭೇಟಿ ನೀಡಿದ ನಾಲ್ಕು ರಾಷ್ಟ್ರಗಳು

ರಷ್ಯಾದ ಅಕ್ಕಪಕ್ಕದಲ್ಲಿರುವ ನಾಲ್ಕು ದೇಶಗಳ ಅಧ್ಯಕ್ಷರು ಬುಧವಾರ ಉಕ್ರೇನ್‌ಗೆ ಭೇಟಿ ನೀಡಿದರು. ಆ ಮೂಲಕ ಯುದ್ಧ ಸ್ಥಿತಿಯಿಂದ ಹೈರಾಣಾದ ದೇಶಕ್ಕೆ ತಮ್ಮ ಬೆಂಬಲ ಸೂಚಿಸಿದರು. ಉಕ್ರೇನ್ ನೆಲದಲ್ಲಿ ಹೆಚ್ಚು ಹಾನಿಗೊಳಗಾದ ಕಟ್ಟಡಗಳನ್ನು ಪರಿಶೀಲಿಸಿದರು. ರಷ್ಯಾದ ಪಡೆಗಳು ನಡೆಸಿದ ಯುದ್ಧ ಅಪರಾಧಗಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಿದರು. ನ್ಯಾಟೋದ ಪೂರ್ವ ಪಾರ್ಶ್ವದಲ್ಲಿರುವ ಪೋಲೆಂಡ್, ಲಿಥುವೇನಿಯಾ, ಲಾಟ್ವಿಯಾ ಮತ್ತು ಎಸ್ಟೋನಿಯಾದ ಅಧ್ಯಕ್ಷರ ಭೇಟಿಯ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಈ ನಾಲ್ಕು ರಾಷ್ಟ್ರಗಳ ಪೈಕಿ ಮೂರು ರಾಷ್ಟ್ರಗಳು ಈ ಹಿಂದೆ ಉಕ್ರೇನ್ ರೀತಿಯಲ್ಲಿಯೇ ರಷ್ಯಾದ ಸೋವಿಯತ್ ಭಾಗವಾಗಿದ್ದವು.

ಉಕ್ರೇನ್ ಅಧಿಕಾರಿಯಿಂದ ರಷ್ಯಾದ ಹಡಗಿನ ಮೇಲೆ ದಾಳಿ ಆರೋಪ

ಉಕ್ರೇನ್ ಅಧಿಕಾರಿಯಿಂದ ರಷ್ಯಾದ ಹಡಗಿನ ಮೇಲೆ ದಾಳಿ ಆರೋಪ

ಉಕ್ರೇನಿಯನ್ ಅಧಿಕಾರಿಯೊಬ್ಬರು ಹೇಳಿದಂತೆ ಉಕ್ರೇನಿಯನ್ ಅಧಿಕಾರಿಯೊಬ್ಬರು ರಷ್ಯಾದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಕಪ್ಪು ಸಮುದ್ರದ ಫ್ಲೀಟ್‌ನ ಫ್ಲ್ಯಾಗ್‌ಶಿಪ್ ಗಂಭೀರವಾಗಿ ಹಾನಿಗೊಳಗಾಗಿದೆ. ಬೆಂಕಿಗೆ ಕಾರಣವಾದ ಸ್ಫೋಟದ ನಂತರದಲ್ಲಿ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ಹೇಳಿದೆ. ಮಾಸ್ಕ್ವಾ ಕ್ಷಿಪಣಿ ಕ್ರೂಸರ್‌ನಲ್ಲಿನ ಮದ್ದು-ಗುಂಡುಗಳು ಸ್ಫೋಟಗೊಂಡ ನಂತರ ಈ ಘಟನೆ ಸಂಭವಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. "ಮಾಸ್ಕ್ವಾ ಕ್ಷಿಪಣಿ ಕ್ರೂಸರ್‌ನಲ್ಲಿ ಬೆಂಕಿಯ ಪರಿಣಾಮದಿಂದಾಗಿ ಮದ್ದುಗುಂಡುಗಳು ಸ್ಫೋಟಗೊಂಡವು" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಒಡೆಸಾದ ಕಪ್ಪು ಸಮುದ್ರದ ಬಂದರಿನ ಸುತ್ತಲಿನ ಪ್ರದೇಶದ ಗವರ್ನರ್ ಮ್ಯಾಕ್ಸಿಮ್ ಮಾರ್ಚೆಂಕೊ ಅವರು ಆನ್‌ಲೈನ್ ಪೋಸ್ಟ್‌ನಲ್ಲಿ 12,500 ಟನ್ ಹಡಗನ್ನು ಎರಡು ಕ್ಷಿಪಣಿಗಳಿಂದ ಹೊಡೆದಿರುವುದಾಗಿ ಹೇಳಿದರು.

Recommended Video

Kohli ಔಟ್ ಆಗೋದಕ್ಕೆ ಮುಖ್ಯ ಕಾರಣ Dhoni | Oneindia Kannada

English summary
US Ready to give heavier weapons to Ukraine; Top points on Day 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X