ಅಮೆರಿಕ ಅಧ್ಯಕ್ಷೀಯ ಚುನಾವಣೆ : ಹಿಲರಿ ಕ್ಲಿಂಟನ್ ಈಗ ಅಧಿಕೃತ ಅಭ್ಯರ್ಥಿ

Posted By:
Subscribe to Oneindia Kannada

ವಾಷಿಂಗ್ಟನ್, ಜೂನ್ 08: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಮಹಿಳಾ ಅಭ್ಯರ್ಥಿಯಾಗಿ ಮಂಗಳವಾರ (ಜೂನ್ 07) ರಂದು ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಧಿಕೃತ ಪಕ್ಷವೊಂದರಿಂದ ಮಹಿಳಾ ಅಭ್ಯರ್ಥಿ ಆಯ್ಕೆಯಾದಂತಾಗಿದೆ.
ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ನಡೆದಿರುವ ಪೂರ್ವಭಾವಿ ಸ್ಪರ್ಧೆಗಳಲ್ಲಿ ಬರ್ನಿ ಸ್ಯಾಂಡರ್ಸ್ ಗಿಂತ ಹೆಚ್ಚು ಮತ ಗಳಿಸಿ ಜಯಗಳಿಸಿದ್ದಾರೆ.

US Presidential Election 2016: Hillary Clinton after her primary victories declared the Democratic nominee

ಒಂದು ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಾದರೆ ಒಟ್ಟಾರೆ 2,383 ಪ್ರತಿನಿಧಿಗಳ ಬೆಂಬಲ ಅಗತ್ಯ. ಕ್ಲಿಂಟನ್ ಅವರು 2,755 ಮತ ಪಡೆದಿದ್ದರೆ, ಸ್ಯಾಂಡರ್ಸ್ ಅವರು 1,852 ಮತ ಪಡೆದಿದ್ದಾರೆ.

ಮಂಗಳವಾರ ನಡೆದ ನ್ಯೂ ಮೆಕ್ಸಿಕೋ, ಉತ್ತರ ಮತ್ತು ದಕ್ಷಿಣ ಡಕೋಟಾ, ನ್ಯೂಜೆರ್ಸಿಯಲ್ಲೂ ಮುನ್ನಡೆ ಕಾಯ್ದುಕೊಂಡರು. ಬೆರ್ನಿ ಸ್ಯಾಂಡರ್ಸ್ ವಿರುದ್ಧ ಗಳಿಸಿದ ಜಯ ಸಾಧಿಸಿದರು. ಹೀಗಾಗಿ ಹಿಲರಿ ಅವರು ಅಭ್ಯರ್ಥಿ ಆಯ್ಕೆ ಖಚಿತ ಎನಿಸಿತು.

US Presidential Election 2016: Hillary Clinton after her primary victories declared the Democratic nominee

ನವೆಂಬರ್ ನಲ್ಲಿ ನಡೆಯುವ ಅಂತಿಮ ಸಮರದಲ್ಲಿ ಉದ್ಯಮಿ ಡೋನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಸ್ಪರ್ಧಿಸಲಿದ್ದಾರೆ. ಹಿಲರಿ ಅವರ ಐತಿಹಾಸಿಕ ಸಾಧನೆಗೆ ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hillary Clinton has been declared the Democratic nominee after her primary victories on Tuesday (June 7) and celebrities are chiming in on the historic moment!
Please Wait while comments are loading...