Donald Trump: ‘ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಖದರ್ ತೋರಿಸಿದ್ದು, ತಾವು ಅಂದಕೊಂಡಿದ್ದ ರೀತಿಯಲ್ಲೇ ಹೊಸ ಹೊಸ ಕಾನೂನು ಜಾರಿಗೆ ತರುತ್ತಿದ್ದಾರೆ. ಅದರಲ್ಲೂ 'ಒನ್ ಬಿಗ್ ಬ್ಯೂಟಿಫುಲ್' ಬಿಲ್ ಇದೀಗ ಕಾನೂನಾಗಿ ಜಾರಿಗೆ ಬಂದಿದ್ದು, ಜಾಗತಿಕ ಮಟ್ಟದಲ್ಲೂ ಅಮೆರಿಕದ ಈ ನಿರ್ಧಾರ ಸಂಚಲನವೇ ಸೃಷ್ಟಿಯಾಗುವಂತೆ ಮಾಡಿದೆ. ಯಾಕಂದ್ರೆ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿ ಇರುವ ಅಮೆರಿಕಗೆ ಈ ಮಸೂದೆ ಹೊಸ ಶಕ್ತಿ ತುಂಬುವ ನಿರೀಕ್ಷೆ ಇದೆ.
ಮಹತ್ವದ 'ಒನ್ ಬಿಗ್ ಬ್ಯೂಟಿಫುಲ್' ಮಸೂದೆ ಮೂಲಕ ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಹಣ ಉಳಿಸಲು ಪ್ಲಾನ್ ಮಾಡಿದ್ದಾರೆ ಟ್ರಂಪ್. ತೆರಿಗೆ ಕಡಿತ, ಮಿಲಿಟರಿ ಬಜೆಟ್, ರಕ್ಷಣಾ ಮತ್ತು ಇಂಧನ ಉತ್ಪಾದನೆಗೆ ಹೆಚ್ಚಿದ ಖರ್ಚು ಸೇರಿ ಅಮೆರಿಕದ ಪ್ರಜೆಗಳಿಗೆ ಹಲವು ಅನುಕೂಲ ಮಾಡೋಕೆ ಕೂಡ ಈ 'ಒನ್ ಬಿಗ್ ಬ್ಯೂಟಿಫುಲ್' ಸಹಾಯ ಮಾಡಲಿದೆ. ಜೊತೆಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳಲ್ಲಿ ಅಮೆರಿಕ ಸರ್ಕಾರದ ಹಣ ವ್ಯಯವನ್ನು ಕಡಿಮೆ ಮಾಡಲು ಮುಂದಾಗಲಿದೆ. ಅಮೆರಿಕದ ಸಂಸತ್ ಈ ಬಿಲ್‌ಗೆ ಒಪ್ಪಿಗೆ ನೀಡಿದ ನಂತರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಸೂದೆಗೆ ಸಹಿ ಮಾಡಿ ಕಾನೂನಾಗಿ ಜಾರಿಗೂ ತಂದಿದ್ದಾರೆ.

ಆರ್ಥಿಕ ಚೇತರಿಕೆಗೆ ಈ ಕ್ರಮ?
ಅಂದಹಾಗೆ ಅಮೆರಿಕ ಆರ್ಥಿಕತೆ ಹಳ್ಳ ಹಿಡಿದು ಈಗಾಗಲೇ ಹಲವು ವರ್ಷಗಳೇ ಕಳೆದಿದ್ದು, ಜಾಗತಿಕವಾಗಿ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಯಾವಾಗ ಬೇಕಾದರೂ ನಂಬರ್ 2 ದೇಶವಾಗಿ ಬದಲಾಗುವ ಸಾಧ್ಯತೆ ಇದೆ. ಆದರೆ ಇಂತಹ ಸಮಸ್ಯೆ ಎದುರಾಗುವ ಮೊದಲೇ ಅಮೆರಿಕ ಹೊಸ ಪ್ಲಾನ್ ಮಾಡಿ, ಹೊಸ ಮಸೂದೆ ಜಾರಿಗೆ ತರುತ್ತಿದೆ. ಹೊಸ ಮಸೂದೆ ಮೂಲಕ ತಕ್ಷಣವೇ ಅಮೆರಿಕದ ಆರ್ಥಿಕತೆಗೆ ಚೇತರಿಕೆಯನ್ನ ನೀಡುವುದು ಮತ್ತು ಹೊಸ ಹುಮ್ಮಸ್ಸು ತುಂಬುವುದು ಡೊನಾಲ್ಡ್ ಟ್ರಂಪ್ ಅವರ ಪ್ಲಾನ್ ಆಗಿತ್ತು. ಈಗ ಡೊನಾಲ್ಡ್ ಟ್ರಂಪ್ ಅವರ ಕನಸಿಗೆ ಅಮೆರಿಕ ಸಂಸತ್ ಸದಸ್ಯರು & ಅಮೆರಿಕನ್ ಕಾಂಗ್ರೆಸ್ ಸದಸ್ಯರು ಕೂಡ ಬೆಂಬಲ ನೀಡಿದ್ದಾರೆ.
ಮತ್ತಷ್ಟು ಕ್ರಾಂತಿಕಾರಿ ನಿರ್ಧಾರಕ್ಕೆ ಟ್ರಂಪ್ ಸಿದ್ಧತೆ?
'ಒನ್ ಬಿಗ್ ಬ್ಯೂಟಿಫುಲ್' ಬಿಲ್ ಜಾರಿಗೆ ಬಂದ ನಂತರ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತಷ್ಟು ಬಲ ಕೂಡ ಬಂದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಅಮೆರಿಕದ ವ್ಯವಸ್ಥೆಯಲ್ಲಿ ಮತ್ತಷ್ಟು ಕಠಿಣ ಹಾಗೂ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲು ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಹೇಗಾದರೂ ಮಾಡಿ ಈಗ ಅಮೆರಿಕಗೆ ಎದುರಾಗಿರುವ ಸಮಸ್ಯೆ ಸರಿ ಮಾಡಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ಅದರಲ್ಲೂ ಹೀಗೆ ಅನಾವಶ್ಯಕ ಖರ್ಚುಗಳನ್ನು ಕಡಿತಗೊಳಿಸಲು ಕೂಡ ಟ್ರಂಪ್ ಹಲವಾರು ಕ್ರಮ ಕೈಗೊಂಡಿದ್ದಾರೆ. ಅಮೆರಿಕ ಮತ್ತೊಮ್ಮೆ ಗ್ರೇಟ್ ಆಗಬೇಕು ಅನ್ನೋ ಉದ್ಧೇಶದಿಂದ ಇಷ್ಟೆಲ್ಲಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಿದ್ದಾರೆ ಟ್ರಂಪ್ ಅವರು.












Click it and Unblock the Notifications