ಅಮೆರಿಕದಲ್ಲಿ ಭುಗಿಲೆದ್ದ ರಾಜಕೀಯ ಬಿಕ್ಕಟ್ಟು: ಹಿಂದೆಂದೂ ಕಂಡು ಕೇಳರಿಯದ ಅತಂತ್ರ ಸ್ಥಿತಿ, ವರದಿ ನೋಡಿ

ವಾಷಿಂಗ್ಟನ್, ಜನವರಿ 06: ಅಮೆರಿಕದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಸಂಸತ್‌) ರಿಪಬ್ಲಿಕನ್ನರ ನೆಚ್ಚಿನ ಪ್ರತಿನಿಧಿ ಕೆವಿನ್‌ ಮೆಕಾರ್ಥಿ ಸ್ಪೀಕರ್‌ ಸ್ಥಾನವನ್ನು ಗೆಲ್ಲಲು ವಿಫಲರಾಗಿದ್ದಾರೆ. ಮೂರು ದಿನಗಳ ಬಿಕ್ಕಟ್ಟು ಸಂಸತ್ತಿನ ಕೆಳ ಮನೆಯನ್ನು ಅತಂತ್ರ ಪರಿಸ್ಥಿತಿಗೆ ನೂಕಿದೆ.

ಸ್ಪೀಕರ್‌ ಸ್ಥಾನಕ್ಕೆ ಹೊಸ ಸುತ್ತಿನ ಮತದಾನ ನಡೆಯಿತು. ಈ ಸ್ಪರ್ಧೆಯಲ್ಲಿ ರಿಪಬ್ಲಿಕನ್ನರ ಪ್ರತಿನಿಧಿ ಕೆವಿನ್‌ ಮೆಕಾರ್ಥಿ ಗೆಲುವು ಸಾಧಿಸಲು ವಿಫಲರಾಗಿದ್ದಾರೆ.

ರಿಪಬ್ಲಿಕ್‌ ಪಕ್ಷದಲ್ಲೇ ಇರುವ ಕನ್ಸರ್ವೇಟಿವ್‌ಗಳು (ಕಟ್ಟರ್‌ ಬಲಪಂಥೀಯರು) ಕೆವಿನ್ ಮೆಕಾರ್ಥಿ ಅವರಿಗೆ ಮತ ಹಾಕದಿರುವುದೇ ಸೋಲಿಗೆ ಕಾರಣವಾಗಿದೆ. ಕೆವಿನ್‌ ಮೆಕಾರ್ಥಿ ಕೇವಲ ಮೂರು ಮತಗಳ ಹಿನ್ನೆಡೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್‌ನ ಕೆಳ ಮನೆಯ ಕಲಾಪವು ಮತ್ತೆ ಮುಂದೂಡಲ್ಪಟ್ಟಿತು.

US political crisis deepens as McCarthy loses fourth vote for House speaker

ಈ ಬಿಕ್ಕಟ್ಟಿನಿಂದ ಸಂಸತ್‌ನಲ್ಲಿ ಯಾವುದೇ ಶಾಸನವನ್ನು ಅಂಗೀಕರಿಸಲು, ಪ್ರಮುಖ ಸಮಿತಿಗಳ ರಚನೆ ಮಾಡಲು, ಹೊಸ ಸದಸ್ಯರು ಪ್ರತಿಜ್ಞಾ ವಿಧಿಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ರಿಪಬ್ಲಿಕ್‌ ಪಕ್ಷದ ಈ ರೀತಿಯ ವರ್ತನೆಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಖಂಡಿಸಿದ್ದಾರೆ. ಈ ರೀತಿಯ ಬೆಳವಣಿಗೆಗಳು ಮುಜುಗರು ತರುತ್ತವೆ. ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಮೆಕಾರ್ಥಿಯ ಮಿತ್ರ ಪಕ್ಷಗಳು ಕೊನೆಯ ಹೋರಾಟಕ್ಕೆ ಸನ್ನದ್ದವಾಗಿವೆ. ಈಗಿರುವ ಡೆಮಾಕ್ರಟಿಕ್‌ ಪಕ್ಷ ನ್ಯಾನ್ಸಿ ಪೆಲೋಸಿಯನ್ನು ಸ್ಪಿಕರ್‌ ಸ್ಥಾನದಿಂದ ಕೆಳಗಿಳಿಸುವ ಕಸರತ್ತು ನಡೆಸಿದ್ದಾರೆ. ಇದಕ್ಕಾಗಿ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಕಾರ್ಥಿಯ ಸ್ಪೀಕರ್ ಕನಸಿಗೆ ರಿಪಬ್ಲಿಕನ್ನರೇ ಕೊಳ್ಳಿ ಇಡುತ್ತಿದ್ದಾರೆ.

US political crisis deepens as McCarthy loses fourth vote for House speaker

ಈ ವಾರ ಸಂಸತ್ತಿನ ಕಲಾಪ ಆರಂಭಗೊಂಡಿದೆ. ಇದು ಆರಂಭಗೊಂಡಾಗಿನಿಂದ ಒಟ್ಟು 11 ಸುತ್ತಿನ ಮತದಾನವಾಗಿದೆ. ಅಮೆರಿಕದಲ್ಲಿ ಈ ಹಿಂದೆ ನಡೆದಿದ್ದ ಸ್ಪೀಕರ್‌ ಸ್ಪರ್ಧೆಯು ಒಂಬತ್ತು ಸುತ್ತುಗಳಿಗಿಂತ ಹೆಚ್ಚಾಗಿರಲಿಲ್ಲ.

ರಿಪಬ್ಲಿಕ್‌ ಪಕ್ಷದ ಮೇಕಾರ್ಥಿಗೆ ಇದು ಅವಮಾನವೆಂದೇ ಹೇಳಬಹುದು. ಈ ಹನ್ನೊಂದು ಸುತ್ತಿನಲ್ಲೂ ಡೆಮಕ್ರಟಿಕ್‌ ಪಕ್ಷದ ಹಕೀಮ್ ಜೆಫ್ರೀಸ್‌ ಎದುರು ಸೋತಿದ್ದಾರೆ.

US political crisis deepens as McCarthy loses fourth vote for House speaker

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜೆಫ್ರೀಸ್‌, 'ಇಂದು ರಿಪಬ್ಲಿಕನ್ನರು ತಮ್ಮ ಜಗಳವನ್ನು ಹಾಗೂ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಿಲ್ಲಿಸುತ್ತಾರೆಂದು ಭಾವಿಸಿದ್ದೇನೆ. ಕಾರಣ, ನಾವೀಗ ಅಮೇರಿಕದ ಜನರ ಬೆನ್ನಿಗೆ ನಿಲ್ಲಬೇಕಿದೆ. ಇದು ನಮ್ಮ ಆಶಯವಾಗಬೇಕಿದೆ' ಎಂದು ತಿಳಿಸಿದರು. ಅಗತ್ಯ ಬಹುಮತದ ಕೊರತೆಯಿರುವ ಜೆಫ್ರೀಸ್ ಸುದ್ದಿಗಾರರಿಗೆ ತಿಳಿಸಿದರು.

ಯಾವುದೇ ಸದನದ ವ್ಯವಹಾರವು ಅದರ ಸ್ಪೀಕರ್‌ ಇಲ್ಲದೇ ನಡೆಯುವುದಿಲ್ಲ. ಶಾಸಕರು-ಚುನಾಯಿತರು ಯಾರಾದರೂ ಬಹುಮತವನ್ನು ಗೆಲ್ಲುವವರೆಗೆ ಮತದಾನವನ್ನು ಮುಂದುವರೆಸಬೇಕು ಎಂಬುದು ನಿಯಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+