Donald Trump: ಭಾರತದ ವಿರುದ್ಧ ಅಮೆರಿಕ ತೆರಿಗೆ ಯುದ್ಧ, ನಾಳೆಯಿಂದಲೇ ನಿರ್ಣಾಯಕ ಹೋರಾಟ
ಭಾರತ ಮತ್ತು ಅಮೆರಿಕ ನಡುವೆ ಭೀಕರ ತೆರಿಗೆ ಕದನ ಶುರುವಾಗಿದ್ದು, ಎರಡೂ ದೇಶಗಳು ಭರ್ಜರಿ ಯುದ್ಧಕ್ಕೆ ಸಜ್ಜಾಗಿವೆ. ಭಾರತ ಸುಮ್ಮನೇ ಇದ್ದರೂ ಕೆಣಕಿಕೊಂಡು ಬರುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಏಕಾಏಕಿ ಭಾರಿ ದೊಡ್ಡ ಪ್ರಮಾಣದಲ್ಲಿ ಟ್ಯಾಕ್ಸ್ ಹಾಕಲು ಮುಂದಾಗಿದ್ದಾರೆ. ಇದರಿಂದ ಭಾರತ ರಫ್ತು ಮಾಡುವ ವಸ್ತುಗಳ ಬೆಲೆ ಭಾರಿ ಏರಿಕೆ ಕಾಣಲಿದ್ದು, ಇದರಿಂದ ಭವಿಷ್ಯದಲ್ಲಿ ಭಾರತ ಮೂಲದ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರಿ ನಷ್ಟವಾಗುವ ಆತಂಕ ಇದೆ. ಈ ಕಾರಣಕ್ಕೆ ಇದೀಗ ಭಾರತ ಕೂಡ ಪ್ಲಾನ್ ಬಿ ರೆಡಿ ಮಾಡಿಕೊಂಡಿದೆ.
ಜಗತ್ತಿನ ದೊಡ್ಡಣ್ಣ ಅಂತಾ ಬಿರುದು ಪಡೆದಿರುವ ಅಮೆರಿಕ ತನ್ನ ಸಣ್ಣತನ ಮಾತ್ರ ಕೈಬಿಡುತ್ತಿಲ್ಲ & ಇದೇ ಕಾರಣಕ್ಕೆ ಜಗತ್ತಿನ ಹಲವು ದೇಶಗಳ ಜೊತೆಗೆ ಶತ್ರುತ್ವ ಕೂಡ ಕಟ್ಟಿಕೊಂಡಿರುವ ಅಮೆರಿಕ ಈಗಿನ ಪರಿಸ್ಥಿತಿ ನೋಡಿದರೆ ಇನ್ನೇನು ಆರ್ಥಿಕವಾಗಿ ಬೀದಿಗೆ ಬೀಳುವ ಲಕ್ಷಣ ಕಾಣುತ್ತಿದೆ. ಇದರ ಜೊತೆಯಲ್ಲೇ ಭಾರತದ ವಿರುದ್ಧ ಕೂಡ ಗಲಾಟೆ ಮಾಡುತ್ತಾ, ಹೆಚ್ಚಿನ ತೆರಿಗೆ ವಿಧಿಸುವ ಬಗ್ಗೆ ಬೆದರಿಕೆ ಹಾಕುತ್ತಿರುವ ಅಮೆರಿಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹಾಗಾದ್ರೆ ಅಮೆರಿಕದ ಹೆಚ್ಚಿನ ತೆರಿಗೆ ಯಾವಾಗನಿಂದ ಜಾರಿಗೆ ಬರಲಿದೆ? ಮುಂದೆ ಓದಿ.

ಶೇಕಡಾ 50ರಷ್ಟು ಸುಂಕ ಫಿಕ್ಸ್!
ಹೌದು, ಆಗಸ್ಟ್ 27 ಬುಧವಾರವೇ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆಯ ಆದೇಶ ಜಾರಿಗೆ ತರಲು ಇದೀಗ ಅಮೆರಿಕ ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಭಾರತ & ಅಮೆರಿಕ ನಡುವಿನ ಸಂಬಂಧ ಹಾಳು ಮಾಡುವ ಜೊತೆಗೆ ಜಾಗತಿಕವಾಗಿಯು ಕೂಡ ಆರ್ಥಿಕ ಸಂಚಲನಕ್ಕೆ ಕಾರಣವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿದ್ದ ಶೇ. 25 ಹೆಚ್ಚುವರಿ ಸುಂಕ ಸೇರಿ ಒಟ್ಟಾರೆ ಶೇಕಡಾ 50ರಷ್ಟು ಸುಂಕವನ್ನು ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಇದೀಗ ವಿಧಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಇದೀಗ ಅಮೆರಿಕ ಸರ್ಕಾರ ನೋಟಿಸ್ ಕೂಡ ಜಾರಿ ಮಾಡಿದೆ.
ಜಿಡಿಪಿ ಕೂಡ ಕುಸಿಯುವ ಆತಂಕ
ಇನ್ನು ಆರ್ಥಿಕ ತಜ್ಞರು ಹೇಳುವಂತೆ ಇದೀಗ ಟ್ರಂಪ್ ಅವರ ಹೆಚ್ಚುವರಿ ಸುಂಕದ ಪರಿಣಾಮ ಭಾರತ ತನ್ನ ಜಿಡಿಪಿ ವೃದ್ಧಿ ದರದಲ್ಲಿ 70-100 ಬೇಸಿಸ್ ಪಾಯಿಂಟ್ ಅಂದ್ರೆ ಶೇ. 0.7 ರಿಂದ ಶೇಡಕಾ 1 ರಷ್ಟು ಕಳೆದುಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಇದರಿಂದ ಈ ಸಾಲಿನಲ್ಲಿ ಆರ್ಥಿಕ ವೃದ್ಧಿಯು ಶೇ. 6ಕ್ಕೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಶೇಷವಾಗಿ ಬಟ್ಟೆ, ಸೀಫುಡ್ & ಆಭರಣ ರಫ್ತು ಮಾಡುವ ಕಂಪನಿಗಳು ದೊಡ್ಡ ಪೆಟ್ಟು ತಿನ್ನುವ ಭಯ ಕೂಡ ಕಾಡುತ್ತಿದೆ. ಇನ್ನೊಂದು ಕಡೆ ಕಬ್ಬಿಣ, ಉಕ್ಕು, ಅಲ್ಯೂಮಿನಿಯಮ್ ಉತ್ಪನ್ನಗಳು, ಕಾರು, ಲಘು ಟ್ರಕ್‌ಗಳ ಮೇಲೂ ಇದು ಪರಿಣಾಮ ಬೀರುವ ಬಗ್ಗೆ ಚರ್ಚೆ ಶುರುವಾಗಿದೆ.












Click it and Unblock the Notifications