ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಮೇರಿಲ್ಯಾಂಡ್‌ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಭಾರತ ಮೂಲದ ಅರುಣಾ ಮಿಲ್ಲರ್‌

|
Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 9: ಭಾರತ ಮೂಲದ ಅಮೆರಿಕ ಯುವತಿ ಅರುಣಾ ಮಿಲ್ಲರ್ ಬುಧವಾರ ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಚುನಾಯಿತರಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ವಲಸಿಗರೆಂಬ ಖ್ಯಾತಿಗೆ ಅರುಣಾ ಪಾತ್ರರಾಗಿದ್ದಾರೆ. ಆಂಧ್ರ ಪ್ರದೇಶ ಮೂಲದ ಅವರು, ಚಿಕ್ಕವರಿದ್ದಾಗಲೇ ಪೋಷಕರೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಯಾರಿದು ಅರುಣಾ ಮಿಲ್ಲರ್?

1. 58 ವರ್ಷದ ಡೆಮಾಕ್ರಟಿಕ್‌ ಪಕ್ಷದ ನಾಯಕಿಯಾಗಿರುವ ಅರುಣಾ ಮಿಲ್ಲರ್‌ ಆಂಧ್ರ ಪ್ರದೇಶದ ಹೈದರಾಬಾದ್‌ನಲ್ಲಿ ಜನಿಸಿದ್ದಾರೆ. ಅವರು ಏಳು ವರ್ಷದವರಿದ್ದಾಗಲೇ ತಂದೆತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮ: ಅರುಣಾ ಅಸಫ್ ಅಲಿ ಕೊಡುಗೆ ಸ್ಮರಣಾರ್ಹ ಸ್ವಾತಂತ್ರ್ಯ ಸಂಗ್ರಾಮ: ಅರುಣಾ ಅಸಫ್ ಅಲಿ ಕೊಡುಗೆ ಸ್ಮರಣಾರ್ಹ

2. 1989ರಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಮಾಂಟ್ಗೊಮೆರಿ ಕೌಂಟಿಯ ಸ್ಥಳೀಯ ಸಾರಿಗೆ ಇಲಾಖೆಯಲ್ಲಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.

US Midterm Elections 2022 Results Indian-American Aruna Miller makes Maryland history

3. 2010 ರಿಂದ 2018 ರವರೆಗೆ, ಅವರು ಮೇರಿಲ್ಯಾಂಡ್ ಹೌಸ್ ಆಫ್ ಡೆಲಿಗೇಟ್ಸ್‌ನ ಪ್ರತಿನಿಧಿ ಆಗಿದ್ದರು.

4. ಅರುಣಾ ಮಿಲ್ಲರ್‌ ಅವರು 2018 ರಲ್ಲಿ ಮೇರಿಲ್ಯಾಂಡ್‌ನ 6ನೇ ಕಾಂಗ್ರೆಷನಲ್ ಕೌಂಟಿಯಲ್ಲಿ ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸಿದ್ದರು. ಎಂಟು ಅಭ್ಯರ್ಥಿಗಳ ನಡುವೆ ನಡೆದಿದ್ದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

5. ಅರುಣಾ ಅವರು ಡೇವ್ ಮಿಲ್ಲರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರು ಪ್ರಸ್ತುತ ಮಾಂಟ್ಗೊಮೆರಿ ಕೌಂಟಿಯಲ್ಲಿ ವಾಸಿಸುತ್ತಿದ್ದಾರೆ.

US Midterm Elections 2022 Results Indian-American Aruna Miller makes Maryland history

'ಮತದಾರರೊಂದಿಗೆ ಇರುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆ ಇಲ್ಲ. ಈ ಆಯ್ಕೆಯು ನನ್ನನ್ನು ಅತ್ಯುತ್ತಮ ವ್ಯಕ್ತಿಯಾಗಲು ಪ್ರೇರೇಪಿಸಿದೆ. ನಿಮ್ಮ ಬದ್ಧತೆ ಹಾಗೂ ಬೆಂಬಲಕ್ಕಾಗಿ ನನ್ನ ಕೃತಜ್ಞತೆಗಳು. ಇದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ' ಎಂದು ಅರುಣಾ ಮಿಲ್ಲರ್‌ ಹೇಳಿದ್ದಾರೆ.ಹೆಚ್ಚಿನ ಭಾರತೀಯ-ಅಮೆರಿಕನ್ನರು ಇತಿಹಾಸವನ್ನು ಸೃಷ್ಟಿಸುವ ನಿರೀಕ್ಷೆಯಿದೆ

ಕಾಂಗ್ರೆಸ್‌ನ ನಾಲ್ವರು ಭಾರತ ಮೂಲದ ಪದಾಧಿಕಾರಿಗಳಾದ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಮರು ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ನಾಲ್ವರೂ ಡೆಮಾಕ್ರಟಿಕ್ ಪಕ್ಷದವರು.

English summary
United States (US) Midterm Elections 2022 Hours after the US went to polls for midterm elections, Indian-American Aruna Miller made Maryland history by becoming the first immigrant to win the lieutenant governor’s office
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X