ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಗಡಿಪಾರು ನೀತಿ: ಭಾರತೀಯ ವಲಸಿಗರಿಗೆ ತಾತ್ಕಾಲಿಕ ನಿರಾಳತೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 28: ಅಮೆರಿಕದ ಗಡಿಪಾರು ನಿಯಮಾವಳಿಯಿಂದ ಆತಂಕಕ್ಕೆ ಒಳಗಾಗಿದ್ದ ಎಚ್‌1ಬಿ ವೀಸಾದಾರ ಭಾರತೀಯ ಸಮುದಾಯಕ್ಕೆ ತಾತ್ಕಾಲಿಕ ನಿರಾಳತೆ ದೊರೆತಿದೆ.

ಅಮೆರಿಕದ ಪೌರತ್ವ ಮತ್ತು ವಲಸೆ ಸೌಲಭ್ಯಗಳ (ಯುಎಸ್‌ಸಿಐಎಸ್) ನೂತನ ನಿಯಮಗಳ ಅಡಿ ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು, ವೀಸಾ ವಿಸ್ತರಣೆ ಅಥವಾ ಮಾನ್ಯತೆ ಬದಲಾವಣೆಗೆ ವಲಸಿಗ ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಿ ಅವರನ್ನು ದೇಶದಿಂದ ಹೊರಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

ಆದರೆ, ಉದ್ಯೋಗ ಆಧಾರಿತ ಅರ್ಜಿಗಳು ಮತ್ತು ಮಾನವೀಯ ನೆಲೆಗಟ್ಟಿನ ಅರ್ಜಿಗಳನ್ನು ಗೌರವಿಸಿ ಸದ್ಯಕ್ಕೆ ಈ ನೀತಿಯನ್ನು ಜಾರಿಗೆ ತರಲಾಗುತ್ತಿಲ್ಲ ಎಂದು ಯುಎಸ್‌ಸಿಐಎಸ್ ಹೇಳಿಕೆಯಲ್ಲಿ ತಿಳಿಸಿದೆ.

US H-1B visa holders Indians deportation policy uscis

ಈ ನೀತಿಯನ್ನು ಜಾರಿಗೆ ತರುವ ಮುನ್ನ ಯುಎಸ್‌ಸಿಐಎಸ್ ನೋಟಿಸ್ ಟು ಅಪಿಯರ್ (ಎನ್‌ಟಿಎ) ನೀತಿಯನ್ನು ಅಳವಡಿಸಿಕೊಳ್ಳಲಿದೆ. ಗಡಿಪಾರು ಪ್ರಕ್ರಿಯೆಯ ಮೊದಲ ಹಂತವಾಗಿ ಎನ್‌ಟಿಎಯನ್ನು ನೀಡಲಾಗುತ್ತದೆ.

ವಲಸೆ ನ್ಯಾಯಾಧೀಶರ ಮುಂದೆ ಅವರು ಹಾಜರಾಗುವಂತೆ ಎನ್‌ಟಿಎ ಸೂಚಿಸಲಾಗುತ್ತದೆ. ಬಳಿಕ ಅಮೆರಿಕದಲ್ಲಿ ಕಾನೂನುಬದ್ಧವಾಗಿ ನೆಲೆಸಿರಲು ಅಗತ್ಯವಾದ ದಾಖಲಾತಿಗಳನ್ನು ಹೊಂದಿರದ ವಿದೇಶಿ ರಾಷ್ಟ್ರೀಯರನ್ನು ಗಡಿಪಾರು ಮಾಡುವ ಕಾರ್ಯ ಆರಂಭಿಸಲಾಗುತ್ತದೆ.

ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

ನೂತನ ನಿಯಮವು ಅಮೆರಿಕದಲ್ಲಿ ಇನ್ನಷ್ಟು ದಿನ ಇರುವಂತೆ ವೀಸಾ ವಿಸ್ತರಿಸಲು ಅಥವಾ ತಮ್ಮ ವೀಸಾ ಮಾನ್ಯತೆಯನ್ನು ಬದಲಿಸಲು ಬಯಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಒಳಗೊಳ್ಳಲಿದೆ.

ಗಡಿಪಾರು ನೀತಿಯಡಿ ಉದ್ಯೋಗ ಸಂಬಂಧಿತ ವೀಸಾ ಅರ್ಜಿಗಳು ಸದ್ಯಕ್ಕೆ ಅನ್ವಯವಾಗುವುದಿಲ್ಲ. ವೀಸಾ ವಿಸ್ತರಣೆಗೆ ಅಥವಾ ವೀಸಾ ಮಾನ್ಯತೆ ಬದಲಿಸಲು ಬಯಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚು ಜಾಗರೂಕರಾಗಿ ಇರಬೇಕಾಗುತ್ತದೆ.

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

ಗ್ರೀನ್ ಕಾರ್ಡ್ ಬಯಸಿರುವವರು ಅವರ ಗ್ರೀನ್ ಕಾರ್ಡ್ ಅರ್ಜಿಗಳು ಪ್ರಕ್ರಿಯೆಯಲ್ಲಿರುವಾಗ ಎಚ್‌1ಬಿ ವೀಸಾದ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗಲಿದೆ.

ಎಚ್‌1ಬಿ ವೀಸಾದಾರರಿಗೆ ವೀಸಾ ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಇತ್ತೀಚೆಗಷ್ಟೇ ನಿರಾಕರಿಸಲಾಗಿತ್ತು. ಇದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕುವ ಆತಂಕಕ್ಕೆ ಒಳಗಾಗಿದ್ದರು. ಈಗ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

English summary
US Citizenship and Immigration Services (USCIS) decided to serve NTA in the first stage of deportation proceedings. H-1B Visa holders most of Indians got relief by this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X