ಅಮೆರಿಕದಲ್ಲಿ ನಡುಕ, ಪ್ರತಿಭಟನೆ ಮಾಡುತ್ತಿದ್ದವರು ಅಂದರ್!
ಅಮೆರಿಕದ ಪಾಡು ಯಾರಿಗೂ ಬೇಡ ಎನ್ನುವಂತಾಗಿದೆ. ಯಾಕಂದ್ರೆ ಅಲ್ಲಿನ ಸರ್ಕಾರಕ್ಕೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ. ಇದೇ ರೀತಿ ಇದೀಗ ಪ್ಯಾಲೆಸ್ತೀನ್ ಪರವಾಗಿ ಶುರುವಾದ ಹೋರಾಟಕ್ಕೆ ಅಮೆರಿಕ ಬೆಚ್ಚಿಬಿದ್ದಿದೆ. ಈ ಮೂಲಕ ಅಮೆರಿಕದ ಸರ್ಕಾರ, ತಾನು ಮಾಡಿದ ತಪ್ಪಿಗೆ ತಾನೇ ಶಿಕ್ಷೆ ಅನುಭವಿಸುವಂತಾಗಿದೆ.
ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾಗಿ, 7 ತಿಂಗಳು ಕಳೆದಿದ್ದರೂ ಯುದ್ಧ ನಿಲ್ಲುತ್ತಿಲ್ಲ. ಆದ್ರೆ ಉಗ್ರರ ನೆಪ ಹೇಳಿ ಇಸ್ರೇಲ್ ಸೇನೆ ಅಮಾಯಕ ಜನರ ರಕ್ತವನ್ನು ಹರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಇಸ್ರೇಲ್ ಯುದ್ಧ ನಿಲ್ಲಿಸಲಿ ಅಂತಾ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೋರಾಟ ಶುರುವಾಗಿದೆ. ಹೀಗಿದ್ರೂ ಇಸ್ರೇಲ್ ಮಾತ್ರ ಇದಕ್ಕೆ ಕೇರ್ ಮಾಡುತ್ತಿಲ್ಲ. ಇದೇ ವಿಚಾರವಾಗಿ ಅಮೆರಿಕದಲ್ಲಿ ಕೂಡ ಪ್ರತಿಭಟನೆ ಆರಂಭವಾಗಿದ್ದು, ಅಮೆರಿಕದ ಕಾಲೇಜು ಕ್ಯಾಂಪಸ್‌ಗಳು ಹೊತ್ತಿ ಉರಿಯುತ್ತಿವೆ.

2,100 ವಿದ್ಯಾರ್ಥಿಗಳು ಅಂದರ್!
ಅಂದಹಾಗೆ ಇದೀಗ ಅಮೆರಿಕದ ಮೂಲೆ ಮೂಲೆಯಲ್ಲಿ, ವಿವಿಧ ಕಾಲೇಜು ಕ್ಯಾಂಪಸ್‌ಗೆ ಈ ಹೋರಾಟದ ಕಿಚ್ಚು ಹಬ್ಬಿದೆ. 2,100 ಜನರನ್ನು ಈವರೆಗೆ ಬಂಧಿಸಲಾಗಿದೆ. ಇನ್ನು ಮತ್ತೊಂದು ಕಡೆ ಪ್ರತಿಭಟನೆ ಕಿಚ್ಚು ಇನ್ನೂ ಹಲವು ಕಾಲೇಜ್ ಕ್ಯಾಂಪಸ್‌ಗೆ ಹಬ್ಬುವ, ಭಯ ಕೂಡ ಆವರಿಸುತ್ತಿದೆ. ಹೀಗಾಗಿ ಸಾವಿರಾರು ಜನರನ್ನು ಒಳಗೆ ಹಾಕಲಾಗಿದ್ದು, ಈ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಅಮೆರಿಕ ಸರ್ಕಾರ ಯತ್ನಿಸುತ್ತಿದೆ. ಆದರೆ ಸದ್ಯಕ್ಕೆ, ಇದ್ಯಾವುದೂ ವರ್ಕೌಟ್ ಆಗುತ್ತಿಲ್ಲ. ಯುದ್ಧ ನಿಲ್ಲಿಸುವಂತೆ ಮೊದಲನೇ ಬಾರಿಗೆ ಏಪ್ರಿಲ್ 17ರಂದು ಕೊಲಂಬಿಯಾದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ದೊಡ್ಡ ಕಿಚ್ಚು ಹೊತ್ತಿಕೊಂಡಿದೆ.
ಜನ ರೊಚ್ಚಿಗೆದ್ದಿದ್ದು ಯಾಕೆ?
ಹೀಗೆ ತಮ್ಮ ದೇಶದ ಸರ್ಕಾರ ಅಂದ್ರೆ ಅಮೆರಿಕದ ಬೈಡನ್ ಸರ್ಕಾರ, ಇಸ್ರೇಲ್ ಪರವಾಗಿದೆ ಎಂಬ ಸುದ್ದಿ ಅಮೆರಿಕದ ಜನರನ್ನು ಕೆರಳಿಸುತ್ತಿದೆ. ಇಸ್ರೇಲ್ ಎಷ್ಟೇ ತಪ್ಪು ಮಾಡಿದ್ದರೂ, ಅದನ್ನ ಸಮರ್ಥನೆ ಮಾಡಿಕೊಳ್ಳುತ್ತಿದೆ ಅಮೆರಿಕ ಎಂಬ ಆರೋಪವೂ ಇದೆ. ಈ ಕಾರಣಕ್ಕೆ ಅಮೆರಿಕ ಕಾಲೇಜು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದ ಹತ್ತಾರು ವಿವಿಗಳಲ್ಲಿ ಬೆಂಕಿ ಹೊತ್ತಿ ವಿದ್ಯಾರ್ಥಿಗಳು ಹಿಂಸಾತ್ಮಕ ಹೋರಾಟ ನಡೆಸ್ತಿದ್ದಾರೆ.
ಈಗಾಗಲೇ ಹಲವು ಸಮಸ್ಯೆ ಎದುರಿಸುತ್ತಾ, ಆರ್ಥಿಕವಾಗಿ ಕಂಗಾಲಾಗಿ ಹೋಗಿರುವ ಈ ಜಗತ್ತಿನ ದೊಡ್ಡಣ್ಣನಿಗೆ ಇದು ಕೂಡ ಟೆನ್ಷನ್ ತರಿಸಿದೆ. ಹೀಗಾಗಿ ಹೋರಾಟ ಹತ್ತಿಕ್ಕಿ, ಪರಿಸ್ಥಿತಿ ಸರಿ ಮಾಡಲು ಪರದಾಡುತ್ತಿದೆ ಬೈಡನ್ ಸರ್ಕಾರ. ಆದರೂ, ವಿದ್ಯಾರ್ಥಿಗಳು ಪ್ರತಿಭಟನೆ ಮತ್ತಷ್ಟು ಜೋರು ಮಾಡುತ್ತಿದ್ದಾರೆ.












Click it and Unblock the Notifications