ರಷ್ಯಾ ವಿರುದ್ಧ ನೇರ ಯುದ್ಧಕ್ಕೆ ಸಿದ್ಧವಾಯ್ತಾ ಅಮೆರಿಕ?

ರಷ್ಯಾ ವಿರುದ್ಧ ಅಮೆರಿಕ ಇದೀಗ, ನೇರ ಯುದ್ಧಕ್ಕೆ ಸಿದ್ಧವಾಗಿ ನಿಂತಿರುವಂತೆ ಕಾಣುತ್ತಿದೆ. ಯಾಕಂದ್ರೆ ಉಕ್ರೇನ್ ಸೇನೆಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೀಡಿದ್ದ ಅಮೆರಿಕ ಈಗ ಅದನ್ನ ರಷ್ಯಾ ನೆಲದ ಮೇಲೆ ನೇರ ದಾಳಿ ಮಾಡಲು ಬಳಸಿ ಎಂದಿದೆ. ಇಷ್ಟುದಿನ, ಕೇವಲ ಉಕ್ರೇನ್ ನೆಲದ ರಕ್ಷಣೆಗೆ ಈ ಅಸ್ತ್ರಗಳನ್ನು ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಇದೀಗ ತನ್ನ ವರಸೆ ಬದಲಿಸಿದೆ ಅಮೆರಿಕ.

ಇದೇ ಸರಿಯಾದ ಸಮಯ, ರಷ್ಯಾ ದೇಶವನ್ನು ಕಟ್ಟಿಹಾಕಬೇಕು ಎಂಬುದು ಅಮೆರಿಕನ್ನರ ತಂತ್ರ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಅಮೆರಿಕದ ನೇರ & ದೊಡ್ಡ ಶತ್ರು ರಷ್ಯಾ. ಹೀಗೆ ರಷ್ಯಾ ದೇಶವನ್ನು ಸದೆಬಡಿದರೆ ತಾನು ಸೇಫ್ ಎಂಬ ಅಭಿಪ್ರಾಯ ಅಮೆರಿಕದ ಎದೆಯಲ್ಲಿ ಇದೆ. ಈ ಕಾರಣಕ್ಕೆ ಅಮೆರಿಕ ಈಗ ಹೊಸ ರಣತಂತ್ರ ರೂಪಿಸಿದ್ದು, ಉಕ್ರೇನ್ ಮೂಲಕವೇ ರಷ್ಯಾ ನಾಶಕ್ಕೆ ಯತ್ನಿಸುತ್ತಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ರಷ್ಯಾ ನೆಲದಲ್ಲಿ, ಭೀಕರ ದಾಳಿ ಮಾಡಲು ಅಮೆರಿಕದ ಅಸ್ತ್ರಗಳನ್ನೇ ಬಳಸಿ ಎಂದಿದೆ ಅಮೆರಿಕ. ಈಗ ಉಕ್ರೇನ್ ಕೂಡ ಆ ಮಾತನ್ನು ಪಾಲಿಸಲು ಮುಂದಾಗಿದೆ.

US Gave Permission To Ukraine For Special Attack On Russia

3ನೇ ಮಹಾಯುದ್ಧ ಫಿಕ್ಸ್?

ರಷ್ಯಾ & ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೂ ಬಂದಿದ್ದಾರೆ. 2 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಿ ಸೋತು ಹೋಗಿದೆ. ಇಷ್ಟೆಲ್ಲದರ ಮಧ್ಯೆ ಈಗ ಅಮೆರಿಕ ನೀಡಿರುವ ವಿಶೇಷ ಅನುಮತಿ ಉಕ್ರೇನ್‌ಗೆ ಶಕ್ತಿ ನೀಡಿದ್ದರೆ, ರಷ್ಯಾ ಅಧ್ಯಕ್ಷರ ಪಿತ್ತ ನೆತ್ತಿಗೇರಿಸಿದೆ.

ರಷ್ಯಾ ವಿನಾಶಕಾರಿ ಅಸ್ತ್ರ ಬಳಸುತ್ತಾ?

ಇನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಕೆಂಡವಾಗಲು ಬಲವಾದ ಕಾರಣವೂ ಇದ್ದು, ಯಾವಾಗ ಅಮೆರಿಕ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುತ್ತಿತ್ತೋ ಆಗಲೇ ಉಕ್ರೇನ್ ಸೇನೆ ಗ್ರಹಚಾರ ಕೆಟ್ಟಿತ್ತು. ಈಗ ನೇರವಾಗಿ ಉಕ್ರೇನ್ ಬೆನ್ನಿಗೆ ನಿಲ್ಲಲು ಅಮೆರಿಕ, ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ಸಿದ್ಧವಾಗಿರುವುದು ಪರಿಸ್ಥಿತಿ ಕೈಮೀರುವಂತೆ ಮಾಡಿದೆ. ಎಫ್-16 ವಿಮಾನದ ಎಂಟ್ರಿ ಆಗಿದ್ದೇ ನಿಜವಾದ್ರೆ ರಷ್ಯಾ ತನ್ನಲ್ಲಿನ ಮತ್ತಷ್ಟು ವಿನಾಶಕಾರಿ ಅಸ್ತ್ರಗಳನ್ನ ಈಗ ಹೊರತೆಗೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೂ ಹಲವು ವಿನಾಶಕಾರಿ ಅಸ್ತ್ರಗಳನ್ನು ಅಮೆರಿಕ ಈಗ ಉಕ್ರೇನ್ ಸೇನೆಗೆ ಉಡುಗೊರೆ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+