Russia & Ukraine War: ಓಡ್ರೋ... ಓಡ್ರೋ... ಇದು ಉಕ್ರೇನ್ ಅಡ್ಡಾ...
ರಷ್ಯಾ & ಉಕ್ರೇನ್ ಜಗಳದಲ್ಲಿ ಮಧ್ಯ ಬಂದಿರುವ ಅಮೆರಿಕಗೆ ಈಗ ದೊಡ್ಡ ದೊಡ್ಡ ಸಮಸ್ಯೆ ಕಾಡುತ್ತಿವೆ. ಒಂದು ಕಡೆ ಆರ್ಥಿಕವಾಗಿ ಅಮೆರಿಕ ನರಳುತ್ತಿರುವ ಸಮಯದಲ್ಲೇ ಉಕ್ರೇನ್‌ನ ನೆರವಿಗೆ ಕೂಡ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮತ್ತೊಂದು ಕಡೆ ರಷ್ಯಾ ಈಗ ಉಕ್ರೇನ್ ನೆಲ ನಲುಗುವ ರೀತಿ ದಾಳಿ ಮಾಡುತ್ತಿದೆ. ಇಷ್ಟೆಲ್ಲದರ ಪರಿಣಾಮ ಇದೀಗ ಉಕ್ರೇನ್ ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ ಅಮೆರಿಕ ಕೂಡ ಉಕ್ರೇನ್ ನೆಲ ಬಿಟ್ಟು ಎಸ್ಕೇಪ್ ಆಗುತ್ತಿದೆ!
ರಷ್ಯಾ ಸೇನೆ ಈಗ ನೇರವಾಗಿ ಉಕ್ರೇನ್ ರಾಜಧಾನಿಯನ್ನು ಸಂಪೂರ್ಣವಾಗಿ ತನ್ನ ಕೈವಶಕ್ಕೆ ಪಡೆದು, ಉಕ್ರೇನ್ ರಾಜಧಾನಿ ಕೀವ್ ಮೇಲೆ ತನ್ನ ಹಿಡಿತ ಸಾಧಿಸಲು ಮುಂದಾಗಿದೆ. ಇದೇ ಕಾರಣಕ್ಕೆ ತನ್ನ ಬಳಿ ಇರುವ ಮಿಸೈಲ್ ಅಂದ್ರೆ ಕ್ಷಿಪಣಿಗಳನ್ನ ಹಾರಿಸಿ ಅಟ್ಯಾಕ್ ಮಾಡೋಕೆ ಮುಂದೆ ಬಂದಿದೆ. ಇಂತಹ ಸಮಯದಲ್ಲೇ ಉಕ್ರೇನ್ ರಾಜಧಾನಿ ಕೀವ್ ರಷ್ಯಾ ಮಿಲಿಟರಿಯ ಕ್ಷಿಪಣಿ ದಾಳಿಗೆ ಪೀಸ್ ಪೀಸ್ ಆಗುವ ಭಯ ಕಾಡುತ್ತಿದೆ. ಇದನ್ನ ಅರಿತು ಅಮೆರಿಕ ಮಾಡಿದ್ದು ಏನು ಗೊತ್ತಾ?

ಉಕ್ರೇನ್ ಬೆನ್ನಿಗೆ ನಿಂತಿರುವ ಅಮೆರಿಕ
ಅಮೆರಿಕ ಸದಾ ಉಕ್ರೇನ್ ಬೆನ್ನಿಗೆ ನಿಂತು ಪರೋಕ್ಷವಾಗಿ ರಷ್ಯಾ ವಿರುದ್ಧ ದಾಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ರಷ್ಯಾ ಸೇನೆಯದ್ದು. ಇದೇ ಕಾರಣಕ್ಕೆ ಎರಡೂ ದೇಶಗಳ ಮಧ್ಯೆ ಸಂಬಂಧ ಹಳಸಿ ಹೋಗಿದೆ. ಹೀಗಿದ್ದಾಗ ಮತ್ತೊಂದು ಸ್ಫೋಟಕ ವಿಚಾರ ಕೂಡ ಬಯಲಾಗಿ ಅಮೆರಿಕ ನಲುಗಿ ಹೋಗಿದೆ.
ಅದು ಏನಂದ್ರೆ ಯಾವ ಕ್ಷಣದಲ್ಲಿ ಬೇಕಾದರೂ ರಷ್ಯಾದ ಸೇನೆ, ನೇರ ಉಕ್ರೇನ್ ರಾಜಧಾನಿ ಕೀವ್ ಅನ್ನ ಪೀಸ್ ಪೀಸ್ ಮಾಡುವ ಭಯ ಈಗ ಕಾಡುತ್ತಿರುವ ಕಾರಣ ಕೀವ್ ರಾಜಧಾನಿಯಿಂದ ಅಮೆರಿಕ ಹೊರ ಬಂದಿದೆ. ಕೀವ್ ಭಾಗದಲ್ಲಿ ಇರುವ ತನ್ನ ರಾಯಭಾರ ಕಚೇರಿಗೆ ದಿಢೀರ್ ಬೀಗ ಹಾಕಿದೆ ಅಮೆರಿಕ.
ರಷ್ಯಾ ದಾಳಿ ಬಗ್ಗೆ ಭಯ!
ಹೀಗೆ ಅಮೆರಿಕ ಕೈಗೊಂಡಿರುವ ಈ ನಿರ್ಧಾರ ಮತ್ತಷ್ಟು ಭಯ ಹುಟ್ಟಿಸುತ್ತಿದೆ. ಯಾಕಂದ್ರೆ ಈ ಬೆಳವಣಿಗೆ ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಭಯ ಕಾಡುತ್ತಿದೆ. ಅದರಲ್ಲೂ ಸ್ವತಃ ಅಮೆರಿಕ ಹೀಗೆ ಉಕ್ರೇನ್ ನೆಲ ಬಿಟ್ಟು ಹೋಗುತ್ತಿರುವ ರೀತಿ ನೋಡಿದರೆ ರಷ್ಯಾ ಇನ್ಯಾವ ರೀತಿಯಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ? ಎಂಬ ಪ್ರಶ್ನೆ ಇದೀಗ ಮೂಡಿದೆ.
ಪರಮಾಣು ಅಸ್ತ್ರ ಬಳಕೆ ಆಗುತ್ತಾ?
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಯುದ್ಧದಲ್ಲಿ ಪರಮಾಣು ಅಸ್ತ್ರಗಳನ್ನ ಬಳಸದೇ ಇರಲಿ ಎಂಬ ಮಾತನ್ನು ಇದೀಗ ಜಗತ್ತೇ ಹೇಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚು ಸಮಸ್ಯೆ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಪಟ್ಟ ಪಡೆದ ತಕ್ಷಣ ಹೊಸ ನಿರೀಕ್ಷೆ ಮೂಡಿದೆ. ಹೀಗಾಗಿ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಉಕ್ರೇನ್ & ರಷ್ಯಾ ಯುದ್ಧ ನಿಲ್ಲುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications