ಡೊನಾಲ್ಡ್ ಟ್ರಂಪ್ ಗೆಳೆಯನ ಮುನಿಸು: ಅಮೆರಿಕದ ಹೊಸ ಅಧ್ಯಕ್ಷರಿಗೆ ಕಾಲ್ ಮಾಡಲ್ವಂತೆ ಪುಟಿನ್!
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೀಗಿದ್ದಾಗ ದೂರದ ರಷ್ಯಾದಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಫೋನ್ ಕಾಲ್ ಬರಬಹುದು ಎಂಬ ನಿರೀಕ್ಷೆ ಮೂಡಿತ್ತು. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಉತ್ತಮ ಸಂಬಂಧ ಇದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ವ್ಲಾಡಿಮಿರ್ ಪುಟಿನ್ ಕರೆ ಮಾಡಿ ಶುಭ ಕೋರುವ ನಿರೀಕ್ಷೆ ಮೂಡಿತ್ತು. ಈ ಎಲ್ಲಾ ಆಸೆಗೂ ಈಗ ತಣ್ಣೀರು ಎರಚಲಾಗದೆ.
ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಹಾಗೂ ಟ್ರಂಪ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು, ಆದರೆ ಅಂತಿಮವಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ವಿರುದ್ದ ಡೊನಾಲ್ಡ್ ಟ್ರಂಪ್ ಅವರು ಭಾರಿ ದೊಡ್ಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದು ಕೂಡ ಕನ್ಫರ್ಮ್ ಆಗಿದೆ. ಇಂತಹ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ಮಾಡಿ, ಟ್ರಂಪ್‌ಗೆ ಶುಭಾಶಯವನ್ನ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ಏನಾಗಿದೆ ಗೊತ್ತಾ? ಮುಂದೆ ಓದಿ.

ವ್ಲಾದಿಮಿರ್ ಪುಟಿನ್ ಪ್ಲಾನ್ ಏನು?
ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ, ಜಗತ್ತಿನ ದೊಡ್ಡ ದೊಡ್ಡ ನಾಯಕರು ಅಭಿನಂದಿಸಿದ್ದಾರೆ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡೊನಾಲ್ಡ್ ಟ್ರಂಪ್ ಅವರನ್ನ ಚುನಾವಣಾ ವಿಜಯಕ್ಕಾಗಿ ಅಭಿನಂದಿಸುವ ಬಗ್ಗೆ ಯಾವುದೇ ಯೋಚನೆ ಅಥವಾ ಯೋಜನೆ ಈವರೆಗೆ ಇಲ್ಲ ಅಂತ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
2016ರಲ್ಲಿ ಫೋನ್ ಮಾಡಿದ್ದ ಪುಟಿನ್!
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್ ಅವರನ್ನ ಅಭಿನಂದಿಸುವ ನಮ್ಮ ಅಧ್ಯಕ್ಷರ ಯೋಜನೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಡಿಮಿಟ್ರಿ ಪೆಸ್ಕೋವ್ ಮಾಧ್ಯಮದ ಸಿಬ್ಬಂದಿ ಎದುರು ಸ್ಪಷ್ಟಪಡಿಸಿದರು. ಆದರೆ 2016ರಲ್ಲಿ ಮೊದಲ ಬಾರಿ ಡೊನಾಲ್ಡ್ ಟ್ರಂಪ್ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ, ಅಭಿನಂದನಾ ಸಂದೇಶವನ್ನು ಕಳುಹಿಸಿದ್ದ ಮೊದಲ ವಿಶ್ವ ನಾಯಕರಲ್ಲಿ ಪುಟಿನ್ ಕೂಡ ಒಬ್ಬರಾಗಿದ್ದರು. ಆದರೆ ಈಗ ಎರಡು ದೇಶಗಳು ಹಾಗೂ ಇಬ್ಬರು ನಾಯಕರ ನಡುವೆ ಅಂತಹ ಸಂಬಂಧ ಇಲ್ಲ, ಎನ್ನುವುದು ಪ್ರಸ್ತುತ ಬೆಳವಣಿಗೆಗಳಿಂದ ಸ್ಪಷ್ಟವಾಗಿ ಕಾಣುತ್ತಿದೆ.
ಅಮೆರಿಕ & ರಷ್ಯಾ ಸಂಬಂಧ ಹಾಳಾಯ್ತಾ?
ಆದರೂ ಈಗ ಕಮಲಾ ಹ್ಯಾರಿಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸದಿರುವ ಪುಟಿನ್ ನಿರ್ಧಾರ, ಅಮೆರಿಕ & ರಷ್ಯಾ ದೇಶಗಳ ನಡುವಿನ ಸಂಬಂಧ ಹದಗೆಡಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿಮಿಟ್ರಿ ಪೆಸ್ಕೋವ್ ಇದು ಬಹುತೇಕ ಅಸಾಧ್ಯ. ಯಾಕೆ ಅಂದ್ರೆ ಈಗಾಗಲೇ ಅಮೆರಿಕ & ರಷ್ಯಾ ನಡುವಿನ ಸಂಬಂಧವು ಅತ್ಯಂತ ಕೆಳಹಂತಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.












Click it and Unblock the Notifications