US Elections 2024: ಕಮಲಾ ಹ್ಯಾರಿಸ್ Vs ಡೊನಾಲ್ಡ್ ಟ್ರಂಪ್; ಯಾವ ರಾಜ್ಯಗಳಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಸಂಪೂರ್ಣ ಮಾಹಿತಿ

ಇಡೀ ವಿಶ್ವವೇ ಕಾಯುತ್ತಿದ್ದ ಯುಎಸ್ ಅಧ್ಯಕ್ಷೀಯ ಚುನಾವಣೆ ಅಂತಿಮ ಹಂತಕ್ಕೆ ಬಂದಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರಿ ಮುನ್ನಡೆ ಪಡೆದುಕೊಂಡಿದ್ದು, ಎರಡನೇ ಬಾರಿಗೆ ಯುಎಸ್ ಅಧ್ಯಕ್ಷರಾಗುವುದು ಖಚಿತವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ರೋಚಕ ಹಣಾಹಣಿ ನಡೆದರೂ ಅಂತಿಮವಾಗಿ ಟ್ರಂಪ್ ಮುನ್ನಡೆ ಪಡೆದರು.

ಸದ್ಯದ ಅಪ್‌ಡೇಟ್ ಪ್ರಕಾರ ಟ್ರಂಪ್ 276 ಎಲೆಕ್ಟ್ರೋಲ್ ಮತಗಳನ್ನು ಪಡೆದಿದ್ದಾರೆ. ಗೆಲುವು ಸಾಧಿಸಲು 270 ಮತಗಳನ್ನು ಪಡೆಯಬೇಕಿದ್ದು, ಅದಕ್ಕಿಂತ ಆರು ಮತಗಳನ್ನು ಹೆಚ್ಚು ಪಡೆದುಕೊಂಡಿದ್ದಾರೆ. 51 ಪ್ರತಿಶತ ಮತಗಳನ್ನು ಟ್ರಂಪ್ ಪಡೆದಿದ್ದು, ಕಮಲಾ ಹ್ಯಾರಿಸ್ 47 ಪ್ರತಿಶತ ಮತ ಪಡೆದಿದ್ದಾರೆ.

Us election results 2024 states won donald trump kamala harris

ಯುಎಸ್‌ನ 50 ರಾಜ್ಯಗಳು ಮತ್ತು ವಾಷಿಂಗ್ಟನ್‌ ಡಿಸಿ ಸೇರಿ ಒಟ್ಟು 538 ಮತಗಳು ಹಂಚಿಕೆಯಾಗಿದೆ. ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಂತಹ ನಿರ್ಣಾಯಕ ಸ್ವಿಂಗ್ ರಾಜ್ಯಗಳನ್ನು ಗೆದ್ದಿರುವ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಪಡೆಯಲು ಅಗತ್ಯವಿರುವ 270 ಚುನಾವಣಾ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಯಾವ ರಾಜ್ಯಗಳಲ್ಲಿ ಯಾರು ಗೆಲುವು ಸಾಧಿಸಿದರು ಎನ್ನುವ ಪಟ್ಟಿ ಇಲ್ಲಿದೆ.

ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ರಾಜ್ಯಗಳು

ಅಲಬಾಮಾ, ಅಲಾಸ್ಕಾ, ಅರ್ಕಾನ್ಸಾಸ್, ಫ್ಲೋರಿಡಾ, ಜಾರ್ಜಿಯಾ, ಇದಾಹೊ, ಇಡಿಯಾನಾ, ಅಯೋವಾ, ಕಾನ್ಸಾಸ್, ಕೆಂಟುಕಿ, ಲೂಯಿಸಿಯಾನ, ಮಿಸಿಸಿಪ್ಪಿ, ಮಿಸೌರಿ, ಮೊಂಟಾನಾ, ನೆಬ್ರಸ್ಕಾ, ಉತ್ತರ ಕೆರೊಲಿನಾ, ಉತ್ತರ ಡಕೋಟಾ, ಓಹಿಯೋ, ಒಕ್ಲಹೋಮ, ಪೆನ್ಸಿಲ್ವೇನಿಯಾ, ದಕ್ಷಿಣ ಕೆರೊಲಿನಾ, ದಕ್ಷಿಣ ಡಕೋಟಾ, ಟೆನ್ನೆಸ್ಸೀ, ಟೆಕ್ಸಾಸ್, ಉತಾಹ್, ವಿಸ್ಕಾನ್ಸಿನ್, ಪಶ್ಚಿಮ ವರ್ಜೀನಿಯಾ, ವ್ಯೋಮಿಂಗ್.

ಕಮಲಾ ಹ್ಯಾರಿಸ್ ಗೆದ್ದ ರಾಜ್ಯಗಳು

ಕ್ಯಾಲಿಫೋರ್ನಿಯಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿನ್ನೇಸೋಟ, ನ್ಯೂ ಹ್ಯಾಂಪ್‌ಶೈರ್, ನ್ಯೂಜೆರ್ಸಿ, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ಒರೆಗಾನ್, ರೋಡ್ ಐಲೆಂಡ್, ವರ್ಮೊಂಟ್, ವರ್ಜೀನಿಯಾ, ವಾಷಿಂಗ್ಟನ್.

ಡೊನಾಲ್ಡ್‌ ಟ್ರಂಪ್‌ಗೆ ಶುಭಾಶಯ

ಡೊನಾಲ್ಡ್ ಟ್ರಂಪ್ ಗೆಲುವು ಖಚಿತವಾಗುತ್ತಿದ್ದಂತೆ ಜಗತ್ತಿನಾದ್ಯಂತ ಪ್ರಮುಖ ರಾಷ್ಟ್ರಗಳು ಪ್ರತಿಕ್ರಿಯೆ ನೀಡಿದ್ದು, ಯುಎಸ್‌ನ ಹೊಸ ಅಧ್ಯಕ್ಷರಿಗೆ ಶುಭಾಶಯ ತಿಳಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡೊನಾಲ್ಡ್‌ ಟ್ರಂಪ್‌ಗೆ ಶುಭಾಶಯ ಕೋರಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ನೂತನ ಅಧ್ಯಕ್ಷರಿಗೆ ಶುಭ ಕೋರಿದ್ದಾರೆ.

ಕಮಲಾ ಹ್ಯಾರಿಸ್ ಪೂರ್ವಜರ ಗ್ರಾಮದಲ್ಲಿ ಮೌನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಸೋಲು ಖಚಿತವಾಗುತ್ತಿದ್ದಂತೆ ಅವರ ಪೂರ್ವಜರ ಗ್ರಾಮವಾದ ತಮಿಳುನಾಡಿನ ತುಳಸೇಂದ್ರಪುರಂನಲ್ಲಿ ನೀರವ ಮೌನ ಆವರಿಸಿದೆ. ಕಮಲಾ ಗೆಲುವಿಗೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ್ದಲ್ಲದೆ, ಫ್ಲೆಕ್ಸ್, ಬ್ಯಾನರ್ ಕಟ್ಟಿ ಶುಭ ಹಾರೈಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+