ISIS ಅಡಗುದಾಣಗಳ ಮೇಲೆ ಶಕ್ತಿಶಾಲಿ ಬಾಂಬ್ ಹಾಕಿದ ಅಮೆರಿಕ

ಆಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ ಗುಹೆಗಳ ಮೇಲೆ ನಡೆಸಲಾಗಿರುವ ದಾಳಿ; ಬಾಂಬ್ ಗಳಲ್ಲೇ ಅತಿ ಶಕ್ತಿಶಾಲಿಯಾದ ಜಿಬಿಯು-43 ಎಂಬ ಶಕ್ತಿಶಾಲಿ ಬಾಂಬ್ ಹಾಕಿದ ಅಮೆರಿಕ.

ವಾಷಿಂಗ್ಟನ್, ಏಪ್ರಿಲ್ 13: ಆಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಉಗ್ರರ ಅಡಗುದಾಣಗಳ ಮೇಲೆ ಅಮೆರಿಕ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿದೆ.

ಆಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ ಗುಹೆಗಳಲ್ಲಿ ಅಡಗಿರುವ ಮಾಹಿತಿ ಕಲೆಹಾಕಿದ ಅಮೆರಿಕದ ಸೇನೆ, ಬಾಂಬ್ ಗಳಲ್ಲೇ ಅತಿ ಶಕ್ತಿಶಾಲಿಯಾದ ಜಿಬಿಯು-43 ಎಂಬ ಶಕ್ತಿಶಾಲಿ ಬಾಂಬ್ ಗಳನ್ನು ಹಾಕಿದೆ ಎಂದು ಮೂಲಗಳು ಹೇಳಿವೆ.

US drops 'mother of all bombs' on Islamic State in Afghanistan

ಈವರೆಗೆ ಅಮೆರಿಕ ಕೈಗೊಂಡಿದ್ದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಂಥ ಶಕ್ತಿಶಾಲಿ ಬಾಂಬ್ ಗಳನ್ನು ಉಪಯೋಗಿಸಿರಲಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಕಾಲಮಾನದ ಪ್ರಕಾರ, ಗುರುವಾರ ರಾತ್ರಿಯ ವೇಳೆ ಆಫ್ಘಾನಿಸ್ತಾನದ ವಾಯು ಸರಹದ್ದು ಪ್ರವೇಶಿಸಿದ ಅಮೆರಿಕದ ಸೇನಾ ಪಡೆಗಳು, ಆಫ್ಘಾನಿಸ್ತಾನ ಪಾಕಿಸ್ತಾನ ಗಡಿ ತಲುಪಿದವು.

ಮೊದಲೇ ಗುರುತಿಸಿದ್ದಂತೆ, ನಂಗರ್ ಹಾರ್ ಪ್ರಾಂತ್ಯದಲ್ಲಿರುವ ಗುಹೆಗಳ ಮೇಲೆ ಎಂಸಿ-130 ವಿಮಾನದಲ್ಲಿ ತರಲಾಗಿದ್ದ ಜಿಬಿಯು-43 ಮಾದರಿಯ ಬಾಂಬ್ ಗಳನ್ನು ಸಾಲು ಗುಹೆಗಳ ಮೇಲೆ ಸಾಲಾಗಿ ಉದುರಿಸುತ್ತಾ ಬಂದಿತು ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಯಾವಾಗ ಐಎಸ್ಐಎಸ್ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಈ ಉಗ್ರರು ಕಡಿದಾದ ಈ ಪರ್ವತ ಪ್ರದೇಶದ ಗುಹೆಗಳಲ್ಲಿ ಅಡಗಿ ಕುಳಿತುಬಿಡುತ್ತಿದುದರಿಂದ ಅವರನ್ನು ಹಿಡಿಯಲು ಅಥವಾ ಅವರ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ, ಈ ಬಾರಿ ಶಕ್ತಿ ಶಾಲಿ ಬಾಂಬ್ ಗಳ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+