ಪ್ರಧಾನಿ ಸಿಂಗ್‌ಗೆ ಅಮೆರಿಕ ಕೋರ್ಟ್‌ ಸಮನ್ಸ್‌

ವಾಷಿಂಗ್ಟನ್, ಸೆ.26 : ಸಿಖ್‌ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಅಮೆರಿಕದ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. 'ಸಿಖ್‌ ಫಾರ್‌ ಜಸ್ಟೀಸ್‌' ಎಂಬ ಸಂಸ್ಥೆ ವಾಷಿಂಗ್‌ಟನ್ ಡಿಸಿಯಲ್ಲಿರುವ ಫೆಡರಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸಮನ್ಸ್‌ ಜಾರಿಗೊಳಿಸುವಂತೆ ಮಾಡಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್‌ ನೀಡಿದ 20 ದಿನಗಳ ನಂತರ ಪ್ರಧಾನಿ ಸಿಂಗ್‌ ಅವರಿಗೂ ಸಮನ್ಸ್‌ ಬಂದಿದೆ. ನ್ಯೂಯಾರ್ಕ್‌ 'ಸಿಖ್‌ ಫಾರ್ ಜಸ್ಟೀಸ್‌' ಮನಮೋಹನ್ ಸಿಂಗ್ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದನ್ನು ಆಧರಿಸಿ ಸಮನ್ಸ್‌ ಜಾರಿಗೊಳಿಸಲಾಗಿದೆ.

Manmohan Singh

ಸಿಖ್‌ ನರಮೇಧದಲ್ಲಿ ಭಾಗಿಯಾದವರನ್ನು ರಕ್ಷಿಸುತ್ತಿದ್ದಾರೆ ಮತ್ತು 90ರ ದಶಕದಲ್ಲಿ ಸಿಖ್‌ ಬಂಡಾಯಗಾರರನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಂಜಾಬ್‌ ಪೊಲೀಸರಿಗೆ ನಗದು ಬಹುಮಾನ ನೀಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಮನಮೋಹನ್‌ ಸಿಂಗ್‌ ಮೇಲಿದೆ.

ಅಮೆರಿಕದ ಜಿಲ್ಲಾ ನ್ಯಾಯಾಧೀಶ ಬೋಸ್‌ಬರ್ಗ್‌, ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಪ್ರಧಾನಿಗೆ ಸಮನ್ಸ್ ಮತ್ತು ದೂರು ತಲುಪಿಸಲು ಫಿರ್ಯಾದಿಗೆ 120 ದಿನಗಳ ಕಾಲಾವಕಾಶ ನೀಡಿಲಾಗಿದೆ. ಸದ್ಯ ಪ್ರಧಾನಿ ಮನಮೋಹನ್ ಸಿಂಗ್‌ ಅಮೆರಿಕಕ್ಕೆ ಭೇಟಿ ನೀಡಿದ್ದು, ಅಲ್ಲಿಯೇ ಅವರಿಗೆ ಸಮನ್ಸ್‌ ತಲುಪಿಸಲು 'ಸಿಖ್‌ ಫಾರ್‌ ಜಸ್ಟೀಸ್‌' ಸಂಘಟನೆ ಯತ್ನಿಸುತ್ತಿದೆ.

ಆದರೆ ಪ್ರಧಾನಿಗೆ ಹೆಚ್ಚಿನ ಭದ್ರತೆ ಇರುವುದರಿಂದ ಸಮನ್ಸ್‌ ತಲುಪಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ತುರ್ತಾಗಿ ಸಮನ್ಸ್ ತಲುಪಿಸಲು ಕೋರಿ ವಾಷಿಂಗ್‌ಟನ್‌ ಫೆಡರಲ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸಂಘಟನೆ ನಿರ್ಧರಿಸಿದೆ.

ಈ ಅರ್ಜಿಯಂತೆ ಕೋರ್ಟ್‌ ಅನುಮತಿ ನೀಡಿದರೆ ವೈಟ್‌ಹೌಸ್‌ ಸಿಬ್ಬಂದಿಗೆ ಪ್ರಧಾನಿಯವರ ಸಮನ್ಸ್‌ ತಲುಪಿಸಿ ಅಲ್ಲಿಂದ ಮನಮೋಹನ್‌ ಸಿಂಗ್‌ ಅವರಿಗೆ ಸಮನ್ಸ್‌ ತಲುಪಿಸಲಾಗುವುದು ಎಂದು ಸಂಘಟನೆ ಹೇಳಿದೆ. (ಸೋನಿಯಾಗೆ ಸಂಕಷ್ಟ: ಅಮೆರಿಕ ಕೋರ್ಟ್ ಸಮನ್ಸ್)

ಆರೋಪಗಳೇನು : ಸಿಖ್‌ ನರಮೇಧ ನಡೆದಾಗ ಅಂದು ಹಣಕಾಸು ಮಂತ್ರಿಯಾಗಿದ್ದ ಮನಮೋಹನ್‌ ಸಿಂಗ್‌ ಸಿಖ್‌ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರಿಗೆ ನಗದು ರೂಪದ ಬಹುಮಾನ ನೀಡಿದ್ದರು ಎಂದು ಎಸ್‌ಎಫ್‌ಜೆ ಅರ್ಜಿಯಲ್ಲಿ ಆರೋಪಿಸಿದೆ.

ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಸಿಖ್‌ ನರಮೇಧದಲ್ಲಿ ಪಾಲ್ಗೊಂಡ ತಮ್ಮ ಪಕ್ಷದ ರಾಜಕಾರಣಿಗಳನ್ನು ರಕ್ಷಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

ಪ್ರತಿಭಟನೆ : ಸೆ.27ರಂದು ಶ್ವೇತಭವನದಲ್ಲಿ ಮನಮೋಹನ್‌ ಸಿಂಗ್‌ ಮತ್ತು ಅಮೆರಿಕಾ ಅಧ್ಯಕ್ಷ ಒಬಾಮಾ ಭೇಟಿಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೆನಡಾ ಮತ್ತು ಅಮೆರಿಕದ ಸಿಖ್‌ ಸಂಘಟನೆಗಳು ವೈಟ್‌ ಹೌಸ್‌ ಎದುರು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+