ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಯ್ಯಿಗೆ ಮುಯ್ಯಿ: ಅಮೆರಿಕಾದ ರಾಯಭಾರ ಕಚೇರಿ ಮುಚ್ಚುವಂತೆ ಚೀನಾ ಆದೇಶ

|
Google Oneindia Kannada News

ಬೀಜಿಂಗ್, ಜುಲೈ 24: ಹ್ಯೂಸ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯನ್ನು ಮುಚ್ಚುವ ಆದೇಶವನ್ನು ಅಮೆರಿಕಾ ನೀಡಿದ ಬೆನ್ನಲ್ಲೇ ಚೀನಾದ ನೈರುತ್ಯ ನಗರವಾದ ಚೆಂಗ್ಡುನಲ್ಲಿರುವ ಅಮೆರಿಕಾ ದೂತಾವಾಸವನ್ನು ಮುಚ್ಚುವಂತೆ ಚೀನಾ ಆದೇಶ ನೀಡಿದೆ. ಈ ಮೂಲಕ ಸೇಡಿಗೆ ಸೇಡು ಎಂಬಂತೆ ಚೀನಾ ಪ್ರತೀಕಾರ ತೆಗೆದುಕೊಂಡಿದೆ.

Recommended Video

The Indian Premier League (IPL) 2020 is all set to kick-off | Oneindia Kannada

ಚೆಂಗ್ಡುವಿನಲ್ಲಿರುವ ರಾಯಭಾರ ಕಚೇರಿ ಮುಚ್ಚುವಿಕೆಯು ''ಅಮೆರಿಕಾದ ಅವಿವೇಕದ ಕ್ರಮಗಳಿಗೆ ಕಾನೂನುಬದ್ಧ ಮತ್ತು ಅಗತ್ಯವಾದ ಪ್ರತಿಕ್ರಿಯೆ" ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ.

ಹೂಸ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಮುಚ್ಚಲು ಅಮೆರಿಕಾ ಆದೇಶಹೂಸ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಮುಚ್ಚಲು ಅಮೆರಿಕಾ ಆದೇಶ

ಅಮೆರಿಕಾ ರಾಯಭಾರ ಕಚೇರಿಯಲ್ಲಿ 200 ಜನರಿಂದ ಕಾರ್ಯ ನಿರ್ವಹಣೆ

ಅಮೆರಿಕಾ ರಾಯಭಾರ ಕಚೇರಿಯಲ್ಲಿ 200 ಜನರಿಂದ ಕಾರ್ಯ ನಿರ್ವಹಣೆ

"ಚೆಂಗ್ಡು ದೂತಾವಾಸದಲ್ಲಿ ಸುಮಾರು 200 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಸುಮಾರು 50 ಯುಎಸ್ ಅಧಿಕಾರಿಗಳು ಸೇರಿದ್ದಾರೆ" ಎಂದು ಹೇಳಲಾಗಿದೆ.

72 ಗಂಟೆಗಳಲ್ಲಿ ರಾಯಭಾರ ಕಚೇರಿ ಮುಚ್ಚಬೇಕು ಎಂದು ಆದೇಶಿಸಿದ್ದ ಅಮೆರಿಕಾ

72 ಗಂಟೆಗಳಲ್ಲಿ ರಾಯಭಾರ ಕಚೇರಿ ಮುಚ್ಚಬೇಕು ಎಂದು ಆದೇಶಿಸಿದ್ದ ಅಮೆರಿಕಾ

ಅಮೆರಿಕದ ಹೂಸ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಮುಚ್ಚಲು ಅಮೆರಿಕಾದ ಆಡಳಿತವು ಚೀನಾಕ್ಕೆ ಈ ಹಿಂದೆ ಆದೇಶ ನೀಡಿತ್ತು. ಆದರೆ ಯಾವಾಗ ಮುಚ್ಚಬೇಕು ಎಂದು ಅಧಿಕೃತವಾಗಿ ಹೇಳದಿದ್ದರೂ, ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪರವಾಗಿ, 72 ಗಂಟೆಗಳ ಒಳಗೆ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಅಮೆರಿಕಾ, ದೂತಾವಾಸವನ್ನು ಕೇಳಿದೆ ಎಂದು ತಿಳಿಸಲಾಗಿದೆ. ಪತ್ರಿಕೆ ಸಂಪಾದಕ ಹೂ ಶಿಜಿನ್ ಪರವಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಲಾಗಿದೆ.

ಕೊರೊನಾ ಲಸಿಕೆ: ಚೀನಾದೊಂದಿಗೆ ಕೆಲಸ ಮಾಡಲು ಸಿದ್ಧ ಎಂದ ಟ್ರಂಪ್ಕೊರೊನಾ ಲಸಿಕೆ: ಚೀನಾದೊಂದಿಗೆ ಕೆಲಸ ಮಾಡಲು ಸಿದ್ಧ ಎಂದ ಟ್ರಂಪ್

ರಾಯಭಾರ ಕಚೇರಿಯಲ್ಲಿ ದಾಖಲೆಗಳಿಗೆ ಬೆಂಕಿ ಇಟ್ಟಿದ್ದ ಚೀನಾ

ರಾಯಭಾರ ಕಚೇರಿಯಲ್ಲಿ ದಾಖಲೆಗಳಿಗೆ ಬೆಂಕಿ ಇಟ್ಟಿದ್ದ ಚೀನಾ

ರಾಯಭಾರ ಕಚೇರಿಯ ಹೊರಗೆ ಕೆಲವು ಕಾಗದಗಳನ್ನು ಸುಡುವ ಘಟನೆ ಅಮೆರಿಕಾ ಹ್ಯೂಸ್ಟನ್ ರಾಯಭಾರ ಕಚೇರಿಯಲ್ಲಿ ನಡೆದಿತ್ತು. ಕಾಗದ ಸುಡುವ ಘಟನೆಯ ನಂತರ, ಹರ್ಸ್ಟನ್ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡವು ದೂತಾವಾಸಕ್ಕೆ ಆಗಮಿಸಿತು. ಆದರೆ, ತಕ್ಷಣ ಅಗ್ನಿಶಾಮಕ ದಳವನ್ನು ಒಳಗೆ ಬಿಟ್ಟಿರಲಿಲ್ಲ. ಎರಡು ಸ್ಥಳೀಯ ಟಿವಿ ಚಾನೆಲ್‌ಗಳ ಹೂಸ್ಟನ್ ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದರು. ಈ ಘಟನೆ ನಡೆದ ಬಳಿಕ ಚೀನಾ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಆದೇಶ ನೀಡಲಾಯಿತು. ಆದರೆ ಯಾರು ಆದೇಶ ನೀಡಿದರು ಎಂಬುದು ಬಹಿರಂಗಪಡಿಸಿಲ್ಲ.

 ಚೀನಾ-ಅಮೆರಿಕಾ ನಡುವೆ ಮತ್ತಷ್ಟು ಬಿಗಡಾಯಿಸಿದ ಸಂಬಂಧ

ಚೀನಾ-ಅಮೆರಿಕಾ ನಡುವೆ ಮತ್ತಷ್ಟು ಬಿಗಡಾಯಿಸಿದ ಸಂಬಂಧ

ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಉದ್ವಿಗ್ನತೆ ತೀವ್ರವಾಗಿ ಹೆಚ್ಚುತ್ತಿರುವ ಮಧ್ಯೆ ದೂತಾವಾಸಗಳನ್ನು ಮುಚ್ಚುತ್ತಿರುವುದು ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಹಾಳುಗೆಡವಿದೆ.

"ಚೀನಾ-ಯುಎಸ್ ಸಂಬಂಧಗಳಲ್ಲಿನ ಪ್ರಸ್ತುತ ಪರಿಸ್ಥಿತಿ ಚೀನಾ ನೋಡಲು ಬಯಸುತ್ತಿಲ್ಲ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ, "ಈ ಎಲ್ಲದಕ್ಕೂ ಅಮೆರಿಕಾ ಕಾರಣವಾಗಿದೆ" ಎಂದು ಚೀನಾ ಹೇಳಿದೆ.

"ಯುನೈಟೆಡ್ ಸ್ಟೇಟ್ಸ್ ತನ್ನ ತಪ್ಪು ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಮತ್ತು ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಜಾರಿಗೆ ತರಲು ಅಗತ್ಯವಾದ ಪರಿಸ್ಥಿತಿಗಳನ್ನು ರಚಿಸುವಂತೆ ನಾವು ಮತ್ತೊಮ್ಮೆ ಒತ್ತಾಯಿಸುತ್ತೇವೆ." ಎಂದು ಚೀನಾ ಹೇಳಿದೆ.

 ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಹೊಡೆತ

ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಹೊಡೆತ

ಸದ್ಯ ಕೊರೊನಾವೈರಸ್ ಸಾಂಕ್ರಾಮಿಕದಿಂದ ಹಿಡಿದು ಬೀಜಿಂಗ್‌ನ-ವಾಷಿಂಗ್ಟನ್‌ ನಡುವೆ ವ್ಯಾಪಾರದ ವರೆಗೂ ಚೀನಾ, ಅಮೆರಿಕಾ ನಡುವಿಕ ದ್ವಿಪಕ್ಷೀಯ ಸಂಬಂಧವು ಹಾಳಾಗಿದೆ. ಇದರ ನಡುವೆ ಉಭಯ ದೇಶಗಳ ರಾಯಭಾರ ಕಚೇರಿ ಮುಚ್ಚುವಿಕೆಯ ನಡೆ ದ್ವಿಪಕ್ಷೀಯ ಸಂಬಂಧಗಳಿಗೆ "ಹೊಡೆತ" ಎಂದು ರಾಜತಾಂತ್ರಿಕ ವಿಶ್ಲೇಷಕರು ಬಣ್ಣಿಸಿದ್ದಾರೆ.

English summary
China has ordered the United States to close its consulate in the southwestern city of Chengdu, retaliating against Washington's move earlier this week to shut down the Chinese consulate in the city of Houston.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X