ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ್ ಸೆಂಟರ್ ಹಗರಣ: ನಾಲ್ವರು ಭಾರತೀಯರು ದೋಷಿ

ಭಾರತೀಯ ಮೂಲದ ಕಾಲ್ ಸೆಂಟರ್ ಗಳಿಂದ ಹಲವಾರು ಅಮೆರಿಕನ್ನರನ್ನು ವಂಚಿಸಿದ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಭಾರತೀಯರು ಹಾಗೂ ಓರ್ವ ಪಾಕಿಸ್ತಾನಿಯನ್ನು ದೋಷಿ ಎಂದು ಘೋಷಿಸಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಟೆಕ್ಸಾಸ್, ಜೂನ್ 06: ಭಾರತೀಯ ಮೂಲದ ಕಾಲ್ ಸೆಂಟರ್ ಗಳಿಂದ ಅಮೆರಿಕನ್ನರನ್ನು ವಂಚಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಭಾರತೀಯರು ಮತ್ತು ಪಾಕಿಸ್ತಾನದ ಪ್ರಜೆಯೊಬ್ಬನನ್ನು ನ್ಯಾಯಾಲಯವೊಂದು ದೋಷಿಯನ್ನಾಗಿ ಪರಿಗಣಿಸಿದೆ.

ಭಾರತೀಯ ಮೂಲದ ರಾಜುಭಾಯ್ ಪಟೇಲ್ (32), ವಿರಾಜ್ ಪಟೇಲ್ (33), ದಿಲೀಪ್ ಕುಮಾರ್ ಅಂಬಾಲ್ ಪಟೇಲ್ (53) ಮತ್ತು ಹಾರ್ದಿಕ್ ಪಟೇಲ್ (31) ಹಾಗೂ ಪಾಕಿಸ್ತಾನದ ಫಹಾದ್ ಅಲಿ (25) ಅವರು ತಪ್ಪಿತಸ್ಥರು ಎಂದು ಟೆಕ್ಸಾಸ್ ಕೋರ್ಟ್ ಘೋಷಿಸಿದೆ.

US call centre scam: 4 Indians, 1 Pakistani plead guilty

ಟೆಕ್ಸಾಸ್ಸಿನ ಸದರನ್ ಡಿಸ್ಟ್ರಿಕ್ಸ್ ನ ಜಿಲ್ಲಾ ನ್ಯಾಯಾಧೀಶರಾದ ಡೇವಿಡ್ ಹಿಟ್ನರ್ ಅವರ ಮುಂದೆ ನಾಲ್ವರು ಆರೋಪಿಗಳು ಹಣ ದುರ್ಬಳಕೆ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.[ನಕಲಿ ಕಾಲ್ ಸೆಂಟರಿನಿಂದ 500 ಕೋಟಿ ರು ವಂಚನೆ]

ಕಾಲ್ ಸೆಂಟರ್‍ ಗಳ ಮೂಲಕ ಅಮೆರಿಕನ್ನರಿಗೆ ದೂರವಾಣಿ ಕರೆ ಮಾಡಿ ನಕಲಿ ಯೋಜನೆಗಳ ಮೂಲಕ ದೊಡ್ಡ ಮಟ್ಟದ ವಂಚನೆ ಪ್ರಕರಣಗಳಲ್ಲಿ ಇವರು ಶಾಮೀಲಾಗಿದ್ದಾರೆ. ಈ ದೋಷಿಗಳಿಗೆ ಜೈಲು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಶೀಘ್ರದಲ್ಲೇ ಘೋಷಿಸಲಿದೆ.

ಅಮೆರಿಕದ ಪ್ರಜೆಗಳಿಗೆ ಕಾಲ್ ಮಾಡಿ, ತೆರಿಗೆ ಅವ್ಯವಹಾರದಲ್ಲಿ ಸಿಲುಕಿದ್ದೀರಿ. ತೆರಿಗೆ ಸಮಸ್ಯೆಯಿಂದ ಪಾರಾಗಬೇಕಾದರೆ 500 ರಿಂದ 3000 ಡಾಲರ್ ​ವರೆಗೆ ದಂಡ ಪಾವತಿಸಬೇಕು ಎಂದು ಕಂದಾಯ ಅಧಿಕಾರಿಗಳ ಹೆಸರಿನಲ್ಲಿ ಹೆದರಿಸುತ್ತಿದ್ದರು. ಅನೇಕರಿಂದ ಹಣ ವಸೂಲಿ ಮಾಡಿಕೊಂಡಿದ್ದರು.

English summary
In the massive telephone impersonation fraud and money laundering case in the US, four Indians and 1 Pakistani have pleaded guilty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X