ನಕಲಿ ಕಾಲ್ ಸೆಂಟರಿನಿಂದ 500 ಕೋಟಿ ರು ವಂಚನೆ

ಥಾಣೆ, ಅಕ್ಟೋಬರ್ 06: ಕಾಲ್ ಸೆಂಟರ್ ಹೆಸರಿನಲ್ಲಿ ಅಮೆರಿಕದ ಪ್ರಜೆಗಳಿಗೆ ಸುಮಾರು 500 ಕೋಟಿ ರು ವಂಚನೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ 70 ಜನರನ್ನು ಬಂಧಿಸಲಾಗಿದ್ದು, 650 ಕ್ಕೂ ಅಧಿಕ ಮಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಘಟನೆ ನಡೆದಿದೆ.

ಸುಮಾರು 200 ಕ್ಕೂ ಅಧಿಕ ಮಹಾರಾಷ್ಟ್ರ ಪೊಲೀಸರು ಈ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಬಹುಕೋಟಿ ಹಗರಣವನ್ನು ಬೆಳಕಿಗೆ ತಂದಿದ್ದಾರೆ.

Maharashtra: Fake call centres busted; 750 people detained

ಅಮೆರಿಕ ಪ್ರಜೆಗಳು ಟಾರ್ಗೆಟ್: ಕಂದಾಯ ಅಧಿಕಾರಿಗಳ ಹೆಸರಿನಲ್ಲಿ ಅಮೆರಿಕದ ಪ್ರಜೆಗಳಿಗೆ ಕಾಲ್ ಮಾಡಿ, ತೆರಿಗೆ ಅವ್ಯವಹಾರದಲ್ಲಿ ಸಿಲುಕಿದ್ದೀರಿ. ತೆರಿಗೆ ಸಮಸ್ಯೆಯಿಂದ ಪಾರಾಗಬೇಕಾದರೆ 500 ರಿಂದ 3000 ಡಾಲರ್​ವರೆಗೆ ದಂಡ ಪಾವತಿಸಬೇಕು ಎಂದು ಹೆದರಿಸುತ್ತಿದ್ದರು. ಅನೇಕರಿಂದ ಹಣ ವಸೂಲಿ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ, ಒಟ್ಟಾರೆ ಅವ್ಯವಹಾರದ ಮೊತ್ತ ಬೆಳಕಿಗೆ ಬರಬೇಕಿದೆ.

ಥಾಣೆಯ ಮೀರಾ ರೋಡ್​ನ ರಾಯಲ್ ಕಾಲೇಜ್ ಸಮೀಪವಿದ್ದ ಈ ಕಾಲ್ ಸೆಂಟರ್ ನ ಮಾಲೀಕ ಹೈದರ್ ಅಲಿ ಆಯುಬ್ ಮಸೂರಿ (24) ತಲೆ ಮರೆಸಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+