''ವುಹಾನ್‌ಗೆ ಕೊರೊನಾವೈರಸ್ ತಂದಿದ್ದು ಯುಎಸ್ ಆರ್ಮಿ"

ಬೀಜಿಂಗ್, ಮಾರ್ಚ್ 13: ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾವೈರಸ್ ಚೀನಾದ ವುಹಾನ್ ಪ್ರಾಂತ್ಯದಿಂದ ಮೊದಲಿಗೆ ಹಬ್ಬಿದ್ದು ಎಂದೇ ಎಲ್ಲರೂ ತಿಳಿದಿದ್ದಾರೆ. ಆದರೆ, ಚೀನಾಕ್ಕೆ ಕೊರೊನಾವೈರಸ್ ತಂದಿದ್ದು ಯುಎಸ್ ಆರ್ಮಿ ಎಂದು ಚೀನಾದ ಅಧಿಕಾರಿಯೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಯುಎಸ್ ಹಾಗೂ ಚೀನಾ ನಡುವೆ ವಾಕ್ಸಮರ ಹೆಚ್ಚಾಗುತ್ತಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿಯಂತೆ ಯುಎಸ್ ನಿಂದ ವುಹಾನ್ ಗೆ ವೈರಸ್ ಬಂದಿರಬಹುದು.

ಯುಎಸ್ ಕಾಯಿಲೆ ನಿಯಂತ್ರಣ ಹಾಗೂ ತಡೆಗಟ್ಟುವ ಕೇಂದ್ರ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ ಫೀಲ್ಡ್ ಅವರು ನೀಡಿದ ಹೇಳಿಕೆಯಂತೆ ಕೆಲವು ಜ್ವರಪೀಡಿತ ರೋಗಿಗಳಿಗೆ ಸರಿಯಾಗಿ ರೋಗಪತ್ತೆ ಮಾಡದೆ ಇರಬಹುದು, ಅವರಲ್ಲಿ ಕೆಲವರಿಗೆ ಕೊರೊನಾವೈರಸ್ ಇದ್ದಿರಬಹುದು ಎಂದಿದ್ದಾರೆ.

ರೆಡ್ ಫೀಲ್ಡ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾದ ವಕ್ತಾರ ಝಹಾವೋ ಲಿಜಿಯಾನ್, ಯುಎಸ್ ಆರ್ಮಿ ಬಹುಶಃ ಕೋವಿಡ್ 19 ವೈರಸನ್ನು ವುಹಾನ್ ಗೆ ತಂದಿರಬಹುದು ಎಂದಿದ್ದಾರೆ.

US army might have brought coronavirus to Wuhan, says China government spokesperson

ಡಿಸೆಂಬರ್ ತಿಂಗಳಿನಲ್ಲಿ ವುಹಾನ್ ಪ್ರಾಂತ್ಯದ ಪ್ರಾಣಿಗಳನ್ನು ಕೊಂದು ಮಾರಾಟ ಮಾಡುವ ಕೇಂದ್ರದಿಂದ ಕೊರೊನಾವೈರಸ್ ಹರಡಿದೆ ಎಂಬ ಸುದ್ದಿ ಇನ್ನು ದೃಢಪಟ್ಟಿಲ್ಲ ಎಂದು ಲಿಜಿಯಾನ್ ಹೇಳಿದ್ದಾರೆ.

ವೈರಸ್ ಮೂಲ ಎಲ್ಲಿಯದ್ದು ಎಂಬುದನ್ನು ವಿಜ್ಞಾನಿಗಳು ಕಂಡು ಹಿಡಿಯಬೇಕು, ಈಗ ವೈರಸ್ ನಿಯಂತ್ರಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೇ ಹೊರತು ವೈರಸ್ ಮೂಲದ ಬಗ್ಗೆ ಅಲ್ಲ ಎಂದಿದ್ದಾರೆ.

ಯುಎಸ್ ಸರ್ಕಾರದ ಸೆಕ್ರೆಟರಿ ಮೈಕ್ ಪೊಪೊಯಿ ಅವರು ಕೊರೊನಾವೈರಸ್ ಅನ್ನು ವುಹಾನ್ ವೈರಸ್ ಎಂದು ಬಹಿರಂಗವಾಗಿ ಕರೆದಿದ್ದನ್ನು ಚೀನಾ ವಕ್ತಾರರು ಖಂಡಿಸಿದ್ದಾರೆ.

READ IN ENGLISH

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+