US And Iran: ಹೋರ್ಮುಜ್ ಜಲಸಂಧಿ ಟಾರ್ಗೆಟ್ ಮಾಡಿ ಮಿಸೈಲ್ ಹಾರಿಸಿದ ಇರಾನ್ ಸೇನೆ

ಅಮೆರಿಕ ಮತ್ತು ಇರಾನ್ ನಡುವೆ ಒಂದು ಕಡೆ ಜಿನೇವಾದಲ್ಲಿ ಮಾತುಕತೆ ಆರಂಭ ಆಗಿದೆ. ಇದೀಗ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಸಂಧಾನ ಮಾತುಕತೆ ಆಗಲಿ ಎಂಬುದೇ ಜಗತ್ತಿನ ಬಯಕೆ ಆಗಿತ್ತು. ಆದರೆ ಇಂತಹ ಸಮಯದಲ್ಲೇ ಇರಾನ್ ಘೋರ ತಪ್ಪು ಮಾಡಿದ ರೀತಿ ಕಾಣುತ್ತಿದೆ. ಏಕೆಂದರೆ ಒಂದು ಕಡೆ ಸಂಧಾನ ಮಾತುಕತೆ ನಡೆಯುತ್ತಿದ್ದರೆ ಇದೇ ಸಮಯದಲ್ಲಿ ಇನ್ನೊಂದು ಕಡೆ ಇರಾನ್ ಸೇನೆ ಹೋರ್ಮುಜ್ ಜಲಸಂಧಿ ಟಾರ್ಗೆಟ್ ಮಾಡಿ ಮಿಸೈಲ್ ಹಾರಿಸಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಹಾಗಾದರೆ ಈ ಹೋರ್ಮುಜ್ ಜಲಸಂಧಿ ಯಾಕಿಷ್ಟು ಸೂಕ್ಷ್ಮವಾದ ಪ್ರದೇಶ? ಏನಾಗುತ್ತಿದೆ ಇರಾನ್ ಸುತ್ತಮುತ್ತ? ಬನ್ನಿ ತಿಳಿಯೋಣ.

ಎಲ್ಲಿ ನೋಡಿದರೂ ಬರೀ ಯುದ್ಧ ಹಾಗೂ ಹಿಂಸಾಚಾರ ಕಂಡು, ಮನುಷ್ಯರು ಬೆಚ್ಚಿಬೀಳುತ್ತಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲಿ ಈಗಾಗಲೇ ನೆಮ್ಮದಿ ಹಾಳಾಗಿ ಹೋಗಿದ್ದು, ಯಾವಾಗ ಎಲ್ಲಿ ಯುದ್ಧ ದಿಢೀರ್ ಶುರುವಾಗುತ್ತೋ? ಎಂಬ ಆತಂಕ ಸದಾ ಕಾಡುತ್ತಾ ಇರುತ್ತದೆ. ಏಕೆಂದರೆ ಕಳೆದ ಕೆಲವು ತಿಂಗಳಲ್ಲೇ ಮಧ್ಯಪ್ರಾಚ್ಯ ಭಾಗದಲ್ಲಿ ಹಲವು ಯುದ್ಧ ನಡೆದು ಹೋಗಿದೆ. ಇದೇ ರೀತಿ ಇರಾನ್ ಮತ್ತು ಅಮೆರಿಕ ನಡುವೆ ಕೂಡ ಯುದ್ಧ ಶುರುವಾದರೆ ಅದು ಭಯಾನಕ ವಾತಾವರಣ ಸೃಷ್ಟಿ ಮಾಡಲಿದೆ. ಹೀಗಾಗಿಯೇ ಅಲರ್ಟ್ ಆಗಿ ಕೂಡಲೇ ಇರಾನ್ & ಅಮೆರಿಕ ನಡುವೆ ಶಾಂತಿ ಮಾತುಕತೆಗೆ ಮುಂದಾಗಿವೆ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು. ಇಂತಹ ಸಮಯದಲ್ಲಿ ಇರಾನ್ ತನ್ನ ಬಳಿ ಇರುವ ಕ್ಷಿಪಣಿಗಳನ್ನ ಪ್ರಯೋಗಿಸಿದ್ದು, ಹಾರ್ಮುಜ್ ಜಲಸಂಧಿಯ ಕಡೆಗೆ ಮಿಸೈಲ್ ಹಾರಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಜಾಗತಿಕವಾಗಿ ಮತ್ತೊಂದು ತಿಕ್ಕಾಟಕ್ಕೆ ಇದು ವೇದಿಕೆಯನ್ನು ಕೂಡ ಒದಗಿಸುತ್ತಿದೆ.

US And Iran

ಅಲ್ಲಿ ಮಾತುಕತೆ, ಇಲ್ಲಿ ಮಿಸೈಲ್ ಲಾಂಚ್!

ಅಂದಹಾಗೆ ಪರಮಾಣು ಯೋಜನೆಗಳ ಕುರಿತು ಅಮೆರಿಕ ಮತ್ತು ಇಸ್ರೇಲ್‌ಗೆ ಇದೀಗ ಇರಾನ್ ಮೇಲೆ ಅನುಮಾನ ಮೂಡಿದೆ. ಏಕೆಂದರೆ ಶಾಂತಿ ಉದ್ದೇಶಕ್ಕಾಗಿ ಪರಮಾಣು ಯೋಜನೆಗಳನ್ನ ಇರಾನ್‌ ಸರ್ಕಾರ ಕೈಗೊಂಡಿದೆ ಎಂದು ಹೇಳುತ್ತಿದ್ದರೂ, ಒಳಗೆ ಗುಟ್ಟಾಗಿ ಪರಮಾಣು ಬಾಂಬ್ ತಯಾರಿಸುತ್ತಾ ಇದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಅದರಲ್ಲೂ ಇರಾನ್ ಬಳಿ ಪರಮಾಣು ಬಾಂಬ್ ಬಂದುಬಿಟ್ಟರೆ ಭವಿಷ್ಯದ ದೃಷ್ಟಿಯಿಂದ ಅದು ದೊಡ್ಡ ವಿನಾಶಕಾರಿ ವಿಚಾರ ಎಂಬುದು ಅಮೆರಿಕ ಹಾಗೂ ಇಸ್ರೇಲ್ ನಾಯಕರ ಚಿಂತನೆ.

ಈ ಕಾರಣಕ್ಕೆ ಅಮೆರಿಕ ಜೊತೆಗೆ ಕೂತು, ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕೆಂಬ ಒತ್ತಡ ಇರಾನ್ ಮೇಲೆ ಹೆಚ್ಚಾಗಿದೆ. ಇದೇ ಕಾರಣಕ್ಕೇ ಇದೀಗ ಜಿನೇವಾದಲ್ಲಿ ಮಾತುಕತೆ ಕೂಡ ಶುರು ಆಗಿದೆ. ಹೀಗೆ ಒಂದು ಕಡೆ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕ್ಷಿಪಣಿ ಪ್ರಯೋಗ ನಡೆದಿದೆ. ನೇರವಾಗಿ ಇದೇ ಇರಾನ್ ಸೇನೆ ಹಾರ್ಮುಜ್ ಜಲಸಂಧಿಯ ಕಡೆಗೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ವರದಿ ಆಗಿದ್ದು, ಆ ಕೂಡಲೇ ಅಮೆರಿಕ ಮತ್ತು ಇಸ್ರೇಲ್ ಅಲರ್ಟ್ ಆಗಿವೆ. ಯಾಕೆ ಹಾರ್ಮುಜ್ ಜಲಸಂಧಿ ಮುಖ್ಯ ಎಂದರೆ, ಜಗತ್ತಿನ ಶೇಕಡಾ 20ರಷ್ಟು ಕಚ್ಚಾತೈಲ ಇದೇ ಜಲಸಂಧಿಯ ಮೂಲಕ ಸರಬರಾಜು ಮಾಡಲಾಗುತ್ತದೆ. ಹೀಗೆ ಇದ್ದಾಗಲೇ ಇರಾನ್ ಸೇನೆಯ ನಡೆ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+