2025ರಲ್ಲಿ ಚೀನಾದ ಮೇಲೆ ಯುದ್ಧಕ್ಕೆ ಸಿದ್ಧರಾಗಿ ಎಂದು ಅಮೆರಿಕಾದ ಹಿರಿಯ ಅಧಿಕಾರಿಯ ಎಚ್ಚರಿಕೆ!
2025 ರಲ್ಲಿ ಅಮೆರಿಕಾ ಚೀನಾ ನಡುವೆ ಯುದ್ಧ ನಡೆಯುವ ಸಂಭವಿದೆ ಎಂದು ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್, ಜನವರಿ. 29: 2025 ರಲ್ಲಿ ಅಮೆರಿಕಾ ಚೀನಾ ನಡುವೆ ಯುದ್ಧ ನಡೆಯುವ ಸಂಭವವಿದೆ. ಹೀಗಾಗಿ ಸಿದ್ಧರಾಗಿರಬೇಕು ಎಂದು ಅಮೆರಿಕಾದ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಅಮೆರಿಕಾದ ಏರ್ ಮೊಬಿಲಿಟಿ ಕಮಾಂಡ್ ಮುಖ್ಯಸ್ಥ ಜನರಲ್ ಮೈಕ್ ಮಿನಿಹಾನ್ ಅವರು 2025 ರಲ್ಲಿ ಚೀನಾದೊಂದಿಗೆ ನಡೆಯುಲಿರುವ ಸಂಘರ್ಷದ ಬಗ್ಗೆ ಎಚ್ಚರಿಸಿದ್ದಾರೆ. ಅಮೆರಿಕಾ-ಚೀನಾ ಯುದ್ಧ ನಡೆಯಲಿದ್ದು, ಇದು ಘೋರವಾಗಿರಲಿದೆ. ಅಧಿಕಾರಿಗಳು ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಜಾಗತಿಕವಾಗಿ ಸರ್ಚೆಗೆ ಕಾರಣವಾಗಿರುವುದು ಮೈಕ್ ಮಿನಿಹಾನ್ ಪತ್ರ. ಪತ್ರದಲ್ಲಿ ಯುದ್ಧದ ಬೀತಿಯನ್ನು ಹೊರಹಾಕಿದ್ದು, ನನ್ನ ಊಹೆ ತಪ್ಪಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

" 2025 ರಲ್ಲಿ ನಾವು ಚೀನಾದ ವಿರುದ್ಧ ಹೋರಾಡುತ್ತೇವೆ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಆದರೆ, ನನ್ನ ಈ ಊಹೆ ತಪ್ಪಾಗಲಿ ಎಂದು ಕೇಳಿಕೊಳ್ಳುತ್ತೇನೆ. ಕ್ಸಿ ಜಿನ್‌ಪಿಂಗ್ ಅವರು ತಮ್ಮ ಮೂರನೇ ಅವಧಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅಕ್ಟೋಬರ್ 2022 ರಲ್ಲಿ ತಮ್ಮ ಯುದ್ಧ ಮಂಡಳಿಯನ್ನು ಸ್ಥಾಪಿಸಿದ್ದಾರೆ. ತೈವಾನ್‌ನ ಅಧ್ಯಕ್ಷೀಯ ಚುನಾವಣೆಗಳು 2024 ರಲ್ಲಿ ನಡೆಯಲಿವೆ. ಇದು ಕ್ಸಿ ಅವರಿಗೆ ಯುದ್ಧಕ್ಕೆ ಕಾರಣ ನೀಡಿದೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷೀಯ ಚುನಾವಣೆಗಳು 2024 ರಲ್ಲಿ ನಡೆಯಲಿವೆ. ಈ ಚುನಾವಣೆಗಳು ತೈವಾನ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಚೀನಾಕ್ಕೆ ಅವಕಾಶವನ್ನು ಒದಗಿಸುತ್ತವೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಮೈಕ್ ಮಿನಿಹಾನ್ ತಮ್ಮ ಅಧೀನದಲ್ಲಿರುವ ಸಾವಿರಾರು ಸೈನಿಕರು ಯುದ್ಧಕ್ಕೆ ಸಿದ್ಧರಾಗುವಂತೆ ತಿಳಿಸಿದ್ದಾರೆ. ತಮ್ಮ ತರಬೇತಿಯಲ್ಲಿ ಹೆಚ್ಚು ಸಕ್ರಿಯರಾಗಿರಲು ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕಾ ರಕ್ಷಣಾ ಬಜೆಟ್ ಪ್ರಸ್ತಾವನೆಯು ತೈವಾನ್‌ಗೆ 10 ಶತಕೋಟಿ ಡಾಲರ್ ಶಸ್ತ್ರಾಸ್ತ್ರಗಳ ಮಾರಾಟ ಮಾಡಿ ಅದನ್ನು ಶಕ್ತಿಯುತವನ್ನಾಗಿಸಲು ಪ್ರಯತ್ನಿಸಿದೆ. ಇದು ಚೀನಾ ಕೆಂಗಣ್ಣಿಗೆ ಗುರಿಯಾಗಿದ್ದು, ಎರಡು ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸುತ್ತಿದೆ ಎಂದು ಟೀಕಿಸಿದೆ.
ಇನ್ನು, ಜನರಲ್ ಮೈಕ್ ಮಿನಿಹಾನ್ ಅವರ ಹೇಳಿಕೆಗಳು ಪೆಂಟಗನ್ ತಿರಸ್ಕರಿಸಿದೆ.
-
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ -
LPG Gas Crisis: ಯುದ್ಧ ಪರಿಣಾಮ: ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ, ಹೋಟೆಲ್, ಪಿಜಿಗಳಲ್ಲಿ ಮೆನು ಚೇಂಜ್ -
ಶಿರಡಿ ಸಾಯಿಬಾಬಾ ಮಂದಿರದಲ್ಲಿ ದಾಸೋಹಕ್ಕೆ ದಿನಕ್ಕೆ 500 ಕೆಜಿ ಎಲ್ಪಿಜಿ ಬೇಕು -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
LPG Crisis: ಭಾರತದ ಎಲ್ಪಿಜಿ ಬಿಕ್ಕಟ್ಟಿನ ಚರ್ಚೆಯ ಹಿಂದಿನ ವಾಸ್ತವ: ನೀತಿ ವೈಫಲ್ಯವಲ್ಲ, ಜಾಗತಿಕ ಇಂಧನ ಆಘಾತ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ











Click it and Unblock the Notifications