ಉದ್ಯೋಗ ಸೃಷ್ಟಿ ನನ್ನ ಆದ್ಯತೆ: ಡೊನಾಲ್ಡ್ ಟ್ರಂಪ್

Posted By:
Subscribe to Oneindia Kannada

ನ್ಯೂಯಾರ್ಕ್, ಜನವರಿ 11 : ಅಮೆರಿಕದ 45ನೇ ಅಧ್ಯಕ್ಷ ಪದವಿಗೆ ನಿಯೋಜಿತರಾಗಿರುವ 70 ವರ್ಷ ವಯಸ್ಸಿನ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿ ನಡೆಸಿ ಹಲವಾರು ವಿಷಯಗಳ ಬಗ್ಗೆ ತಮ್ಮ ನಿಲುವು, ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಉದ್ಯೋಗ: ಡ್ರಗ್ ಕಂಪನಿಗಳಿಗೆ ಹೊಸದಾದ ಬಿಡ್ಡಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ. ಇದರಿಂದ ಅಪಾರ ಪ್ರಮಾಣದ ಹಣ ಉಳಿತಾಯವಾಗಲಿದೆ.[ಟ್ರಂಪ್ ರಿಂದ 'ಸೂಪರ್' ಕಾಪ್' ಸಾಂಗ್ಲಿಯಾನಗೆ ಆಹ್ವಾನ]

* ಈ ಹಿಂದೆ ನೀವು ಎಂದೂ ಕಾಣದಂಥ ಉದ್ಯೋಗ ಸೃಷ್ಟಿಕರ್ತನಾಗುತ್ತೇನೆ.

Updates from Donald Trump's press conference Jobs Freedom of Press and more

* ಮುಂಬರುವ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೆ ಆಶಾದಾಯಕ ಮಾರ್ಗ ಸಿಗಲಿದೆ.

* ಹಿರಿಯ ನಾಗರಿಕರಿಗೆ ಸಮಾನ ಅವಕಾಶ, ಅದ್ಯತೆ ಸಿಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ.
* ರಷ್ಯಾ ಜತೆ ಯಾವುದೇ ಒಪ್ಪಂದ, ಸಂಬಂಧ ಹೊಂದಿಲ್ಲ ಕೆಟ್ಟ ಆಡಳಿತದಿಂದ ಸೃಷ್ಟಿಯಾಗಿರುವ ಐಎಸ್ ಐಎಸ್ ನಾಶಕ್ಕೆ ರಷ್ಯಾ ಸಹಕಾರಿಯಾದರೆ ಅಚ್ಚರಿಪಡಬೇಕಾಗಿಲ್ಲ.[ಟ್ರಂಪ್ ನೀತಿಗೆ ಭಾರತೀಯ ಐಟಿ ಕ್ಷೇತ್ರ ತತ್ತರ]
* ರಷ್ಯಾ ಹಾಗೂ ಅಮೆರಿಕ ನಡುವಿನ ಸಂಬಂಧ, ವ್ಯವಹಾರ ಈ ಹಿಂದೆ ಎಂದೂ ಕಾಣದಂಥ ಬದಲಾವಣೆಯನ್ನು ಕಾಣಲಿದೆ.
* ಒಬಾಮಾ ಕೇರ್ ಎಂಬುದು ದೊಡ್ಡ ದುರಂತ. ಆರೋಗ್ಯಕ್ಷೇತ್ರಕ್ಕೆ ಮಹತ್ವ ನೀಡಬೇಕು ನಿಜ. ಆದರೆ, ಹಳೆಯ ನಿಯಮಗಳನ್ನು ಪಾಲಿಸಬೇಕಾಗಿಲ್ಲ. ಒಬಾಮಾಕೇರ್ ಯೋಜನೆ ಮರೆತುಬಿಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Live: Will Be The Greatest Job Creator, Says Donald Trump.Donald Trump, who last gave a news conference on July 27, is addressing the press conference at Trump Tower
Please Wait while comments are loading...