ತೈವಾನ್ ಪಾಲಿಗೆ ಅಬ್ಬಬ್ಬಾ ಲಾಟರಿ... ಅಮೆರಿಕ ಜೊತೆ 330 ಮಿಲಿಯನ್ ಡಾಲರ್ ಡೀಲ್!
ಚೀನಾ
ಜೊತೆಗೆ ಅಮೆರಿಕದ ಒಪ್ಪಂದ ನಡೆದ ನಂತರ ಕೂಡ ಮತ್ತೊಂದು ಪ್ರಮುಖ ನಿರ್ಧಾರವನ್ನ ಕೈಗೊಂಡಿದೆ. ಅದರಲ್ಲೂ ತೈವಾನ್ ಮತ್ತು ಚೀನಾ ಎಣ್ಣೆ & ಸೀಗೇಕಾಯಿ ರೀತಿ ಕಿತ್ತಾಡುವಾಗಲೂ ಅಮೆರಿಕ ಮಹತ್ವದ ಒಪ್ಪಂದಕ್ಕೆ ಇದೀಗ ಮುಂದಾಗಿದೆ. ಈ ಮೂಲಕ 330 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳ ಡೀಲ್ ತೈವಾನ್ & ಅಮೆರಿಕದ ನಡುವೆ ಫೈನಲ್ ಆಗಿದೆ. ಇದು ಮತ್ತೊಮ್ಮೆ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಬಿರುಗಾಳಿ ಏಳುವ ಮುನ್ಸೂಚನೆ ಕೂಡ ನೀಡುತ್ತಿದೆ... id="toptextpromo"> id='are-slot-1' class='oiad oi-axt oiadv'> id='top-searched-articles'>ಡೊನಾಲ್ಡ್
ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸ್ವತಃ ಅಲ್ಲಿನ ಜನರೇ ಊಟ & ನಿದ್ದೆ ಬಿಟ್ಟು ಯೋಚನೆ ಮಾಡುವಂತೆ ಆಗಿದೆ. ಯಾಕಂದ್ರೆ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿರುವ ಇದೇ ಟ್ರಂಪ್ ಮಹಾಶಯ ಮತ್ತೆ ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಮೆರಿಕದಲ್ಲಿ ಸಾಮಾನ್ಯ ಜನರ ಬದುಕು ಬೀದಿಗೆ ಬಿದ್ದಂತೆ ಆಗಿದೆ. ಸಣ್ಣಪುಟ್ಟ & ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಈ ರೀತಿ ಬೆಲೆ ಏರಿಕೆ ಕಂಡು ಜನ ಕೂಡ ರೊಚ್ಚಿಗೆದ್ದಿದ್ದಾರೆ. ಇಷ್ಟಾದರೂ ಟ್ರಂಪ್ ಮಾತ್ರ ಸೈಲೆಂಟ್ ಆಗ್ತಿಲ್ಲ. ಬೇರೆ ಬೇರೆ ದೇಶಗಳನ್ನು ರೊಚ್ಚಿಗೆಬ್ಬಿಸುವ ಕೆಲಸ ಸಾಗಿದ್ದು, ಇದೀಗ ತೈವಾನ್‌ಗೆ ಸಪೋರ್ಟ್ ಮಾಡಿ ಚೀನಾ ರೊಚ್ಚಿಗೇಳುವಂತೆ ಮಾಡಿದ್ದಾರೆ! id='are-slot-2' class='oiad oi-axt oiadv'>












Click it and Unblock the Notifications