ಉಕ್ರೇನ್‌ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅನಿರೀಕ್ಷಿತ ಭೇಟಿ: ರಷ್ಯಾಕ್ಕೆ ತಿರುಗೇಟು!

ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮೊದಲ ಬಾರಿಗೆ ಉಕ್ರೇನ್‌ಗೆ ಅನಿರೀಕ್ಷಿತ ಭೇಟಿ ನೀಡಿದರು.

ಯುದ್ಧ ಪ್ರಾರಂಭವಾದ ನಂತರ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮೊದಲ ಬಾರಿಗೆ ಉಕ್ರೇನ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿಗಳನ್ನು ಉಲ್ಲೇಖಿಸಿದೆ. ಸುಮಾರು ಒಂದು ವರ್ಷದ ಹಿಂದೆ ರಷ್ಯಾ ಉಕ್ರೇನ್‌ನ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಇದೆ ಮೊದಲ ಬಾರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸೋಮವಾರ ಕೀವ್‌ಗೆ ಭೇಟಿ ನೀಡಿದರು.

ವರದಿಗಾರರ ಪ್ರಕಾರ, ಉಕ್ರೇನ್‌ಗೆ ಬೈಡನ್ ಅವರು ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಕೀವ್‌ಗೆ ಆಗಮಿಸಿದರು. ಉಕ್ರೇನ್‌ಗೆ ಯುಎಸ್ ರಾಯಭಾರಿ ಬ್ರಿಜೆಟ್ ಬ್ರಿಂಕ್ ಬಿಡೆನ್ ಅವರನ್ನು ಸ್ವಾಗತಿಸಿದರು. ಸ್ಥಳೀಯ ಕಾಲಮಾನ ಬೆಳಗ್ಗೆ 8:30 ರ ನಂತರ ಜೋ ಬೈಡನ್ ಅವರನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಮತ್ತು ಅವರ ಪತ್ನಿ ಒಲೆನಾ ಝೆಲೆನ್ಸ್ಕಾ ಸ್ವಾಗತಿಸಿದರು ಎನ್ನಲಾಗಿದೆ.

12 ತಿಂಗಳ ಸಂಘರ್ಷ ದಾಳಿಯನ್ನು ರಷ್ಯಾ ಉಕ್ರೇನ್ ಮೇಲೆ ಮಾಡುತ್ತಿದೆ. ಈ ನಡುವೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಯುದ್ಧದ ಪಥವನ್ನು ಬದಲಾಯಿಸುವ ಭರವಸೆಯನ್ನು ನೀಡಿವೆ. ಇದರ ಭಾಗವಾಗಿ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು ಮತ್ತು ಮದ್ದುಗುಂಡುಗಳನ್ನು ಉಕ್ರೇನ್‌ಗೆ ಧಾವಿಸುತ್ತಿವೆ. ವೈಯಕ್ತಿಕವಾಗಿ ಭೇಟಿ ನೀಡುವ ಮೂಲಕ, ಬೈಡನ್ ಝೆಲೆನ್ಸ್ಕಿಗೆ ಅಮೆರಿಕಾದ ಬೆಂಬಲದ ಸುಳಿವನ್ನು ನೀಡಿದ್ದಾರೆ.

Unexpected visit of US President Joe Biden to Ukraine!

ಝೆಲೆನ್ಸ್ಕಿಯೊಂದಿಗೆ ಜಂಟಿ ಹೇಳಿಕೆಗಳಲ್ಲಿ, ಬೈಡನ್ ಉಕ್ರೇನ್‌ಗೆ ಅರ್ಧ ಶತಕೋಟಿ ಡಾಲರ್‌ಗಳ ಸಹಾಯವನ್ನು ಘೋಷಿಸಿದರು. ನಾವು ಉಕ್ರೇನ್‌ಗೆ 500 ಮಿಲಿಯನ್ ಸಹಾಯವನ್ನು ಘೋಷಿಸುತ್ತೇವೆ ಎಂದು ಬೈಡನ್ ಹೇಳಿದ್ದಾರೆ. ಇದು ಪ್ಯಾಕೇಜ್ ಫಿರಂಗಿ ಮದ್ದುಗುಂಡುಗಳು, ಹೆಚ್ಚಿನ ಜಾವೆಲಿನ್‌ಗಳು ಮತ್ತು ಹೊವಿಟ್ಜರ್‌ಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

Unexpected visit of US President Joe Biden to Ukraine!

ಯುದ್ಧ ಪೀಡಿತ ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಬೈಡನ್ ಭೀಟಿ ನೀಡುವ ಮೂಲಕ ರಷ್ಯಾಕ್ಕೆ ತಿರುಗೇಟು ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಕೀವ್ ನಗರದ ರಸ್ತೆಯಲ್ಲಿ ಓಡಾಡಿದ್ದಾರೆ. ಕೀವ್ ಭೇಟಿಯಿಂದ ಇದು ರಷ್ಯಾ ಅಧ್ಯಕ್ಷರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಮತ್ತೊಂದೆಡೆ ಮಾಸ್ಕೋಗೆ ಚೀನಾ ವಿದೇಶಾಂಗ ಕಾರ್ದರ್ಶಿ ಭೇಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+