• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು

|
Google Oneindia Kannada News

ದೆಹಲಿ, ಜೂನ್ 5: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಮೋಸ್ಟ್ ವಾಂಟೆಡ್ ಅಪರಾಧಿಗೆ ಸೋಂಕು ಖಚಿತವಾಗುತ್ತಿದ್ದಂತೆ ಆತನ ಸಹಚರರು ಮತ್ತು ಇತರೆ ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

   ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

   ದಾವೂದ್ ಇಬ್ರಾಹಿಂ ಮಾತ್ರವಲ್ಲ ಆತನ ಪತ್ನಿ ಮಹಜಬೀನ್‌ಗೂ ಸಹ ಕೊವಿಡ್ ಸೋಂಕು ಅಂಟಿಕೊಂಡಿದೆ. ಸದ್ಯದ ಮೂಲಗಳ ಪ್ರಕಾರ, ದಾವೊದ್ ಮತ್ತು ಮತ್ತು ಪತ್ನಿಯನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

   ಕೊನೆಗೂ ತನ್ನ ಫಾರಂ ಹೌಸ್ ನಲ್ಲಿ ಪತ್ತೆಯಾದ ದಾವೂದ್ ಇಬ್ರಾಹಿಂ ಕೊನೆಗೂ ತನ್ನ ಫಾರಂ ಹೌಸ್ ನಲ್ಲಿ ಪತ್ತೆಯಾದ ದಾವೂದ್ ಇಬ್ರಾಹಿಂ

   ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

   ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

   ಸರ್ಕಾರದ ಉನ್ನತ ಮೂಲಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ದಾವೊದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ. ಆತನಿಗೆ ಪಾಕ್ ಮಿಲಿಟರಿ ಬೆಂಗಾವಲಾಗಿ ನಿಂತಿದೆ. ಇದೀಗ, ಪಾಕಿಸ್ತಾನದ ಕರಾಚಿಯಲ್ಲಿ ಕೊರೊನಾ ವೈರಸ್ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದರ ಪರಿಣಾಮ ದಾವೊದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಸೋಂಕು ತಗುಲಿದೆ. ಮಿಲಿಟರಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಷಯ ಸೋರಿಕೆ ಆಗ್ತಿದೆ.

   ದಾವೊದ್‌ಗೆ ಪಾಕಿಸ್ತಾನ ಶ್ರೀರಕ್ಷೆ

   ದಾವೊದ್‌ಗೆ ಪಾಕಿಸ್ತಾನ ಶ್ರೀರಕ್ಷೆ

   ದಾವೊದ್ ಇಬ್ರಾಹಿಂ ಮತ್ತು ಆತನ ಕುಟುಂಬ ಪಾಕಿಸ್ತಾನದಲ್ಲಿ ತಲೆಮರಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವೂ ಅನೇಕ ಸಾಕ್ಷ್ಯಗಳನ್ನು ಒದಗಿಸಿದೆ. ಆದರೂ ಪಾಕಿಸ್ತಾನ ಮಾತ್ರ ದಾವೊದ್ ಕುರಿತಾದ ಯಾವ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ತನ್ನ ದೇಶದಲ್ಲಿ ಇರಿಸಿಕೊಂಡು, ನಮಗೆ ದಾವೊದ್ ಬಗ್ಗೆ ಮಾಹಿತಿ ಇಲ್ಲ ಎಂದು ಜಗತ್ತಿನ ಮುಂದೆ ಹೇಳಿಕೊಳ್ಳುತ್ತಿದೆ.

   ದಾವೊದ್ ಮನೆ ಕೆಲಸದ ಸಿಬ್ಬಂದಿಗೂ ಕ್ವಾರಂಟೈನ್

   ದಾವೊದ್ ಮನೆ ಕೆಲಸದ ಸಿಬ್ಬಂದಿಗೂ ಕ್ವಾರಂಟೈನ್

   ಭೂಗತ ಪಾತಕಿಗೆ ದಾವೊದ್‌ಗೆ ಮೊದಲ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ದಾವೊದ್ ಸಂಪರ್ಕದಿಂದ ಆತನ ಪತ್ನಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಪರೀಕ್ಷೆಗೆ ಒಳಪಡಿಸದಾಗ ಕೊರೊನಾ ತಗುಲಿರುವುದು ಖಚಿತವಾಗಿದೆ. ದಾವೊದ್ ಹಾಗೂ ಪತ್ನಿಗೆ ಸೋಂಕು ದೃಢಪಟ್ಟ ಬಳಿಕ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆತಂಕ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಕೆಲಸಗಾರರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ಹೇಳಿದೆ.

   ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿತ್ತು

   ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿತ್ತು

   ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೊದ್, 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್. ಕಳೆದ ಹಲವು ದಿನಗಳಿಂದ ದಾವೊದ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಅಂದ್ಹಾಗೆ, ದಾವೂದ್ ಮತ್ತು ಮೆಹ್ಜಾಬಿನ್ ಅಕಾ ಜುಬಿನಾ ಜರೀನ್ ದಂಪತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮಹ್ರೂಕ್, ಮಹ್ರಿನ್ ಮತ್ತು ಮಾರಿಯಾ ಎಂಬ ಹೆಣ್ಣು ಮಕ್ಕಳು ಹಾಗೂ ಮೊಯಿನ್ ಎಂಬ ಮಗನಿದ್ದಾನೆ.

   English summary
   Underworld Don Dawood Ibrahim and his wife Mahzabeen test positive for coronavirus says source.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X