ಭಾರತದಲ್ಲೇ ಮಣ್ಣಾಗಲು ಬಯಸುತ್ತಿದ್ದಾನಾ ದಾವೂದ್ ಇಬ್ರಾಹಿಂ?

Written By:
Subscribe to Oneindia Kannada

ಜಿಸ್ ದೇಶ್ ಮೆ ಗಂಗಾ ಬೆಹ್ತಿಹೇ.. ಹಮ್ ಹೇ ಇಸ್ ದೇಶ್ ಕಿ ವಾಸಿ ಹೇ.. ಎಂದು ಹೇಳುತ್ತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಡಿದ್ದು ಮಾತ್ರ ದೇಶ ದ್ರೋಹದ ಕೆಲಸ. ಉಗ್ರ ಸಂಘಟನೆಗಳಿಗೆ ನೇರ ಪ್ರಚೋದನೆ ನೀಡಿ ಗಂಗಾ ಹರಿಯುವ ನಾಡಿನಲ್ಲಿ ರಕ್ತದೋಕುಳಿ ನಡೆಯಲು ಕಾರಣಕರ್ತನಾಗಿದ್ದು ಇದೇ ದಾವೂದ್.

ಮಾಡಬಾರದನ್ನೆಲ್ಲಾ ಮಾಡಿ ಪಾಕಿಸ್ತಾನದ ಕರಾಚಿ ನಗರದಲ್ಲಿ ಪರ್ಮನೆಂಟಾಗಿ ನೆಲೆ ಕಂಡಿರುವ ದಾವೂದ್, ಈಗ ತನ್ನ ಜೀವಿತಾವಧಿಯ ಅಂತಿಮ ದಿನವನ್ನು ಭಾರತದಲ್ಲಿ ಕಳೆಯಲು ಬಯಸುತ್ತಿದ್ದಾನಂತೆ, ಮಾತೃಭೂಮಿಯಲ್ಲೇ ಮಣ್ಣಾಗಲು ಹಾತೊರೆಯುತ್ತಿದ್ದಾನಂತೆ.. (ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿ ಯಾರು)

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ದೇಶ ಬಿಟ್ಟು ಹೋಗಿರುವ ದಾವೂದ್ ಈಗ್ಯಾಕೆ ಭಾರತಕ್ಕೆ ಮರಳಲು ಇಚ್ಚಿಸುತ್ತಿದ್ದಾನೆ? ಆರ್ಥಿಕವಾಗಿ ಬಲಾಢ್ಯವಾಗಿದ್ದಾಗ, ಪಾಕ್ ಸರಕಾರಕ್ಕೇ ಸೂಚನೆ ನೀಡುವಷ್ಟು ಪ್ರಾಭಲ್ಯ ಮೆರೆದಿದ್ದ ದಾವೂದ್ ಈಗ ಪಾಕಿಸ್ತಾನಕ್ಕೆ ಇದ್ದರೆಷ್ಟು, ಬಿಟ್ಟರೆಷ್ಟು ಎನ್ನುವಂತಾಗಿದ್ದಾನೆ.

ಕೊನೇ ಪಕ್ಷ ನನ್ನ ದೇಹವನ್ನಾದರೂ 'ಗಂಗಾ ಹರಿಯುವ ನಾಡಿ'ನಲ್ಲಿ ಮಣ್ಣು ಮಾಡಿ ಎಂದು ಆಪ್ತರಿಷ್ಟರಲ್ಲಿ ಅಂಗಲಾಚುತ್ತಿರುವ ದಾವೂದ್ ಇಬ್ರಾಹಿಂ, ತಾನು ಮಾಡಿದ್ದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾನಾ? ಈಗ್ಯಾಕೆ ಇವನಿಗೆ ತಾನು ಹುಟ್ಟಿ ಬೆಳೆದ ದೇಶದ ಮೇಲೆ ಇದ್ದಕ್ಕಿದಂತೇ ದೇಶಪ್ರೇಮ ಹೊರಬೀಳಲು ಕಾರಣ?

ಅದೇನೋ, ಇದೇ ಬರುವ ಡಿಸೆಂಬರ್ ತಿಂಗಳೊಳಗೆ ಭಾರತದ ನ್ಯಾಯಂಗ ವ್ಯವಸ್ಥೆಯ ಮುಂದೆ ದಾವೂದ್ ಶರಣಾಗಲು ಬಯಸಿದ್ದಾನಂತೆ. ಕೂತಲ್ಲೇ ಡೀಲ್ ಮಾಡುವ ದಾವೂದ್, ತನ್ನ ಸಂಪರ್ಕದಲ್ಲಿರುವ ಭಾರತದ ರಾಜಕಾರಣಿಗಳ/ಅಧಿಕಾರಿಗಳ ಜೊತೆ ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದಾನೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ದಾವೂದ್ ಶರಣಾಗಲು ಕಾರಣ ಏನಿರಬಹುದು? ಆರು ಕಾರಣಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬಹು ಅಂಗಾಂಗ ಸಮಸ್ಯೆ

ಬಹು ಅಂಗಾಂಗ ಸಮಸ್ಯೆ

ಮಹಾರಾಷ್ಟ್ರದ ಖೇಡ್ (ರತ್ನಗಿರಿ ಜಿಲ್ಲೆ) ನಲ್ಲಿ ಜನಿಸಿ, ಮುಂಬೈನಲ್ಲಿ ನೆಲೆಕಂಡ 61ವರ್ಷದ ದಾವೂದ್, ಹೆಣ್ಣು ಹೆಂಡ ತಂಬಾಕಿನ ದಾಸ. ಎಲ್ಲಾ ಚಟಗಳನ್ನು ಜೀವನದಲ್ಲಿ ರೂಢಿಸಿಕೊಂಡಿರುವ ದಾವೂದ್, ಈಗ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ, ಬಹು ಅಂಗಾಂಗ ಸಮಸ್ಯೆ ಎದುರಾಗಿ ಸಾವು ಇನ್ನೇನು ಬರಬಹದು ಎನ್ನುವ ಭೀತಿಯಲ್ಲಿದ್ದಾನಂತೆ.

ಸಾವಿರಾರು ಕೋಟಿ ಆಸ್ತಿ ಮುಟ್ಟುಗೋಲು

ಸಾವಿರಾರು ಕೋಟಿ ಆಸ್ತಿ ಮುಟ್ಟುಗೋಲು

ಎಲ್ಲೋ ನಡೆಯುವ ಕ್ರಿಕೆಟ್ ಪಂದ್ಯವನ್ನು ಕೂತಲ್ಲೇ ಡೀಲ್ ಮಾಡಿ ಬಿಲಿಯನ್ ಡಾಲರ್ ಲೆಕ್ಕದಲ್ಲಿ ವ್ಯವಹಾರ ನಡೆಸುತ್ತಿದ್ದ ದಾವೂದ್ ಈಗ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾನೆ. ಇದರ ಜೊತೆಗೆ ಸೌದಿ ಸರಕಾರ ಇವನ ಸಾವಿರಾರು ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

ದುಡ್ದು ಇದ್ದಾಗ ಎಲ್ಲರೂ ಇರ್ತಾರೆ, ಕಷ್ಟದಲ್ಲಿ ಯಾರೂ ಇರಲ್ಲಾ ಎನ್ನುವ ಮಾತಿನ ಹಾಗೇ, ದಾವೂದ್ ಸಹಚರರ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಸರಕಾರದಿಂದ ಇವನಿಗೆ ಸಿಗುತ್ತಿರುವ ವಿಐಪಿ ಸೌಲಭ್ಯವೂ ಸಿಗುತ್ತಿಲ್ಲ ಎನ್ನುವ ಮಾಹಿತಿಯಿದೆ. ಬೇಕಾದ ಬಳಸಿಕೊಂಡಿದ್ದ ಪಾಕ್ ಸರಕಾರಕ್ಕೆ ಇವನು ಇದ್ದರೆಷ್ಟು.. ಬಿಟ್ಟರೆಷ್ಟು.. ಎನ್ನುವ ಕಡೆಗಣನೆ

ಪಾಕ್ ಗೂಢಚರ ಸಂಸ್ಥೆ ಐಎಸ್ಐ

ಪಾಕ್ ಗೂಢಚರ ಸಂಸ್ಥೆ ಐಎಸ್ಐ

ಭಾರತದ ವಿರುದ್ದ ವಿಷ ಕಕ್ಕಲು, ವಿಧ್ವಂಸಕ ಕೃತ್ಯ ನಡೆಸಲು ತಮಗೆ ಸಹಾಯದ ಆಧಾರಸ್ಥಂಬವಾಗಿದ್ದ ದಾವೂದ್ ನೆರವು ಈಗ ಪಾಕ್ ಗೂಢಚರ ಸಂಸ್ಥೆ ಐಎಸ್ಐಗೆ ಬೇಕಾಗಿಲ್ಲ. ಇದಕ್ಕಿಂತ ಹೆಚ್ಚಾಗಿ ತಮ್ಮ ದೌರ್ಭಲ್ಯವನ್ನು ಮುಚ್ಚಿಕೊಳ್ಳಲು ತನ್ನನ್ನು ಮುಗಿಸಲು ಐಎಸ್ಐ ಸಂಚು ನಡೆಸುತ್ತಿದೆ ಎನ್ನುವ ಭಯವೂ ದಾವೂದ್ ಗೆ ಕಾಡುತ್ತಿದೆ.

ಭಾರತದಲ್ಲಿ ಶರಣಾಗತಿ

ಭಾರತದಲ್ಲಿ ಶರಣಾಗತಿ

ತಾನು ಶರಣಾಗಲು ಬಯಸಿದರೆ, ಮಾನವೀಯ ಮೌಲ್ಯಕ್ಕೆ ಭಾರತದಲ್ಲಿ ಬೆಲೆ ಹೆಚ್ಚು ಎಂದರಿತರುವ ದಾವೂದ್, ಭಾರತದ ಕೆಲವು ರಾಜಾಕರಣಿಗಳು/ಅಧಿಕಾರಿಗಳಿಂದ ಜೀವಕ್ಕೆ ತೊಂದರೆ ಬರಬಹುದು ಎನ್ನುವ ಮುಂದಾಲೋಚನೆ ಇದ್ದರೂ, ಜೀವ ಉಳಿಸಿಕೊಳ್ಳಲು ಭಾರತಕ್ಕೆ ಶರಣಾಗಲು ಬಯಸುತ್ತಿದ್ದಾನೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ

ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ

ತಾನು ಮಾಡಿದ ತಪ್ಪಿಗೆ ಮನುಷ್ಯ ಪಶ್ಚಾತ್ತಾಪ ಪಡುವುದುಂಟು. ತಾನು ಹುಟ್ಟಿ, ಬೆಳೆದು, ಸೌದಿ ಪಾಕಿಸ್ತಾನದಲ್ಲಿ ಕೂತು ಭಾರತದ ಭೂಗತ ಲೋಕವನ್ನು ಆಳುತ್ತಿದ್ದ ದಾವೂದಿಗೆ ತನ್ನ ಜೀವಿತಾವಧಿಯ ಅಂತ್ಯದಲ್ಲಿ ದೇಶಪ್ರೇಮ ಹುಟ್ಟಿದ್ದರೂ ಹುಟ್ಟಿರಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Home-sick, financially depleted and enfeebled Dawood Ibrahim is desperately seeking to return to India by December 2016. Afraid of an untimely death, Dawood wants his body to be at least buried at home.
Please Wait while comments are loading...