ಕೊಳಕು ಬಾಂಬ್ ಕಿಚ್ಚು: ಉಕ್ರೇನ್-ರಷ್ಯಾ ನಡುವೆ ಇದೆಂಥಾ ಯುದ್ಧ?
ಮಾಸ್ಕೋ, ಅಕ್ಟೋಬರ್ 28: ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯು ಉಕ್ರೇನ್‌ನ ಎರಡು ಪ್ರದೇಶಗಳಲ್ಲಿ ಕೊಳಕು ಬಾಂಬ್‌ಗಳ ಉತ್ಪಾದನೆಗೆ ಸಂಬಂಧಿಸಿದಂತೆ ರಷ್ಯಾದ ಆರೋಪಗಳ ಬಗ್ಗೆ "ಸ್ವತಂತ್ರ ಪರಿಶೀಲನೆ" ನಡೆಸಲು ನಿರ್ಧರಿಸಿದೆ.
ವಿಶ್ವಸಂಸ್ಥೆಯು ಉಕ್ರೇನ್‌ನಲ್ಲಿ ಯಾವುದೇ ಜೈವಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಬಗ್ಗೆ ತಿಳಿದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇತರ ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನಿಯನ್ ಪಡೆಗಳು ಖೆರ್ಸನ್‌ನಲ್ಲಿ ಮುನ್ನಡೆ ಸಾಧಿಸುವುದನ್ನು ಮುಂದುವರೆಸಿವೆ. ಇದು ಆಕ್ರಮಣದ ಆರಂಭದಿಂದಲೂ ಯುದ್ಧದ ತೀವ್ರತೆ ಹೆಚ್ಚುವುದಕ್ಕೆ ಸಾಕ್ಷಿಯಾಗಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಿದರು. ಕೀವ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ತಳ್ಳಿಹಾಕಿದ್ದರು. ಉಕ್ರೇನ್‌ನಲ್ಲಿ ಉಲ್ಬಣಗೊಂಡ ಸಂಘರ್ಷಕ್ಕೆ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳನ್ನು ದೂಷಿಸಿದರು. ತನ್ನ ಜಾಗತಿಕ ಪ್ರಾಬಲ್ಯವನ್ನು ಪಡೆಯಲು ಪಶ್ಚಿಮದ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದರೂ, ಅದು ವಿಫಲವಾಗುತ್ತದೆ ಎಂದು ಪುಟಿನ್ ಹೇಳಿದರು. ಕೊಳಕು ಬಾಂಬ್ ಮತ್ತು ಉಕ್ರೇನ್ ವಿರುದ್ಧ ಪುಟಿನ್ ಮಾಡಿರುವ ಆರೋಪಗಳೇನು? ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಬೆೆಳವಣಿಗೆಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪುಟಿನ್ ಆರೋಪದ ಬೊಟ್ಟು ಯುಎಸ್ ಕಡೆಗೆ
ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು "ಅಪಾಯಕಾರಿ, ರಕ್ತಸಿಕ್ತ ಮತ್ತು ಕೊಳಕು" ಪ್ರಾಬಲ್ಯದ ಆಟದಲ್ಲಿ ಇತರ ರಾಷ್ಟ್ರಗಳಿಗೆ ತಮ್ಮ ನಿಯಮಗಳನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಲಾಡಿಮಿರ್ ಪುಟಿನ್ ಆರೋಪಿಸಿದರು. ಪಾಶ್ಚಿಮಾತ್ಯರು ಇನ್ನು ಮುಂದೆ ತನ್ನ ಇಚ್ಛೆಯನ್ನು ನಿರ್ದೇಶಿಸಲು ಸಾಧ್ಯವಾಗದಿದ್ದರೂ, ಅದನ್ನು ಮಾಡಲು ಪ್ರಯತ್ನಿಸುತ್ತಿದ್ದು, ಜಗತ್ತು ಒಂದು ಮಹತ್ವದ ಘಟ್ಟವನ್ನು ತಲುಪಿದೆ. ಬಹುಪಾಲು ರಾಷ್ಟ್ರಗಳು ಇನ್ನು ಮುಂದೆ ಅದನ್ನು ಸಹಿಸಲು ಬಯಸುವುದಿಲ್ಲ ಎಂದರು.

ರಷ್ಯಾದಿಂದ ಉಕ್ರೇನ್‌ಗೆ ಅಣುಬಾಂಬ್ ಬೆದರಿಕೆ ಹಾಕಿಲ್ಲ
ಉಕ್ರೇನ್ ಮೇಲಿನ ಯುದ್ಧದ ಹೊರತಾಗಿಯೂ ರಷ್ಯಾ ಯಾವುದೇ ರೀತಿ ಬೆದರಿಕೆಗಳನ್ನು ಹಾಕುತ್ತಿಲ್ಲ. ಉಕ್ರೇನ್ ಅನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಹೊಡೆಯುವ ಅಗತ್ಯವಿಲ್ಲ. ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕುತ್ತಿಲ್ಲ. ಪಶ್ಚಿಮದಿಂದ ಪರಮಾಣು "ಬ್ಲಾಕ್‌ಮೇಲ್"ಗೆ ಮಾತ್ರ ರಷ್ಯಾ ಪ್ರತಿಕ್ರಿಯಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಆದಾಗ್ಯೂ, ರಷ್ಯಾ ಆಕ್ರಮಿತ ಬಂದರು ನಗರವಾದ ಖೆರ್ಸನ್‌ನಲ್ಲಿ ಪರಮಾಣು ವಸ್ತುಗಳನ್ನು ಹರಡಲು ಉಕ್ರೇನ್ 'ಡರ್ಟಿ ಬಾಂಬ್' ಅನ್ನು ಬಳಸಲು ತಯಾರಿ ನಡೆಸುತ್ತಿದೆ ಎಂದು ಪುಟಿನ್ ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ. ಆದರೆ ಸಾಂಪ್ರದಾಯಿಕ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಸಮರ್ಥಿಸಲು ಬಹುಶಃ ರಷ್ಯಾ ದಾಳಿಯಲ್ಲಿ ಕೊಳಕು ಬಾಂಬ್ ಅನ್ನು ಬಳಸಬಹುದೆಂದು ಉಕ್ರೇನ್ ಶಂಕಿಸಿದೆ.

ವಿಶ್ವಸಂಸ್ಥೆಯು ಜೈವಿಕ ಶಸ್ತ್ರಾಸ್ತ್ರಗಳ ಬಗ್ಗೆ ಹೇಳಿದ್ದೇನು?
ಯುನೈಟೆಡ್ ಸ್ಟೇಟ್ಸ್ ವಿರುದ್ಧ "ಮಿಲಿಟರಿ-ಜೈವಿಕ ಚಟುವಟಿಕೆ" ಬಗ್ಗೆ ರಷ್ಯಾ ಆರೋಪಿಸಿದ ನಂತರ ವಿಶ್ವಸಂಸ್ಥೆಯು ತನಿಖೆ ಶುರುವಿಟ್ಟುಕೊಂಡಿತು. ಪ್ರಾಥಮಿಕ ಹಂತದಲ್ಲಿ ಉಕ್ರೇನ್‌ನಲ್ಲಿ ಯಾವುದೇ ಜೈವಿಕ ಶಸ್ತ್ರಾಸ್ತ್ರಗಳ ಉತ್ಪಾದನೆ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಯುಎನ್‌ನ ಪರಮಾಣು ಕಾವಲು ಸಂಸ್ಥೆಯು ಉಕ್ರೇನ್‌ನ ಎರಡು ಪ್ರದೇಶಗಳಲ್ಲಿ ಕೊಳಕು ಬಾಂಬ್‌ಗಳ ಉತ್ಪಾದನೆಗೆ ಸಂಬಂಧಿಸಿದಂತೆ ರಷ್ಯಾದ ಆರೋಪಗಳ "ಸ್ವತಂತ್ರ ಪರಿಶೀಲನೆ" ನಡೆಸಲು ನಿರ್ಧರಿಸಿದೆ.

ರಷ್ಯಾದಿಂದ ಉಕ್ರೇನ್ ಮೇಲೆ ಯಾಕೆ ಈ ರೀತಿ ಆರೋಪ?
"ಇದು ಅತ್ಯಂತ ಗಂಭೀರ ಅಪಾಯ ಎಂದು ನಾವು ಭಾವಿಸುತ್ತೇವೆ," ಎಂದು ರಷ್ಯಾದ ಉಪ ಯುಎನ್ ರಾಯಭಾರಿ ಡಿಮಿಟ್ರಿ ಪಾಲಿಯಾನ್ಸ್ಕಿ ಯುಎನ್ ಸಭೆಯಲ್ಲಿ ಹೇಳಿದರು. "ಉಕ್ರೇನ್ ಹಾಗೆ ಮಾಡಲು ಎಲ್ಲಾ ಕಾರಣಗಳನ್ನು ಹೊಂದಿದೆ ಏಕೆಂದರೆ ಝೆಲೆನ್ಸ್ಕಿ, ಆಡಳಿತವು ಮೊದಲನೆಯದಾಗಿ ಸೋಲನ್ನು ತಪ್ಪಿಸಲು ಬಯಸುತ್ತದೆ ಎಂದು ನಮಗೆ ತಿಳಿದಿದೆ. ಎರಡನೇಯದಾಗಿ, ನ್ಯಾಟೋವನ್ನು ರಷ್ಯಾದೊಂದಿಗೆ ನೇರ ಘರ್ಷಣೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತದೆ." ಎಂದು ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಉಲ್ಲೇಖಿಸಿ ಹೇಳಿದರು.

ರಾಷ್ಟ್ರವನ್ನು ಉದ್ದೇಶಿಸಿ ರಾತ್ರೋರಾತ್ರಿ ಝೆಲೆನ್ಸ್ಕಿ ಭಾಷಣ
ಉಕ್ರೇನ್‌ನಲ್ಲಿ ರಾತ್ರೋರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಅಧ್ಯಕ್ಷ ವೊಲೊಡಿಮಿ ಝೆಲೆನ್ಸ್ಕಿ ಮಾತನಾಡಿದರು. ಕಗ್ಗತ್ತಲ ರಾತ್ರಿಯಲ್ಲಿ ಡ್ರೋನ್‌ನ ಅವಶೇಷಗಳ ಪಕ್ಕದಲ್ಲಿ ಕತ್ತಲೆಯಲ್ಲಿ ಅವರು ನಿಂತಿದ್ದರು. "ಶೆಲ್ ದಾಳಿಯಿಂದ ನಮ್ಮನ್ನು ನಾಶಪಡಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಭೂಮಿಯಲ್ಲಿ ಶತ್ರುಗಳ ನೋವಿನ ಗೀತೆಯನ್ನು ಕೇಳುವುದು, ಆ ಆಕಾಶದಲ್ಲಿ ಶತ್ರುಗಳ ರಾಕೆಟ್‌ಗಳಿಗಿಂತ ಭಯಾನಕವಾಗಿರುತ್ತದೆ, ನಾವು ಕತ್ತಲೆಗೆ ಹೆದರುವುದಿಲ್ಲ," ಎಂದು ಝೆಲೆನ್ಸ್ಕಿ ಹೇಳಿದರು.

ಉಕ್ರೇನ್ ಪಾಲಿನ ಲಾಭವೇ ರಷ್ಯಾದಲ್ಲಿನ ಸಮಸ್ಯೆಗಳು
ರಷ್ಯಾದಲ್ಲಿ ಗಾಢವಾದ ಚಳಿ ಮತ್ತು ಶೀತದಿಂದಾಗಿ ಶೇ.40ರಷ್ಟು ಜನರು ಪರಿತಪಿಸುತ್ತಿದ್ದು, ಇಡೀ ದೇಶವೇ ಶಕ್ತಿ-ಉತ್ಪಾದನಾ ಸಾಮರ್ಥ್ಯಗಳಲ್ಲಿ ಲಕ್ಷ್ಯವನ್ನು ವಹಿಸಿದೆ. ಉಕ್ರೇನ್ ಈ ಲಾಭವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದೆ. ಶಾಂತಿ ಒಪ್ಪಂದಕ್ಕೆ ಯಾವುದೇ ಆಫರ್ ನೀಡದಿದ್ದರೂ ಉಕ್ರೇನ್‌ನೊಂದಿಗೆ ನೇರ ಮಾತುಕತೆಗೆ ವ್ಲಾಡಿಮಿರ್ ಪುಟಿನ್ ಮುಕ್ತರಾಗಿದ್ದಾರೆ ಎಂಬ ಸಂಕೇತಗಳನ್ನು ಕಳುಹಿಸಿದ್ದಾರೆ. ಇತ್ತೀಚಿನ ಸಂದೇಶವು ಗಿನಿಯಾ ಬಿಸ್ಸೌ ಅಧ್ಯಕ್ಷ ಉಮಾರೊ ಮೊಖ್ತಾರ್ ಸಿಸ್ಸೊಕೊ ಎಂಬಾಲೊ ಮೂಲಕ ಬಂದಿತು, ಅವರು ಅಧ್ಯಕ್ಷ ವೊಲೊಡ್ಮಿರ್ ಝೆಲೆನ್ಸ್ಕಿ ಅನ್ನು ಭೇಟಿ ಮಾಡಲು ಕೀವ್ ನಗರಕ್ಕೆ ಭೇಟಿ ನೀಡಿದರು. ಕೀವ್ ಮತ್ತು ಮಾಸ್ಕೋ ನಡುವಿನ ಮಾತುಕತೆಗಳು ಮಾರ್ಚ್‌ನಿಂದ ಸ್ಥಗಿತಗೊಂಡಿದ್ದವು.
ಉಕ್ರೇನ್‌ನಲ್ಲಿ ರಷ್ಯಾದ 'ವಿಶೇಷ ಕಾರ್ಯಾಚರಣೆ' ಇತ್ತೀಚಿನ ದಿನಗಳಲ್ಲಿ ಪುನರಾವರ್ತಿತ ಹಿನ್ನಡೆಗಳನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಪುಟಿನ್ ತನ್ನ ಮಿಲಿಟರಿ ಕಮಾಂಡರ್ ಅನ್ನು ಬದಲಾಯಿಸಿದರು. ಸ್ವಾಧೀನಪಡಿಸಿಕೊಂಡ ಪ್ರದೇಶಗಳ ಮೇಲೆ ಭಾಗಶಃ ಕಾನೂನನ್ನು ಹೇರಿದರು. ಇದರ ಹೊರತಾಗಿಯೂ ಉಕ್ರೇನ್‌ನ ಪಡೆಗಳು ಪೂರ್ವದಲ್ಲಿ ಪ್ರತಿದಾಳಿ ನಡೆಸಿ, ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಮೂಲಕ ಹಿಡಿತ ಸಾಧಿಸಿದರು.












Click it and Unblock the Notifications