Russia & Ukraine: ಕ್ರಿಸ್‌ಮಸ್ ಹಬ್ಬದ ದಿನವೂ ರಕ್ತಪಾತ, ರಷ್ಯಾಗೆ ಹಿಡಿಶಾಪ ಹಾಕಿದ ಜನ!

ಕ್ರಿಸ್‌ಮಸ್ ಸಂಭ್ರಮ ಜಗತ್ತಿನಾದ್ಯಂತ ಕಳೆಗಟ್ಟಿದ್ದು, ಜನರು ಕೂಡ ಸಂಭ್ರಮದಿಂದ ಇದೀಗ ಕ್ರಿಸ್‌ಮಸ್ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಕ್ರೈಸ್ತ ಧರ್ಮ ಪಾಲನೆ ಮಾಡುವ ದೇಶಗಳಲ್ಲಿ ಕ್ರಿಸ್‌ಮಸ್ ಹಬ್ಬವೇ ದೊಡ್ಡದು, ಹೀಗಾಗಿ ಕ್ರಿಸ್‌ಮಸ್ ಸಂಭ್ರಮಕ್ಕೆ ಅಂತಾನೇ ಹತ್ತಾರು ದಿನ ರಜೆ ಪಡೆದು ಜನರು ಸಂಭ್ರಮಿಸುತ್ತಾರೆ. ಹೀಗಿದ್ದಾಗಲೇ, ಕ್ರಿಸ್‌ಮಸ್ ಹಬ್ಬದ ದಿನವೂ ರಕ್ತಪಾತ ನಡೆದರೆ ಜನರ ಪರಿಸ್ಥಿತಿ ಹೇಗೆ ಆಗಬೇಡ ಹೇಳಿ?

ಹೌದು, ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಕ್ರಿಸ್‌ಮಸ್ ಹಬ್ಬದ ದಿನವೂ ರಕ್ತಪಾತವೇ ನಡೆದು ಹೋಗುತ್ತಿದೆ. ಶಾಂತಿಯ ಸಂದೇಶ ಸಾರಿದ್ದ ಕ್ರಿಸ್ತನ ಹುಟ್ಟುಹಬ್ಬದ ದಿನವಾದ್ದರಿಂದ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಹೆಮ್ಮೆಯಿಂದ & ಭರ್ಜರಿಯಾಗಿ ಆಚರಣೆ ಮಾಡಲಾಗುತ್ತೆ. ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್‌ಮಸ್ ಹಬ್ಬವೇ ದೊಡ್ಡ ಹಬ್ಬವಾಗಿದೆ.

Ukrainians Are Suffering To Celebrate Christmas After Russian Army Attack

ಅದೇ ರೀತಿ ಉಕ್ರೇನ್ ದೇಶದಲ್ಲಿ ಕೂಡ ಜನರು ಕ್ರಿಸ್‌ಮಸ್ ಹಬ್ಬ ಆಚರಣೆಗೆ ಸಿದ್ಧವಾಗಿದ್ದರು. ಆದರೆ, ರಷ್ಯಾ ಸೇನೆ ಹಾರಿಸಿದ ಕ್ಷಿಪಣಿ & ಡ್ರೋನ್‌ಗಳ ದಾಳಿಯ ಪರಿಣಾಮ ಎಲ್ಲ ಇದೀಗ ನಾಶವಾಗಿ ಹೋಗಿದೆ. ಉಕ್ರೇನ್ ವಸತಿ ಪ್ರದೇಶಗಳು ಸೇರಿದಂತೆ, ಬೃಹತ್ ಕಟ್ಟಡಗಳು ಇರುವ ಪ್ರದೇಶಗಳಲ್ಲಿ ಭಾರಿ ದೊಡ್ಡ ವಿನಾಶ ಸೃಷ್ಟಿಯಾಗಿದೆ.

ರಷ್ಯಾ ದಾಳಿಗೆ ನಲುಗಿದ ಉಕ್ರೇನ್!

ಅಂದಹಾಗೆ ರಷ್ಯಾ ಕ್ರಿಸ್‌ಮಸ್ ಹಬ್ಬದ ದಿನ ಕೂಡ ಯಾವುದೇ ಬಿಡುವು ನೀಡದಂತೆ ದಾಳಿ ಮಾಡುತ್ತಿದೆ. ಹೀಗೆ ರಷ್ಯಾ 10ಕ್ಕೂ ಹೆಚ್ಚು ಮಿಸೈಲ್ & ಡ್ರೋನ್‌ಗಳ ಮೂಲಕ ದಾಳಿಯನ್ನ ಮಾಡಿದ ಪರಿಣಾಮ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ರಕ್ತಪಾತ ನಡೆದು ಹೋಗಿದೆ. ಹೀಗಾಗಿ ಉಕ್ರೇನ್‌ನ ಜನರು ಕ್ರಿಸ್‌ಮಸ್ ಸಂಭ್ರಮ ಬಿಟ್ಟು ಜೀವ ಉಳಿಸಿ ಎಂದು ಬೇಡುವಂತೆ ಆಗಿದೆ. ಶಾಂತಿಯ ಸಂದೇಶ ಸಾರಿದ್ದ ಕ್ರಿಸ್ತನ ಜನ್ಮದಿನವೇ ಈ ರೀತಿಯ ಘಟನೆ ನಡೆದು ಹೋಗಿದೆ.

ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರ?

ಕೆಲ ದಿನಗಳ ಹಿಂದಷ್ಟೆ ರಷ್ಯಾ ವಿರುದ್ಧ ಉಕ್ರೇನ್ ಸೇನೆ ಡ್ರೋನ್‌ಗಳ ಮೂಲಕ ಭೀಕರ ಅಟ್ಯಾಕ್ ನಡೆಸಿತ್ತು. 9/11ರ ಅಮೆರಿಕ ಮೇಲಿನ ಭೀಕರ ದಾಳಿಯ ನೆನಪು ಮಾಡುವಂತೆ ಅಟ್ಯಾಕ್ ಆಗಿತ್ತು 8 ಡ್ರೋನ್‌ಗಳ ಬಳಸಿ ಈ ರೀತಿ ಡೆಡ್ಲಿ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿತ್ತು. ದಾಳಿ ತೀವ್ರತೆಗೆ 'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ನಗರ ಖಜಾನ್ ನಲುಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ರಷ್ಯಾ ಕೂಡ ರೊಚ್ಚಿಗೆದ್ದು ಕ್ರಿಸ್‌ಮಸ್ ಹಬ್ಬದ ದಿನವೂ ಉಕ್ರೇನ್ ವಿರುದ್ಧ ದಾಳಿ ಆರಂಭಿಸಿದ್ದು, ಉಕ್ರೇನ್ ವಿರುದ್ಧ ರಷ್ಯಾ ನ್ಯೂಕ್ಲಿಯರ್ ಅಸ್ತ್ರ ಬಳಸುತ್ತಾ? ಎನ್ನುವ ಭಯ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+