ಯುದ್ಧದ ಭಯ: ಉಕ್ರೇನ್‌ನಲ್ಲಿ ಮರದ ಬಂದೂಕುಗಳಿಂದ ತರಬೇತಿ

ಕೈವ್, ಜನವರಿ 31: ಉಕ್ರೇನ್‌ನಲ್ಲಿ ಯುದ್ಧದ ಭೀತಿ ಎದುರಾಗಿದ್ದು, ಸ್ಥಳೀಯರಿಗೆ ಮರದ ಬಂಧೂಕುಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಸಂಭಾವ್ಯ ರಷ್ಯಾದ ದಾಳಿಯ ಬೆದರಿಕೆಯ ದೃಷ್ಟಿಯಿಂದ ಉಕ್ರೇನ್‌ನ ಸಾಮಾನ್ಯ ಜನರು ಸಹ ಸಜ್ಜಾಗ ತೊಡಗಿದ್ದಾರೆ. ನಕಲಿ ಬಂದೂಕುಗಳ ಮೂಲಕ ರಷ್ಯಾದ ಬೆದರಿಕೆಯನ್ನು ಎದುರಿಸಲು ಸೇನೆಯೊಂದಿಗೆ ಮಿಲಿಟರಿ ಅಭ್ಯಾಸದಲ್ಲಿ ಜನ ನಿರತರಾಗಿರುವುದು ಕಂಡುಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ ಉಕ್ರೇನ್‌ನ ಅನೇಕ ನಗರಗಳಲ್ಲಿ ಜನರಿಗೆ ಮಿಲಿಟರಿ ತರಬೇತಿ ನೀಡುವ ಸಂಬಂಧ ಹೋರ್ಡಿಂಗ್ ಗಳನ್ನು ಹಾಕಲಾಗಿದೆ. ಈ ಹೋರ್ಡಿಂಗ್‌ಗಳಲ್ಲಿ "ನಿಮ್ಮ ಮನೆಯನ್ನು ಹೇಗೆ ರಕ್ಷಿಸಬೇಕೆಂಬ ಬಗ್ಗೆ ತಿಳಿದುಕೊಳ್ಳಿರಿ" ಎಂದು ಬರೆಯಲಾಗಿದೆ. ಇದರಿಂದ ಉಕ್ರೇನ್ ಸೇನೆಯ ತರಬೇತಿಯಲ್ಲಿ ಸಾಮಾನ್ಯ ನಾಗರಿಕರು ಪಾಲ್ಗೊಳ್ಳುವ ಪ್ರಮಾಣ ಹೆಚ್ಚಾಗತೊಡಗಿದೆ.

Ukrainian Soldiers Train With Wooden Assault Rifles Amid Russia Invasion Fears

ಕದನ ವಿರಾಮದ ನಂತರವೂ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿದೆ. ರಷ್ಯಾದ ಸೈನ್ಯವು ಉಕ್ರೇನ್ ಅನ್ನು ಭೂ ಹಾಗೂ ಸಮುದ್ರದ ಮೂಲಕ ಸುತ್ತುವರಿದಿದೆ.

ರಾಜತಾಂತ್ರಿಕರ ಮಾತುಕತೆ ವಿಫಲವಾದ್ರೆ ಉಕ್ರೇನ್‌ನ ಪೂರ್ವ ಗಡಿಯಲ್ಲಿ ಯುದ್ಧ ಪ್ರಾರಂಭವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ರಷ್ಯಾ- ಉಕ್ರೇನ್ ನಡುವಿನ ಗಡಿ ಕಲಹ ಯುದ್ಧದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆಯೆಂದು ಅಮೆರಿಕಾಧ್ಯಕ್ಷ ಜೊ ಬೈಡನ್ ಹೊರಹಾಕಿದ್ದಾರೆ.

ಈ ಬಗ್ಗೆ ಜೊ ಬೈಡನ್ ಯುಕ್ರೇನ್ ಅಧ್ಯಕ್ಷರೊಡನೆ ಮಾತನಾಡಿದ್ದು ರಷ್ಯಾ ಕುರಿತು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಇತ್ತೀಚಿಗಷ್ಟೆ ರಷ್ಯಾ- ಉಕ್ರೇನ್ ನಡುವೆ ಕದನವಿರಾಮ ಒಪ್ಪಂದ ಏರ್ಪಟ್ಟಿತ್ತು ಎನ್ನುವುದು ಗಮನಾರ್ಹ.

ಫೆಬ್ರವರಿ ತಿಂಗಳಲ್ಲಿ ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡುವ ಸಾಧ್ಯತೆ ನಿಚ್ಚಳವಾಗಿದೆಯೆಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಯುಕ್ರೇನ್ ಗಡಿಯಲ್ಲಿ ರಷ್ಯಾ 10,000 ಸೈನಿಕರನ್ನು ಜಮಾವಣೆ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಚಿಂತನೆಯೂ ಸ್ವೀಕಾರಾರ್ಹವಲ್ಲ' ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರರು ಗುರುವಾರ ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುವ ಭೀತಿ ನಿವಾರಣೆಯ ನಿಟ್ಟಿಯಲ್ಲಿ ಇದು ರಷ್ಯಾದಿಂದ ಹೊರಬಿದ್ದಿರುವ ಮತ್ತೊಂದು ಅಧಿಕೃತ ಹೇಳಿಕೆಯಾಗಿದೆ.

'ನಮ್ಮ ದೇಶವು ಯಾರ ಮೇಲೂ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ನಮ್ಮ ಜನರ ನಡುವಿನ ಯುದ್ಧದ ಚಿಂತನೆಯು ಸಹ ಸ್ವೀಕಾರಾರ್ಹವಲ್ಲ' ಎಂದು ಸಚಿವಾಲಯದ ವಕ್ತಾರ ಅಲೆಕ್ಸಿ ಜೈಟ್ಸೆವ್ ಹೇಳಿದರು.

2014ರಲ್ಲಿ ರಷ್ಯಾ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಉಕ್ರೇನ್ ನಲ್ಲಿ ಪ್ರಾದೇಶಿಕ ರಕ್ಷಣಾ ಪಡೆಗಳನ್ನು ಸ್ಥಾಪನೆ ಮಾಡಲಾಯಿತು. ಯೋಧರು ನೀಡುತ್ತಿರುವ ಈ ಟ್ರೈನಿಂಗ್ ನಲ್ಲಿ ಗೆರಿಲ್ಲಾ ತಂತ್ರಗಳ ಜೊತೆಗೆ ಬಂದೂಕು ನಿರ್ವಹಣೆಯ ಬಗ್ಗೆ ಕಲಿಸಿ ಕೊಡಲಾಗುತ್ತಿದೆ. ವಯಸ್ಕರ ಜೊತೆಗೆ ಮಕ್ಕಳು ಸಹ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಮಧ್ಯೆ ಬುಧವಾರ ಪ್ಯಾರಿಸ್ ನಲ್ಲಿ 8 ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಒಪ್ಪಂದವಾಗಿದೆ. ಆದ್ರೂ ಸಹ ಎರಡು ದೇಶಗಳ ಮಧ್ಯೆ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ರಷ್ಯಾ ರಾಷ್ಟ್ರದ ಯುದ್ಧ ಭೀತಿ ಹಾಗೂ ಪುಟಿನ್ ಆಕ್ರಮಣಕಾರಿ ನೀತಿಯ ಬಗ್ಗೆ ಉಕ್ರೇನ್ ಜನ್ರು ಕೋಪದಲ್ಲಿದ್ದಾರೆ.

2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡಿರುವ ರಷ್ಯಾ ಪೂರ್ವ ಉಕ್ರೇನ್‌ನಲ್ಲಿ ದಂಗೆಯನ್ನು ಬೆಂಬಲಿಸಿತ್ತು. ಸದ್ಯ ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಮತ್ತು ನೆರೆಯ ಬೆಲಾರಸ್‌ನಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಯುದ್ಧ ಭೀತಿಗೆ ಕಾರಣವಾಗಿದೆ ಎಂದು ಬ್ರಿಟನ್ ಆರೋಪಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+