‘ತಪ್ಪಾಯ್ತು ನಮ್ಮನ್ನು ಕ್ಷಮಿಸಿಬಿಡಿ’: ದಾರಿಗೆ ಬಂತು ಉಕ್ರೇನ್!
ಉಕ್ರೇನ್: ಯುದ್ಧದ ಬಲೆಯಲ್ಲಿ ಸಿಲುಕಿ, ರಷ್ಯಾ ಜೊತೆ ಭೀಕರ ಕಾಳಗಕ್ಕೆ ಇಳಿದಿರುವ ಉಕ್ರೇನ್ ಒದ್ದಾಡುತ್ತಿದೆ. ಆದ್ರೂ ಭಾರತದ ವಿರುದ್ಧ ಏನಾದರೂ ಒಂದು ಹೇಳಿಕೆ ನೀಡಿ, ಅಥವಾ ಇನ್ನೇನಾದರೂ ಎಡವಟ್ಟು ಮಾಡಿ ಸಮಸ್ಯೆಗೆ ಸಿಲುಕಿ ಕ್ಷಮೆ ಕೇಳುತ್ತಿದೆ ಉಕ್ರೇನ್. ಇದೀಗ ಕಾಳಿ ಮಾತೆಗೆ ಅವಮಾನ ಮಾಡಿದ ಕಾರಣಕ್ಕೆ, ಉಕ್ರೇನ್‌ನ ವಿದೇಶಾಂಗ ಉಪ ಸಚಿವೆ ಎಮಿನಿ ಝಪರೋವಾ ಕ್ಷಮೆ ಕೇಳಿದ್ದಾರೆ.
ಅಂದಹಾಗೆ ಕಾಳಿ ಮಾತೆಗೆ ಅವಮಾನ ಮಾಡುವ ರೀತಿಯಲ್ಲಿದ್ದ ಚಿತ್ರವನ್ನ ಉಕ್ರೇನ್ ರಕ್ಷಣಾ ಸಚಿವಾಲಯ ಹೊಗಳಿತ್ತು. ಸ್ಫೋಟಕದ ಹೊಗೆಯ ಸುರುಳಿ ನಡುವೆ ಕಾಳಿ ಮಾತೆ ಚಿತ್ರ ಚಿತ್ರಿಸಿ 'ವರ್ಕ್ ಆಫ್ ಆರ್ಟ್' ಎಂಬ ಟೈಟಲ್ ಕೊಟ್ಟು ಉಕ್ರೇನ್ ರಕ್ಷಣಾ ಸಚಿವಾಲಯ ಏಪ್ರಿಲ್ 30ರಂದು ವಿವಾದಾತ್ಮಕ ಟ್ವೀಟ್ ಪೋಸ್ಟ್ ಮಾಡಿತ್ತು. ಟ್ವೀಟ್‌ಗೆ ಸೋಷಿಯಲ್ ಮೀಡಿಯಾ ಗರಂ ಆಗಿತ್ತು, ಭಾರತೀಯರು ಉಕ್ರೇನ್ ಸರ್ಕಾರದ ಬೆವರಿಳಿಸಿದ್ದರು. ಹೀಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾದ ಬಳಿಕ ತಕ್ಷಣ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಲಾಗಿತ್ತು. ಇದೀಗ ತಪ್ಪಿನ ಅರಿವಾಗಿ ಕ್ಷಮೆಯನ್ನೂ ಕೇಳಿದೆ.

'ಭಾರತದ ಸಂಸ್ಕೃತಿಯನ್ನು ಗೌರವಿಸುತ್ತೇವೆ'
ಮಾಡೋದೆಲ್ಲಾ ಮಾಡಿ, ಈಗ ಭಯಪಟ್ಟು ಕ್ಷಮೆ ಕೇಳಲು ಉಕ್ರೇನ್ ಬಂದಿದೆ ಎಂಬ ಆರೋಪಗಳ ನಡುವೆ ಉಕ್ರೇನ್ ವಿದೇಶಾಂಗ ಉಪ ಸಚಿವೆ ಎಮಿನಿ ಝಪರೋವಾ ಭಾರತ ಮತ್ತು ಭಾರತೀಯರ ಕ್ಷಮೆಯಾಚಿಸಿದ್ದಾರೆ. 'ನಮ್ಮ ದೇಶದ ಜನರು ಭಾರತದ ಅನನ್ಯ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಉಭಯ ದೇಶಗಳ ನಡುವಿನ ಸಹಕಾರ ಇನ್ನಷ್ಟು ವೃದ್ಧಿಸಲಿದೆ' ಎಂದು ಟ್ವೀಟ್ ಮಾಡಿದ್ದಾರೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ ಕೂಡ ಈ ಕುರಿತು ಕ್ಷಮೆ ಕೋರಿದೆ. ಈ ಮೂಲಕ ಮಾಡಿದ ತಪ್ಪಿನ ಅರಿವು ಉಕ್ರೇನ್‌ನ ರಕ್ಷಣಾ ಸಚಿವಾಲಯಕ್ಕೆ ಆದಂತಾಗಿದೆ.
'ಭಾರತವೇ ವಿಶ್ವಗುರು' ಎಂದಿದ್ದ ಉಕ್ರೇನ್!
ಇನ್ನು ಏಪ್ರಿಲ್ ಆರಂಭದಲ್ಲಿ ಕೆಲವೇ ದಿನಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, ಭಾರತದ ಜೊತೆ ಪಯಣಿಸುವುದು ಉಕ್ರೇನ್‌ಗೆ ಬಹುಮುಖ್ಯ ಸಂಗತಿ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿದ್ದು, ವಿಶ್ವ ಗುರುವಿನ ಸ್ಥಾನ ಅಲಂಕರಿಸಿದೆ ಎನ್ನುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಬೆಳೆದು ನಿಂತ ಪರಿಯನ್ನು ಹೊಗಳಿದ್ದರು. ಇದೇ ವೇಳೆ ಹಲವು ದ್ವಿಪಕ್ಷೀಯ ವಿಚಾರಗಳು ಹಾಗೂ ವ್ಯಾಪಾರ ಸಂಬಂಧಿ ವಿಷಯಗಳು ಚರ್ಚೆಯಾಗಿದ್ದವು. ಆದರೆ ಉಕ್ರೇನ್ ರಕ್ಷಣಾ ಸಚಿವಾಲಯ ಎಡವಟ್ಟು ಮಾಡಿ ಉಕ್ರೇನ್ ಸರ್ಕಾರಕ್ಕೆ ಭಯ ಹುಟ್ಟಿಸಿತ್ತು.

ಭಾರತಕ್ಕೆ ನಾವು ಒತ್ತಾಯ ಮಾಡಲ್ಲ!
ಇನ್ನು ತಮ್ಮ ಭೇಟಿಯ ಸಂದರ್ಭದಲ್ಲಿ ಎಮಿನಿ ಝಪರೋವಾ, ಭಾರತ ಆರ್ಥಿಕ ಸಂಬಂಧಗಳನ್ನು ಯಾವ ರಾಷ್ಟ್ರದ ಜೊತೆ ಬೇಕಾದರೂ ಹೊಂದಬಹುದು. ಈ ಬಗ್ಗೆ ಉಕ್ರೇನ್ ಯಾವುದೇ ರೀತಿ ಒತ್ತಾಯ ಮಾಡುವುದಿಲ್ಲ ಅಥವಾ ಒತ್ತಡವನ್ನೂ ಹೇರಲು ಆಗಲ್ಲ ಎನ್ನುವ ಮೂಲಕ ರಷ್ಯಾ ಜೊತೆಗಿನ ಭಾರತದ ವ್ಯಾಪಾರ ಸಂಬಂಧಕ್ಕೆ ಉಕ್ರೇನ್ ಅಡ್ಡಿಯಿಲ್ಲ ಎಂದಿದ್ದರು. ಅಲ್ಲದೆ ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಭಾರತ ಭಾರಿ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದಂತೆ ಭಾಸವಾಗಿತ್ತು.
ಜಗತ್ತಿನ ಗಮನ ಸೆಳೆದಿತ್ತು ಎಮಿನಿ ಭೇಟಿ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಬರೋಬ್ಬರಿ 1 ವರ್ಷ ಕಳೆದಿದೆ. ಕೆಲವೇ ವಾರದಲ್ಲಿ ಭೀಕರ ಯುದ್ಧ ಮುಗಿಯಲಿದೆ ಎಂಬ ವಿಶ್ವಾಸದಲ್ಲಿದ್ದ ಜಗತ್ತಿಗೆ ಇದು ಬೇಸರ ತರಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಹೆಚ್ಚಾದಷ್ಟು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಯುದ್ಧಕ್ಕೆ ಅಂತ್ಯ ಹಾಡಲು ಭಾರತವೂ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಬಳಿ ಉಕ್ರೇನ್ ಮನವಿ ಮಾಡುತ್ತಿದೆ. ಇದೇ ಹೊತ್ತಲ್ಲಿ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ ಭಾರತಕ್ಕೆ ಆಗಮಿಸಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದೀಗ ಆಗಿರುವ ತಪ್ಪಿಗೆ ಭಾರತದ ಬಳಿ ಕ್ಷಮೆ ಕೇಳಿದ್ದಾರೆ.
ಒಟ್ಟಾರೆ ಉಕ್ರೇನ್ ಈಗಿರುವ ಪರಿಸ್ಥಿತಿಯಲ್ಲಿ ಭಾರತದ ಸಹಾಯ ಅತ್ಯಗತ್ಯ. ಹೀಗಾಗಿ ತಮ್ಮ ತಪ್ಪಿನ ಅರಿವು ಆದ ತಕ್ಷಣ ಉಕ್ರೇನ್ ಸಚಿವೆ ಎಮಿನಿ ಝಪರೋವಾ ಮುಂದೆ ಬಂದು ಕ್ಷಮೆ ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ಅಂತ್ಯ ಹಾಡಿ, ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ದಾರೆ. ಈಗಾಗಲೇ ಭಾರತದ ಸಚಿವರು ಕೂಡ ಉಕ್ರೇನ್ ರಕ್ಷಣಾ ಸಚಿವಾಲಯ ಎಡವಟ್ಟಿನ ಬಗ್ಗೆ ಅರಿವು ಮೂಡಿಸಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಉಕ್ರೇನ್ ಭಾರತದ ಬಳಿ ಕ್ಷಮೆ ಕೇಳಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications