Zelensky Canada Visit: ಕೆನಡಾ ತಲುಪಿದ ಉಕ್ರೇನ್ ಅಧ್ಯಕ್ಷ, ದಿಢೀರ್ ಭೇಟಿ ಉದ್ದೇಶವೇನು?

ರಷ್ಯಾ ಜೊತೆ ರಣಭೀಕರ ಕಾಳಗ ನಡೆಯುವ ಸಮಯದಲ್ಲೇ ಉಕ್ರೇನ್ ಅಧ್ಯಕ್ಷ ಇದೀಗ ಕೆನಡಾ ತಲುಪಿದ್ದಾರೆ. ಅಮೆರಿಕ ಭೇಟಿಗಾಗಿ ವೊಲೊಡಿಮಿರ್‌ ಝೆಲೆನ್‌ಸ್ಕಿ ತೆರಳಿದ್ದರು. ಇದೇ ಸಮಯದಲ್ಲಿ ಅಮೆರಿಕ ಪಕ್ಕದ ದೇಶ ಕೆನಡಾಗೆ ಭೇಟಿ ನೀಡಿದ್ದಾರೆ ಝೆಲೆನ್‌ಸ್ಕಿ. ಆದರೆ ಭಾರತ & ಕೆನಡಾ ನಡುವೆ ತಿಕ್ಕಾಟ ನಡೆಯುತ್ತಿರುವ ವೇಳೆಗೆ ವೊಲೊಡಿಮಿರ್‌ ಝೆಲೆನ್‌ಸ್ಕಿ ದಿಢೀರ್ ಭೇಟಿ ಕುತೂಹಲ ಕೆರಳಿಸಿದೆ.

ಕೆನಡಾ ಕೂಡ ನ್ಯಾಟೋ ಒಕ್ಕೂಟ ರಾಷ್ಟ್ರವಾಗಿದ್ದು, ರಷ್ಯಾ ವಿರುದ್ಧ ಮತ್ತು ಉಕ್ರೇನ್ ಪರ ನಿಂತಿದೆ. ಇನ್ನು ರಷ್ಯಾ ವಿರುದ್ಧ ಹೋರಾಟ ನಡೆಸಲು ಅಮೆರಿಕ & ನ್ಯಾಟೋದ ಬೆಂಬಲ ಉಕ್ರೇನ್‌ಗೆ ಅತ್ಯಗತ್ಯ. ಆದ್ರೆ ಕಳೆದ 2 ವರ್ಷದಿಂದ ಹೀಗೆ ದುಡ್ಡು ಕೊಟ್ಟೂ, ಕೊಟ್ಟೂ ಅಮೆರಿಕ ಕೂಡ ಸುಸ್ತಾಗಿ ಹೋಗಿದೆ. ಹಾಗೇ ನ್ಯಾಟೋ ಪಡೆಗಳು ಈ ವೇಳೆ ಉಕ್ರೇನ್‌ಗೆ ಸಹಾಯ ಮಾಡಲು ಹಿಂದೆ ಮುಂದೆ ಯೋಚಿಸುತ್ತಿವೆ. ಹೀಗಾಗಿ ಉಕ್ರೇನ್ ಅಧ್ಯಕ್ಷ ಕೆನಡಾ ಪ್ರಧಾನಿ ಟ್ರುಡೋ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

Ukraines Zelensky Pays Surprise Visit to Canada amid the ongoing war with Russia: know more

ಬೈಡನ್ ಭೇಟಿ ಮಾಡಿದ್ದ ಝೆಲೆನ್‌ಸ್ಕಿ

ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಬೈಡನ್ ಭೇಟಿ ಮಾಡಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾತುಕತೆ ನಡೆಸಿದ್ದರು. ಅಮೆರಿಕ ಅಧ್ಯಕ್ಷರ ಅಧಿಕೃತ ಸರ್ಕಾರಿ ನಿವಾಸ ವೈಟ್‌ಹೌಸ್ ಉಕ್ರೇನ್ ಅಧ್ಯಕ್ಷರನ್ನ ಭರ್ಜರಿಯಾಗಿ ಸ್ವಾಗತಿಸಿತ್ತು. ಈ ವೇಳೆ ಉಕ್ರೇನ್‌ಗೆ ಯುದ್ಧದಲ್ಲಿ ಸಹಾಯ ಮಾಡುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿತ್ತು. ಇಷ್ಟೆಲ್ಲಾ ಚರ್ಚೆ ನಡುವೆ ಅಮೆರಿಕ ಕೂಡ ಆರ್ಥಿಕ ಸಂಕಷ್ಟದ ಪರಿಣಾಮ ಯುದ್ಧದಲ್ಲಿ ಉಕ್ರೇನ್ ಪರ ನಿಲ್ಲಲು ಯೋಚಿಸುತ್ತಿದೆ ಎಂಬ ಆರೋಪ ಇದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ನಿನ್ನೆ ಝೆಲೆನ್‌ಸ್ಕಿ ಹಾಗೂ ಬೈಡನ್ ಚರ್ಚೆ ನಡೆಸಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಎಫೆಕ್ಟ್?

ಈಗಾಗಲೇ ಅಮೆರಿಕ ಸಾಕಷ್ಟು ಪ್ರಮಾಣದ ನೆರವನ್ನು ಉಕ್ರೇನ್‌ಗೆ ಕೊಟ್ಟಿದೆ. ಕಳೆದ 2 ವರ್ಷದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಸುರಿದಿದೆ. ಆದರೂ ಯುದ್ಧ ನಿಲ್ಲುತ್ತಿಲ್ಲ, ಈ ಮಧ್ಯೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದೆ. ಹೀಗಾಗಿ ಜೋ ಬೈಡನ್ ನಡೆ ಬಗ್ಗೆ ಕೂಡ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ನೋಡಿದರೆ ಅಮೆರಿಕಗೂ ದುಡ್ಡು ಅಗತ್ಯ ಇದ್ದು, ಉಕ್ರೇನ್ ಕೇಳುತ್ತಿರುವ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯ ಅಸಾಧ್ಯ ಎನ್ನಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಝೆಲೆನ್‌ಸ್ಕಿ ಕೆನಡಾ ವಿಸಿಟ್ ಕುತೂಹಲ ದುಪ್ಪಟ್ಟಾಗಿಸಿದೆ.

Ukraines Zelensky Pays Surprise Visit to Canada amid the ongoing war with Russia: know more

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಎಲ್ಲವನ್ನೂ ಹಾಳೂ ಮಾಡಿದೆ. ಅದರಲ್ಲೂ ಜಗತ್ತು ಎರಡು ಭಾಗವಾಗಿ ಹೋಗುತ್ತಿದ್ದು, ಒಂದು ಕಡೆ ಉಕ್ರೇನ್‌ಗೆ ಬೆಂಬಲ ನೀಡಿ ಕೆಲವು ದೇಶಗಳು ನಿಂತಿವೆ. ಮತ್ತೊಂದು ಕಡೆ ರಷ್ಯಾಗೂ ಕೆಲವು ದೇಶಗಳು ಬೆಂಬಲ ನೀಡುತ್ತಿವೆ. ಹೀಗಾಗಿ ಪರಿಸ್ಥಿತಿ ಕಗ್ಗಂಟಾಗಿ ಹೋಗಿದ್ದು, ಯುದ್ಧ ನಿಲ್ಲಿಸುವ ಪ್ರಯತ್ನ ವಿಫಲವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+