Ukraine: ರಷ್ಯಾ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಮುಂದಾದ ಉಕ್ರೇನ್?
ರಷ್ಯಾ
& ಉಕ್ರೇನ್ ವಾರ್ ಜೋರಾಗಿ ಯಾವ ಕ್ಷಣದಲ್ಲಿ ಯುದ್ಧ ನಿಲ್ಲುತ್ತೋ ಅಂತಾ ಇಡೀ ಜಗತ್ತು ಈಗ ಚಿಂತೆ ಮಾಡುವಂತೆ ಆಗಿದೆ. ಸುಖಾಸುಮ್ಮನೆ ಇಬ್ಬರೂ ಯುದ್ಧ ಜೋರು ಮಾಡಿರುವ ಕಾರಣ ಇದೀಗ ಭಾರಿ ದೊಡ್ಡ ಗಲಾಟೆ ನಡೆಯುತ್ತಿದೆ. ಅದರಲ್ಲೂ ಉಕ್ರೇನ್ ತನ್ನ ಮೇಲೆ ದಾಳಿ ಮಾಡಿದ ರಷ್ಯಾ ವಿರುದ್ಧ ಭಾರಿ ಘೋರವಾಗಿ ಸೇಡು ತೀರಿಸಿಕೊಳ್ಳಲು ಇದೀಗ ಸಜ್ಜಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಹೀಗೆ ಮತ್ತೊಂದು ಭಾರಿ ಭೀಕರ ತಿಕ್ಕಾಟಕ್ಕೆ ಎರಡೂ ದೇಶಗಳು ಸಜ್ಜಾದಂತೆ ಕಾಣುತ್ತಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ರಷ್ಯಾ ಸೇನೆ ನಿನ್ನೆ ದಿಢೀರ್ ಅಟ್ಯಾಕ್ ಮಾಡಿತ್ತು. ಉಕ್ರೇನ್ ದೇಶದ ವಿವಿಧ ಭಾಗ & ಪ್ರಾಂತ್ಯಗಳ ಮೇಲೆ ಶಕ್ತಿಶಾಲಿ ಮಿಸೈಲ್ & ಡ್ರೋನ್ ಬಳಸಿ ದಾಳಿ ಮಾಡಿತ್ತು. 574 ಡ್ರೋನ್‌ಗಳ ಜೊತೆಗೆ 40 ಕ್ಷಿಪಣಿ ಕೂಡ ಬಳಸಿ ಅಟ್ಯಾಕ್ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಜನ ತೀವ್ರ ಗಾಯಗಳಿಗೆ ತುತ್ತಾಗಿದ್ದರು. ಯುರೋಪ್ ಪ್ರವಾಸಕ್ಕೆ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ತೆರಳಿದ ಸಮಯದಲ್ಲೇ ಈ ಘಟನೆ ನಡೆದಿತ್ತು. ಇದಕ್ಕೂ ಮೊದಲು ಉಕ್ರೇನ್ ಸೇನೆ ರಷ್ಯಾ ವಿರುದ್ಧ 614 ಡ್ರೋನ್‌ಗಳ ಬಳಸಿ ದಾಳಿ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಮತ್ತೊಂದು ರೌಂಡ್ ರಷ್ಯಾ ವಿರುದ್ಧ ಶಕ್ತಿಶಾಲಿ ಅಸ್ತ್ರ ಬಳಸಲು ಉಕ್ರೇನ್ ಸೇನೆ ಮುಂದಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. id='are-slot-2' class='oiad oi-axt oiadv'>












Click it and Unblock the Notifications