ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಕೊನೆಯವರೆಗೂ ಹೋರಾಟ ಮಾಡುತ್ತದೆ: ವೊಲೊಡಿಮಿರ್ ಝೆಲೆನ್ಸ್ಕಿ

|
Google Oneindia Kannada News

ಕೀವ್, ಆಗಸ್ಟ್ 25: ಉಕ್ರೇನ್ ದೇಶದ ಸ್ವಾತಂತ್ರ್ಯ ದಿನವಾದ ಬುಧವಾರ ರೈಲು ನಿಲ್ದಾಣದ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿದೆ ಎಂದು ಹೇಳಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ "ಕೊನೆಯವರೆಗೂ" ಹೋರಾಡುವುದಾಗಿ ಪ್ರತಿಜ್ಞೆ ಮಾಡಿದರು.

ಮಧ್ಯ ನಿಪ್ರೊಪೆಟ್ರೋವ್ಸ್ಕ್ ಪ್ರದೇಶದ ಚಾಪ್ಲಿನೋ ನಿಲ್ದಾಣದ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, 22 ಜನರನ್ನು ಬಲಿ ಪಡೆದಿದೆ. ಹಿಂದಿನ ಟೋಲ್‌ನಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದರು.

Breaking: ಝಪೊರಿಝಿಯಾ ಅಣು ಸ್ಥಾವರದ ಮೇಲೆ ಶೆಲ್ ದಾಳಿBreaking: ಝಪೊರಿಝಿಯಾ ಅಣು ಸ್ಥಾವರದ ಮೇಲೆ ಶೆಲ್ ದಾಳಿ

"ಚಾಪ್ಲಿನೋ ಇಂದು ನಮ್ಮ ನೋವು, ಈ ಕ್ಷಣದಲ್ಲಿ, ಕಾರಿನಲ್ಲಿ ಸುಟ್ಟುಹೋದ ಐದು ಜನರು ಸೇರಿದಂತೆ 22 ಮಂದಿ ಸತ್ತಿದ್ದಾರೆ. ಬಾಲಕ ಸಾವನ್ನಪ್ಪಿದ್ದಾನೆ, ಅವನಿಗೆ 11 ವರ್ಷ, ರಷ್ಯಾದ ರಾಕೆಟ್ ಅವನ ಮನೆಯನ್ನು ನಾಶಪಡಿಸಿತು" ಎಂದು ಅವರು ತಮ್ಮ ದೈನಂದಿನ ಭಾಷಣದಲ್ಲಿ ಹೇಳಿದರು.

ಉಕ್ರೇನ್‌ನ ಸ್ವಾತಂತ್ರ್ಯ ದಿನದಂದು ರಷ್ಯಾ ಏನಾದರೂ ಅನಾಹುತ ಮಾಡಬಹುದು ಎಂದು ಝೆಲೆನ್ಸ್‌ಕಿ ಈ ಮೊದಲೆ ಎಚ್ಚರಿಕೆ ನೀಡಿದ್ದರು.

ಸೋವಿಯತ್ ಒಕ್ಕೂಟದಿಂದ 1991 ರಲ್ಲಿ ಸ್ವಾತಂತ್ರ್ಯ ಪಡೆದ ದಿನವನ್ನು ಉಕ್ರೇನ್ ಆಚರಣೆ ಮಾಡುವ ದಿನದಂದು ಝೆಲೆನ್ಸ್ಕಿ ಮಾತನಾಡಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೈನ್ಯವನ್ನು ಆಕ್ರಮಣ ಮಾಡಲು ಆದೇಶಿಸಿದ ಆರು ತಿಂಗಳಾಗಿದೆ.

Landmark Deal: ಈ ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಆ ವಿಶ್ವಸಂಸ್ಥೆ ಮಧ್ಯಸ್ಥಿಕೆLandmark Deal: ಈ ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಆ ವಿಶ್ವಸಂಸ್ಥೆ ಮಧ್ಯಸ್ಥಿಕೆ

 ಆಕ್ರಮಿತ ಪ್ರದೇಶಗಳ ಮೇಲೆ ನಿಯಂತ್ರಣಕ್ಕೆ ಸಂಚು

ಆಕ್ರಮಿತ ಪ್ರದೇಶಗಳ ಮೇಲೆ ನಿಯಂತ್ರಣಕ್ಕೆ ಸಂಚು

ರಷ್ಯಾ ಉಕ್ರೇನ್‌ನಲ್ಲಿ ಆಕ್ರಮಿತ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಲು ಜನಾಭಿಪ್ರಾಯ ಸಂಗ್ರಹಿಸಲು ತಯಾರಿ ನಡೆಸುತ್ತಿದೆ ಎಂದು ಅಮೆರಿಕ ಪ್ರತ್ಯೇಕವಾಗಿ ಎಚ್ಚರಿಕೆ ನೀಡಿದೆ.

ಈ ವಾರದಲ್ಲಿ ಆಕ್ರಮಿತ ಪ್ರದೇಶಗಳ ಮೇಲೆ ತನ್ನ ನಿಯಂತ್ರಣವನ್ನು ಔಪಚಾರಿಕಗೊಳಿಸಲು ವಿನ್ಯಾಸಗೊಳಿಸಲಾದ ಜನಾಭಿಪ್ರಾಯ ಸಂಗ್ರಹಣೆಯನ್ನು ರಷ್ಯಾ ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ.

"ರಷ್ಯಾದ ನಾಯಕತ್ವವು ನಕಲಿ ಜನಾಭಿಪ್ರಾಯ ಸಂಗ್ರಹಿಸಲು ತಯಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ" ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.

 ಉಕ್ರೇನ್ ಗೆಲ್ಲುತ್ತದೆ ಎಂದ ಬೋರಿಸ್ ಜಾನ್ಸನ್

ಉಕ್ರೇನ್ ಗೆಲ್ಲುತ್ತದೆ ಎಂದ ಬೋರಿಸ್ ಜಾನ್ಸನ್

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೈವ್‌ಗೆ ಹಠಾತ್ ಭೇಟಿ ನೀಡಿದರು, ಉಕ್ರೇನ್‌ನ ಆರು ತಿಂಗಳ ಸುದೀರ್ಘ ಪ್ರತಿರೋಧವನ್ನು ಶ್ಲಾಘಿಸಿದರು. ಉಕ್ರೇನ್ ಬಲವನ್ನು ಲೆಕ್ಕ ಹಾಕುವಲ್ಲಿ ಪುಟಿನ್ ವಿಫಲರಾಗಿದ್ದಾರೆ ಎಂದು ಜಾನ್ಸನ್ ಹೇಳಿದ್ದಾರೆ.

"ಶಾಂತಿಯಿಂದ, ಸ್ವಾತಂತ್ರ್ಯದಲ್ಲಿ ಬದುಕುವ ನಿಮ್ಮ ಹಕ್ಕಿಗಾಗಿ ನೀವು ಹೋರಾಡುತ್ತಿದ್ದೀರಿ, ಅದಕ್ಕಾಗಿಯೇ ಉಕ್ರೇನ್ ಗೆಲ್ಲುತ್ತದೆ" ಎಂದು ಅವರು ಹೇಳಿದರು.

 ಕೊನೆಯವರೆಗೂ ನಾವು ಹೋರಾಡುತ್ತೇವೆ

ಕೊನೆಯವರೆಗೂ ನಾವು ಹೋರಾಡುತ್ತೇವೆ

ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಬಿಡುಗಡೆ ಮಾಡಿದರು. "ನೀವು ಯಾವ ಸೈನ್ಯವನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ. ನಾವು ನಮ್ಮ ನೆಲದ ಬಗ್ಗೆ ಮಾತ್ರ ಚಿಂತಿಸುತ್ತೇವೆ. ನಮ್ಮ ಭೂಮಿಗಾಗಿ ನಾವು ಕೊನೆಯವರೆಗೂ ಹೋರಾಡುತ್ತೇವೆ." ಎಂದು ಹೇಳಿದರು.

ರಷ್ಯಾವನ್ನು ಉಲ್ಲೇಖಿಸಿದ ಝೆಲೆನ್ಸ್‌ಕಿ ಭಯೋತ್ಪಾದಕರ ಜೊತೆ ಉಕ್ರೇನ್ ತಿಳುವಳಿಕೆ ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದರು. "ನಮಗೆ ಇಡೀ ಉಕ್ರೇನ್, ಎಲ್ಲಾ 25 ಪ್ರದೇಶಗಳು ಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಅಥವಾ ರಾಜಿ ಇಲ್ಲ" ಎಂದು ಪ್ರತಿಜ್ಞೆ ಮಾಡಿದರು.

 ಹೊಸ ಮಿಲಿಟರಿ ಸಹಾಯ ಘೋಷಿಸಿದ ಅಮೆರಿಕ

ಹೊಸ ಮಿಲಿಟರಿ ಸಹಾಯ ಘೋಷಿಸಿದ ಅಮೆರಿಕ

ಅಮೆರಿಕ ಉಕ್ರೇನ್‌ಗೆ 3 ಬಿಲಿಯನ್ ಡಾಲರ್ ಹೊಸ ಮಿಲಿಟರಿ ನೆರವನ್ನು ಘೋಷಿಸಿತು. ಹೊಸ ನಿಧಿಯು ಕೀವ್ ತನ್ನ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಸಾಮಗ್ರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಪೂರ್ವ ಮತ್ತು ದಕ್ಷಿಣದಲ್ಲಿ ರಷ್ಯಾದ ಸೈನ್ಯದೊಂದಿಗೆ ಯುದ್ಧದಲ್ಲಿ ಸಿಲುಕಿಕೊಂಡಿದೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 2,000 ಅತ್ಯಾಧುನಿಕ ಡ್ರೋನ್ ಮತ್ತು ಟ್ಯಾಂಕ್ ವಿರೋಧಿ ಯುದ್ಧಸಾಮಗ್ರಿಗಳನ್ನು ಒಳಗೊಂಡಂತೆ 54 ಮಿಲಿಯನ್ ಪೌಂಡ್ ಸಹಾಯದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದರು.

 ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಮರ್ಪಣೆ

ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಮರ್ಪಣೆ

ರಾಜಧಾನಿ ಕೀವ್‌ನಲ್ಲಿ ಕೂಟಗಳನ್ನು ನಿಷೇಧಿಸಲಾಯಿತು ಮತ್ತು ರಷ್ಯಾದ ಭಯೋತ್ಪಾದನೆಯ ವಿರುದ್ಧ ಜಾಗರೂಕರಾಗಿರಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಾಗರಿಕರಿಗೆ ಕರೆ ನೀಡಿದರು.

ಝೆಲೆನ್ಸ್‌ಕಿ ಮತ್ತು ಅವರ ಪತ್ನಿ, ಯುದ್ಧದಲ್ಲಿ ಹುತಾತ್ಮರಾದ ಉಕ್ರೇನಿಯನ್ ಸೈನಿಕರ ಗೌರವ ನೀಡಲು ಒಂದು ನಿಮಿಷ ಮೌನಾಚರಣೆ ಮಾಡಿದರು. ಮಧ್ಯ ಕೀವ್‌ನಲ್ಲಿರುವ ಸ್ಮಾರಕದಲ್ಲಿ ಹಳದಿ ಮತ್ತು ನೀಲಿ ಹೂವಿನ ಹೂಗುಚ್ಛಗಳನ್ನು ಇಟ್ಟು ನಮನ ಸಲ್ಲಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಅರ್ಧ ವಾರ್ಷಿಕೋತ್ಸವವನ್ನು "ದುಃಖ ಮತ್ತು ದುರಂತ ಮೈಲಿಗಲ್ಲು" ಎಂದು ಕರೆದಿದ್ದಾರೆ.

English summary
Zelensky was speaking on the day the nation celebrated its 1991 independence from the Soviet Union, Zelensky announced a deadly attack on a rail station Wednesday, the country's independence day, as he pledged Ukraine would fight "until the end" on the day that marked six months of war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X