50 ರಷ್ಯಾ ಸೈನಿಕರು, 6 ವಿಮಾನ ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್
ಕೀವ್, ಫೆಬ್ರವರಿ 24: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಯುದ್ಧ ಘೋಷಣೆ ಮಾಡಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಭಾರೀ ಯುದ್ಧ ನಡೆಯುತ್ತಿದೆ. ನಾವು ಐವತ್ತು ರಷ್ಯಾದ ಸೈನಿಕರನ್ನು ಕೊಂದಿದ್ದೇವೆ ಹಾಗೂ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಈಗಾಗಲೇ ವರದಿ ತಿಳಿಸಿದೆ. ಈ ನಡುವೆ ಈಗ ವು ಐವತ್ತು ರಷ್ಯಾದ ಸೈನಿಕರನ್ನು ಕೊಂದಿದ್ದೇವೆ ಹಾಗೂ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಗುರುವಾರ ಘೋಷಿಸಿದ್ದಾರೆ, ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುತ್ತಿವೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಚರ್ಚಿಸಲು ನ್ಯಾಟೋ ರಾಯಭಾರಿಗಳು ತುರ್ತು ಅಧಿವೇಶನ ಕರೆದಿದ್ದಾರೆ.

ಉಕ್ರೇನ್ ರಷ್ಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿರುವುದಾಗಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯಾವುದೇ ಕಾರಣಕ್ಕೂ ರಷ್ಯಾ ಎದುರು ತಲೆ ಬಾಗುವ ಪ್ರಶ್ನೆಯೇ ಇಲ್ಲ. ರಷ್ಯಾಗೆ ಉಕ್ರೇನ್ ಶರಣಾಗುವುದಕ್ಕೆ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಇನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯಾರಿಗೆ ಅಗತ್ಯವಿದೆಯೋ ಅವರೆಲ್ಲರಿಗೂ ಶಸ್ತ್ರಾಸ್ತ್ರಗಳನ್ನು ನೀಡಲಿದ್ದಾರೆ ಎಂದು ಉಕ್ರೇನ್ ರಾಷ್ಟ್ರ ಮಾಧ್ಯಮ ಹೇಳಿದೆ. ಇತ್ತೀಚಿಗೆ ಉಕ್ರೇನಿಯನ್ನರು ಮೂಲಭೂತ ಮಿಲಿಟರಿ ತರಬೇತಿಗೆ ಒಳಗಾಗುತ್ತಿರುವ ಚಿತ್ರಗಳು ಕೂಡಾ ಕಾಣಿಸಿಕೊಂಡಿದ್ದವು. ಈ ನಡುವೆ ಪೂರ್ವ ಉಕ್ರೇನ್‌ನಲ್ಲಿ ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿ ಪಡೆಗಳಿಗೆ ತನ್ನ ಸಶಸ್ತ್ರ ಪಡೆಗಳು ಬೆಂಬಲ ನೀಡುತ್ತಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಯುದ್ಧದ ವಿರುದ್ಧ ಹೊರಗೆ ಬಂದು ಪ್ರತಿಭಟಿಸುವಂತೆ ಉಕ್ರೇನ್ ಅಧ್ಯಕ್ಷರು ರಷ್ಯನ್ನರನ್ನು ಒತ್ತಾಯಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications