ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಬಾಂಬ್ ದಾಳಿ ನಿಲ್ಲಿಸುವಂತೆ ಮನವಿ
ಕೀವ್, ಮಾರ್ಚ್ 4: ಉಕ್ರೇನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ಪಡೆಗಳು ಪ್ರಮುಖ ದಾಳಿಯನ್ನು ಪ್ರಾರಂಭಿಸಿವೆ. ವರದಿಯ ಪ್ರಕಾರ, ಜಪೋರಿಜಿಯಾದಲ್ಲಿನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ಸೈನ್ಯವು ಪ್ರಮುಖ ದಾಳಿಯನ್ನು ಪ್ರಾರಂಭಿಸಿದೆ. ದಾಳಿ ಬಳಿಕ ಇಲ್ಲಿಂದ ಸಾಕಷ್ಟು ದಟ್ಟವಾದ ಹೊಗೆ ಸುತ್ತಲು ಆವರಿಸಿದೆ. ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರು ಇಲ್ಲಿ ಗುಂಡಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಅಗ್ನಿಶಾಮಕ ದಳಗಳನ್ನು ಬಿಡಬೇಕು ಎಂದು ರಷ್ಯಾಕ್ಕೆ ಮನವಿ ಮಾಡಿದ್ದಾರೆ. ಇದು ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ ಎಂದು ಅವರು ಹೇಳಿದ್ದಾರೆ.
ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರವಾಗಿರುವ ಜ್ಯಾಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ಸೇನೆಯು ಎಲ್ಲಾ ಕಡೆಯಿಂದ ದಾಳಿ ಮಾಡುತ್ತಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ಹೇಳಿದ್ದಾರೆ. ದಾಳಿಯ ನಂತರ ಸ್ಥಾವರದಿಂದ ಬೃಹತ್ ಹೊಗೆ ಬರುತ್ತಿದೆ. ರಷ್ಯಾ ತಕ್ಷಣವೇ ದಾಳಿಯನ್ನು ನಿಲ್ಲಿಸಬೇಕು, ಅಗ್ನಿಶಾಮಕ ದಳಗಳನ್ನು ಬಿಡಲು ಅವಕಾಶ ನೀಡಬೇಕು. ಸುರಕ್ಷಿತ ವಲಯಗಳನ್ನು ರಚಿಸಬೇಕು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ಉಕ್ರೇನಿಯನ್ ಸೈನಿಕರೊಂದಿಗಿನ ಭೀಕರ ಯುದ್ಧದ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನಿಯನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ಯುದ್ಧವು ಪರಮಾಣು ಶಕ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಉಕ್ರೇನ್‌ನ ವಿದ್ಯುತ್ ಗ್ರಿಡ್ ಮೇಲೆ ಪರಿಣಾಮ ಬೀರಬಹುದು ಎಂದು ಓಪನ್ ನ್ಯೂಕ್ಲಿಯರ್ ನೆಟ್‌ವರ್ಕ್‌ನ ನಿರ್ದೇಶಕ ಲಾಲರ್ ರಾಕ್‌ವುಡ್ ಹೇಳಿದ್ದಾರೆ. ಈ ಸ್ಥಾವರದ ಸುತ್ತಲಿನ ಪರಮಾಣು ಸ್ಥಾಪನೆಗೆ ಮಿಲಿಟರಿ ದಾಳಿ ಆತಂಕವನ್ನುಂಟು ಮಾಡಿದೆ. ಇದು ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು. ಬುಧವಾರ, ರಷ್ಯಾದ ಸೇನೆಯು ಟ್ಯಾಂಕ್‌ಗಳೊಂದಿಗೆ ನಗರದೊಳಗೆ ಆಗಮಿಸಿ ಇಲ್ಲಿನ ವಿದ್ಯುತ್ ಸ್ಥಾವರವನ್ನು ನಾಶಪಡಿಸಲು ಪ್ರಯತ್ನಿಸಿತು. ಹೀಗಾಗಿ ಸ್ಥಳೀಯ ನಿವಾಸಿಗಳು, ಕಾರ್ಮಿಕರು ಸ್ಥಾವರದಿಂದ ದೂರ ಹೋಗಲು ಸೂಚಿಸಲಾಗುತ್ತಿದೆ.
ಉಕ್ರೇನ್ ಇಲ್ಲಿ ನಾಲ್ಕು ಸಕ್ರಿಯ ಪರಮಾಣು ಸ್ಥಾವರಗಳನ್ನು ಹೊಂದಿದೆ. ಜ್ಯಾಪೊರಿಝಿಯಾದ ಪರಮಾಣು ವಿದ್ಯುತ್ ಸ್ಥಾವರದ ಮೇಲಿನ ದಾಳಿಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವು ಉಕ್ರೇನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಟ್ವೀಟ್ ಮಾಡಿದೆ. IAEA ಡೈರೆಕ್ಟರ್ ಜನರಲ್ ರಾಫೆಲ್ ಮರಿಯಾನೋ ಗ್ರೋಸಿ ಉಕ್ರೇನ್ ಪ್ರಧಾನ ಮಂತ್ರಿಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಇಲ್ಲಿ ಸೇನೆಯನ್ನು ಬಳಸಬಾರದು ಮತ್ತು ರಿಯಾಕ್ಟರ್ ಸ್ಫೋಟಗೊಂಡರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 130 ಕಿಲೋಮೀಟರ್ (80 ಮೈಲುಗಳು) ಸ್ಥಾವರವಿದೆ. ಕಳೆದ ಏಪ್ರಿಲ್ 1986ರಲ್ಲಿ ಪರಮಾಣು ರಿಯಾಕ್ಟರ್ ಸ್ಫೋಟಿಸಿತು, ಯುರೋಪ್‌ನಾದ್ಯಂತ ವಿಕಿರಣಶೀಲ ತ್ಯಾಜ್ಯವನ್ನು ಹೊರಹಾಕಿತು. ವಿಕಿರಣ ಸೋರಿಕೆ ತಡೆಗಟ್ಟಲು ಹಲವಾರು ವರ್ಷಗಳ ಹಿಂದೆ ಸ್ಫೋಟಗೊಂಡ ರಿಯಾಕ್ಟರ್ ಅನ್ನು ರಕ್ಷಣಾತ್ಮಕ ಉದ್ದೇಶದಿಂದ ಮುಚ್ಚಲಾಗಿತ್ತು.
ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಿಂದ 10 ಸೇನಾ ಅಧಿಕಾರಿಗಳು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, 316 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮೃತರಲ್ಲಿ ಒಡೆಸಾ ಪ್ರದೇಶದ ಝಿಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಯೋಧರು ಸೇರಿದ್ದಾರೆ, ಇದನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ. ಮಾಸ್ಕೋ ವಿರುದ್ಧ ಹೋರಾಡಲು ಕೀವ್ ಏಕಾಂಗಿಯಾಗಿ ಉಳಿದಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.












Click it and Unblock the Notifications