ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಯುದ್ಧ: ಚೀನಾದಿಂದ ಮಿಲಿಟರಿ ನೆರವು ಕೋರಿದ ರಷ್ಯಾ!

|
Google Oneindia Kannada News

ನವದೆಹಲಿ, ಮಾರ್ಚ್ 14: ಉಕ್ರೇನ್‌ನ ಮೇಲೆ ರಷ್ಯಾವು ದಾಳಿ ನಡೆಸಿ ಹಲವಾರು ರೀತಿಯ ಹಾನಿಗೆ ಕಾರಣವಾಗಿದೆ. ಈ ನಡುವೆ ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಬೆಂಬಲಿಸಲು ಡ್ರೋನ್‌ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾಕ್ಕೆ ಮನವಿ ಮಾಡಿದೆ ಎಂದು ಯುಎಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 24 ರಂದು, ರಷ್ಯಾ ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ನಂತರ, ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‌ಗಳು ಮೇಲೆ ನಿರ್ಬಂಧವನ್ನು ವಿಧಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ನಿರ್ಬಂಧವನ್ನು ಜಾರಿಗೆ ತಂದಿದೆ. ಜೊತೆಗೆ ರಷ್ಯಾವನ್ನು SWIFT ಹಣಕಾಸು ವ್ಯವಸ್ಥೆಯಿಂದ ಹೊರಹಾಕಲಾಗಿದೆ.

ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!

ಈ ನಡುವೆ ರಷ್ಯಾವು ಚೀನಾದಿಂದ ಮಿಲಿಟರಿ ನೆರವು ಕೋರಿದೆ ಎಂದು ಯುಎಸ್‌ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು, ರಷ್ಯಾಕ್ಕೆ ಸಹಾಯ ಮಾಡಲು ಚೀನಾ ಸಿದ್ಧರಿರುವ ಯಾವುದೇ ಸಲಹೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು. ಮಿಲಿಟರಿ ಸಹಾಯಕ್ಕಾಗಿ ರಷ್ಯಾ ವಿನಂತಿ ಮಾಡಿರುವ ವರದಿಯ ಬಗ್ಗೆ ಉಲ್ಲೇಖ ಮಾಡಿ, ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯುರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ "ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Ukraine-Russia War: Russia Asked China for Military Aid for Ukraine War Says US Official

ಉಕ್ರೇನ್ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ವಾಷಿಂಗ್ಟನ್‌ನ ಚೀನಾ ರಾಯಭಾರಿ

ಚೀನಾದಿಂದ ರಷ್ಯಾ ಮಿಲಿಟರಿ ನೆರವು ಕೋರಿದ ಬಗ್ಗೆ ಯಾವುದೇ ಮಾಹಿತಿ ತನಗೆ ಲಭ್ಯವಿಲ್ಲ ಎಂದು ಹೇಳಿದ ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಈ ಸಂದರ್ಭದಲ್ಲೇ ಉಕ್ರೇನ್‌ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಇದು ನಿಜಕ್ಕೂ ಕಳವಳಕಾರಿ ಘಟನೆ," ಎಂದು ಹೇಳಿದರು. "ಚೀನಾ ಉಕ್ರೇನ್‌ಗೆ ಮಾನವೀಯ ನೆರವು ನೀಡುತ್ತಿದೆ, ಈ ನೆರವನ್ನು ಚೀನಾ ಮುಂದುವರಿಸುತ್ತದೆ," ಎಂದು ಕೂಡಾ ಭರವಸೆ ನೀಡಿದ್ದಾರೆ.

ಭಾರತ- ಚೀನಾ ಗಡಿ ವಿವಾದ; ಎಲ್‌ಎಸಿ ಮೂಲಕ ಪರಿಹರಿಸಲು ಒಪ್ಪಿಗೆಭಾರತ- ಚೀನಾ ಗಡಿ ವಿವಾದ; ಎಲ್‌ಎಸಿ ಮೂಲಕ ಪರಿಹರಿಸಲು ಒಪ್ಪಿಗೆ

"ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯು ಉಲ್ಬಣಗೊಳ್ಳುವುದನ್ನು ಅಥವಾ ನಿಯಂತ್ರಣ ತಪ್ಪುವುದನ್ನು ತಡೆಯುವುದು ಹೆಚ್ಚಿನ ಆದ್ಯತೆಯ ವಿಚಾರವಾಗಿದೆ. ಚೀನಾವು ಈ ಬೃಹತ್ ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಕರೆ ನೀಡುತ್ತದೆ," ಎಂದು ಕೂಡಾ ವಾಷಿಂಗ್ಟನ್‌ನಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಹೇಳಿದರು.

ಯುಎಸ್‌, ಚೀನಾ ಅಧಿಕಾರಿಗಳ ಭೇಟಿ

ಈ ನಡುವೆ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮತ್ತು ವಿದೇಶಾಂಗ ಇಲಾಖೆಯ ಹಲವಾರು ಅಧಿಕಾರಿಗಳು ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋ ಸದಸ್ಯ ಮತ್ತು ವಿದೇಶಾಂಗ ವ್ಯವಹಾರಗಳ ಆಯೋಗದ ಕಚೇರಿಯ ನಿರ್ದೇಶಕ ಯಾಂಗ್ ಜೀಚಿ ಅವರನ್ನು ರೋಮ್‌ನಲ್ಲಿ ಭೇಟಿಯಾಗಲಿದ್ದಾರೆ. ಉಭಯ ದೇಶದ ನಾಯಕರುಗಳು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಮೇಲೆ ಉಕ್ರೇನ್ ವಿರುದ್ಧ ರಷ್ಯಾದ ಯುದ್ಧದ ಪ್ರಭಾವದ ಬಗ್ಗೆ ಚರ್ಚಿಸಲಿದ್ದಾರೆ.

"ಸೋಮವಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ವಿದೇಶಾಂಗ ಇಲಾಖೆಯ ಅಧಿಕಾರಿಗಳು ರೋಮ್‌ನಲ್ಲಿ ಇರಲಿದ್ದಾರೆ. ಸುಲ್ಲಿವಾನ್ ಅವರು ಚೀನೀ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ಬ್ಯುರೊ ಸದಸ್ಯ ಮತ್ತು ವಿದೇಶಾಂಗ ವ್ಯವಹಾರಗಳ ಆಯೋಗದ ಕಚೇರಿಯ ನಿರ್ದೇಶಕ ಯಾಂಗ್ ಜೀಚಿ ಅವರನ್ನು ಭೇಟಿಯಾಗಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) ನಡುವೆ ಮುಕ್ತ ಮಾತುಕತೆ ನಡೆಸಲು ಪ್ರಯತ್ನಿಸಲಾಗುವುದು," ಎಂದು ಶ್ವೇತಭವನದ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Russia has asked China for military assistance including drones, to support its invasion of Ukraine Says US official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X