ರಷ್ಯಾ ಆಕ್ರಮಣಕ್ಕೆ ಉಕ್ರೇನ್‌ನ 16 ಮಕ್ಕಳು ಬಲಿ

ಕೀವ್‌, ಫೆಬ್ರವರಿ 28: ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಐದು ದಿನಗಳು ಸಂದಿವೆ. ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಸಮಯದಲ್ಲಿ ಕನಿಷ್ಠ 16 ಮಕ್ಕಳನ್ನು ಕೊಂದಿವೆ ಎಂದು ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಭಾನುವಾರ ಮಾಹಿತಿ ನೀಡಿದ್ದಾರೆ.

ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ರಷ್ಯಾದ ಆಕ್ರಮಣದ ವೇಳೆ ಮಕ್ಕಳ ಮಾರಣಹೋಮವನ್ನು ರಷ್ಯಾದ "ಯುದ್ಧಾಪರಾಧ" ಎಂದು ವಿವರಿಸಿದ್ದಾರೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕೊಲ್ಲಲಾಗಿದೆ ಎಂದು ಆರೋಪಿಸಿದರು.

ರಷ್ಯಾದ ಪಡೆಗಳು ಶುಕ್ರವಾರ 50 ಮಕ್ಕಳು ಇರುವ ಅನಾಥಾಶ್ರಮ ಮತ್ತು ಶಿಶುವಿಹಾರದ ಮೇಲೆ ದಾಳಿ ಮಾಡಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ದೂರಿದ್ದಾರೆ. ದಾಳಿಯು ಗುರುವಾರ ಪ್ರಾರಂಭವಾಗಿದ್ದು, ಈವರೆಗೆ ಸಾವನ್ನಪ್ಪಿದ 198 ಉಕ್ರೇನಿಯನ್ನರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವ ಓಲೆಹ್ ಲಿಯಾಶ್ಕೊ ಶನಿವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 ಒಟ್ಟು ಎಷ್ಟು ಸಾವು-ನೋವು?

ಒಟ್ಟು ಎಷ್ಟು ಸಾವು-ನೋವು?

1,115 ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ 33 ಮಕ್ಕಳು ಎಂದು ಕೂಡಾ ಶನಿವಾರ ಆರೋಗ್ಯ ಸಚಿವ ಓಲೆಹ್ ಲಿಯಾಶ್ಕೊ ಹೇಳಿದ್ದಾರೆ. ಆದರೆ ಒಂದು ದಿನದಲ್ಲೆ ಮಕ್ಕಳ ಸಾವಿನ ಪ್ರಮಾಣ ಏರಿಕೆ ಕಂಡಿರುವುದು ತಿಳಿದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಸಮಯದಲ್ಲಿ ಕನಿಷ್ಠ 16 ಮಕ್ಕಳನ್ನು ಕೊಂದಿವೆ ಎಂದು ಭಾನುವಾರ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಹೇಳಿದ್ದಾರೆ. ಈ ವಾರ ರಷ್ಯಾದ ಪಡೆಗಳು ಉಕ್ರೇನ್‌ಗೆ ಪ್ರವೇಶಿಸಿದ ನಂತರ ಕನಿಷ್ಠ 64 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,60,000 ಕ್ಕೂ ಹೆಚ್ಚು ಜನರು ವಲಸೆ ಹೋಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯು ಫೆಬ್ರವರಿ 26ರಂದು ತಿಳಿಸಿದೆ. ಆದರೆ ಇದುವರೆಗೆ 352 ನಾಗರಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಭಾನುವಾರ ಹೇಳಿದೆ.

 ಮಕ್ಕಳ ಕೊಲೆಯ ಬಗ್ಗೆ ರಷ್ಯಾ ಹೇಳುವುದು ಏನು?

ಮಕ್ಕಳ ಕೊಲೆಯ ಬಗ್ಗೆ ರಷ್ಯಾ ಹೇಳುವುದು ಏನು?

ಉಕ್ರೇನ್‌ನಲ್ಲಿ ಮಕ್ಕಳು ಕೂಡಾ ರಷ್ಯಾದ ದಾಳಿಗೆ ಬಲಿಯಾಗಿದ್ದಾರೆ ಎಂಬ ಆರೋಪವನ್ನು ರಷ್ಯಾ ನಿರಾಕರಿಸಿದೆ. ತನ್ನ ಪಡೆಗಳು ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ರಷ್ಯಾ ಹೇಳಿಕೊಂಡಿದೆ. ಉಕ್ರೇನ್‌ನ ನಾಗರಿಕರು ಯಾವುದೇ ಅಪಾಯದಲ್ಲಿಲ್ಲ ಎಂದು ಹೇಳಿದೆ. ರಷ್ಯಾ ತನ್ನ ಸೈನಿಕರ ನಡುವಿನ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ರಷ್ಯಾದ ರಕ್ಷಣಾ ಸಚಿವಾಲಯವು ಯಾವುದೇ ಸಂಖ್ಯೆಯನ್ನು ನೀಡದೆ ರಷ್ಯಾದ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡಿದ್ದಾರೆ ಎಂದು ಭಾನುವಾರ ಹೇಳಿದೆ.

 2014ರಲ್ಲಿ ಉಕ್ರೇನ್ ರಷ್ಯಾ ಯುದ್ಧದ ಸಾವುನೋವುಗಳೆಷ್ಟು?

2014ರಲ್ಲಿ ಉಕ್ರೇನ್ ರಷ್ಯಾ ಯುದ್ಧದ ಸಾವುನೋವುಗಳೆಷ್ಟು?

2014ರ ಯುದ್ಧದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಫೆಬ್ರವರಿ 23, 2014 ರಿಂದ ಮಾರ್ಚ್ 19, 2014 ರವರೆಗೆ, ಕ್ರಿಮಿಯಾದ ಮೇಲೆ ರಷ್ಯಾದ ಆಕ್ರಮಣದಲ್ಲಿ 6 ಜನರು ಸಾವನ್ನಪ್ಪಿದರು. ಈ ಪೈಕಿ 3 ಪ್ರತಿಭಟನಾಕಾರರು ಆಗಿದ್ದು, ಮತ್ತು ಅದರಲ್ಲಿ ಇಬ್ಬರು ಪ್ರತಿಭಟನಾಕಾರರು ರಷ್ಯಾದ ಪರ ಮತ್ತು ಓರ್ವರು ಉಕ್ರೇನ್ ಪರ ಆಗಿದ್ದರು. ಇಬ್ಬರು ಸೈನಿಕರು ಮತ್ತು ಒಬ್ಬ ಕ್ರಿಮಿಯನ್ ಎಸ್‌ಡಿಎಫ್‌ ಟ್ರೂಪರ್ ಕೂಡ ಸಾವನ್ನಪ್ಪಿದ್ದಾರೆ. 10 ಆಗಸ್ಟ್ 2016 ರಂದು, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿತು. ಇದರಲ್ಲಿ ಇಬ್ಬರು ರಷ್ಯಾದ ಸೈನಿಕರು ಕೊಲ್ಲಲ್ಪಟ್ಟರು. ಆದರೆ ಉಕ್ರೇನ್‌ ಈ ಆರೋಪವನ್ನು ತಿರಸ್ಕರಿಸಿದೆ.

 2021ರಲ್ಲಿ ಉಕ್ರೇನ್ ರಷ್ಯಾ ಬಿಕ್ಕಟ್ಟಿನಲ್ಲಿ ಸಾವು ಪ್ರಮಾಣ ಎಷ್ಟಿದೆ?

2021ರಲ್ಲಿ ಉಕ್ರೇನ್ ರಷ್ಯಾ ಬಿಕ್ಕಟ್ಟಿನಲ್ಲಿ ಸಾವು ಪ್ರಮಾಣ ಎಷ್ಟಿದೆ?

2021ರವರೆಗೆ ರಷ್ಯಾ ಉಕ್ರೇನ್‌ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆಯು ನಾಲ್ಕು ಸಾವಿರಕ್ಕೂ ಅಧಿಕ ಎಂದು ಅಂದಾಜು ಮಾಡಲಾಗಿದೆ. 01 ಡಿಸೆಂಬರ್ 2021 ರಂತೆ, 4,629 ಸಾವುಗಳನ್ನು ವರದಿ ಮಾಡಲಾಗಿದೆ. ಇದರಲ್ಲಿ 4,490 ಗುರುತಿಸಲಾಗಿದೆ ಮತ್ತು 139 ಮಂದಿಯ ಗುರುತು ಇನ್ನೂ ಕೂಡಾ ಪತ್ತೆಯಾಗಿಲ್ಲ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+