ಉಕ್ರೇನ್‌ಗೆ ಜಗತ್ತು ದಾನ ಮಾಡಿದ್ದು ಎಷ್ಟು ದುಡ್ಡು ಗೊತ್ತಾ?
ಕೀವ್: ಜಗತ್ತು ಪೀಸ್ ಪೀಸ್ ಆಗ್ತಿದೆ, ರಷ್ಯಾ & ಉಕ್ರೇನ್ ಯುದ್ಧದಿಂದ ಭೀಕರ ಸ್ಥಿತಿ ಸೃಷ್ಟಿಯಾಗಿದೆ. ಭೀಕರ ಯುದ್ಧ ನಿಲ್ಲಿಸಲು ಉಕ್ರೇನ್ ಸಂಧಾನಕ್ಕೆ ಮುಂದೆ ಬರುತ್ತಿಲ್ಲ, ರಷ್ಯಾ ಕೂಡ ಯುದ್ಧ ನಿಲ್ಲಿಸಲು ತಯಾರಿಲ್ಲ. ಹೀಗಾಗಿ ರಕ್ತದ ಮಡುವಲ್ಲಿ ನರಳುತ್ತಿರುವ ಉಕ್ರೇನ್‌ಗೆ (Russia Ukraine War) ಈವರೆಗೂ ಲಕ್ಷ ಲಕ್ಷ ಕೋಟಿ ದಾನವಾಗಿ ಬಂದಿದ್ದು, ಮಾಹಿತಿ ಇಲ್ಲಿ ತಿಳಿಯೋಣ.
ನ್ಯಾಟೋ ಪಡೆ ಜೊತೆ ಕೈಜೋಡಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿತ್ತು. ಪರಿಣಾಮ ಈವರೆಗೂ ಲಕ್ಷಾಂತರ ಜನ ಗಾಯಗೊಂಡು ಹತ್ತಾರು ಸಾವಿರ ಮಂದಿ ಪ್ರಾಣ ಬಿಟ್ಟಿದ್ದಾರೆ. ಇದು ಲೆಕ್ಕಕ್ಕೆ ಸಿಕ್ಕಿರುವ ಮಾಹಿತಿ, ಗುರುತೇ ಸಿಗದೆ ಸತ್ತವರ ಸಂಖ್ಯೆ ಲಕ್ಷ ಮೀರಿದೆ. ಇಂತಹ ಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ, ರಷ್ಯಾ ಶತ್ರು ಅಮೆರಿಕ ಸುಮ್ಮನೆ ಕೂರುತ್ತಾ? ನೋ ವೇ ಚಾನ್ಸ್ ಇಲ್ಲ. ಇದೇ ಸಂದರ್ಭ ಬಳಸಿ, ಲಕ್ಷ ಲಕ್ಷ ಕೋಟಿ ದಾನ ನೀಡಿ ಉಕ್ರೇನ್ ಸೇನೆಯನ್ನ ರಷ್ಯಾ ವಿರುದ್ಧ ಎತ್ತಿ ಕಟ್ಟಿದೆ.

1 ವರ್ಷದಲ್ಲಿ ₹1.37 ಲಕ್ಷ ಕೋಟಿ ದಾನ!
ಹೌದು, ಈ ಮಾಹಿತಿಯನ್ನ ಸ್ವತಃ ಉಕ್ರೇನ್ ನೀಡಿದೆ. ಉಕ್ರೇನ್ ವಿದೇಶಿ ರಾಷ್ಟ್ರಗಳಿಂದ ಈ ವರ್ಷ ಅಂದಾಜು ₹1.37 ಲಕ್ಷ ಕೋಟಿ ಆರ್ಥಿಕ ನೆರವು ಅಂದರೆ ದಾನವಾಗಿ ಸಿಕ್ಕಿದೆ. ಈ ಮಾಹಿತಿಯನ್ನ ಉಕ್ರೇನ್‌ನ ಹಣಕಾಸು ಸಚಿವ ಸೆರ್ಹೀ ಮರ್ಚೆಂಕೊ ತಿಳಿಸಿದ್ದಾರೆ. ಬಜೆಟ್ ಕೊರತೆ ನೀಗಿಸಲು ವಿದೇಶಿ ಪಾಲುದಾರರು ಇನ್ನಷ್ಟು ನೆರವು ನೀಡುವ ವಿಶ್ವಾಸವಿದೆ ಎನ್ನುವ ಮೂಲಕ ಉಕ್ರೇನ್ ಮತ್ತಷ್ಟು ನೆರವು ಬಯಸುತ್ತಿದೆ ಎಂಬ ಸುಳಿವು ನೀಡಿದೆ ಉಕ್ರೇನ್. ಇದರಲ್ಲಿ ಅಮೆರಿಕ ನೀಡಿರುವ ದಾನವೇ ಜಾಸ್ತಿ ಇದೆ.
ಅಮೆರಿಕ ಕೊಟ್ಟಿದ್ದು ₹3 ಲಕ್ಷ ಕೋಟಿ
ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಉಳಿಯಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ಇನ್ನಿಲ್ಲದ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ದರೂ ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಇದು ಅಮೆರಿಕ & ರಷ್ಯಾ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

ಚಳಿಗಾಲದ ಯುದ್ಧಕ್ಕೆ ಈಗಲೇ ತಯಾರಿ?
ಅಮೆರಿಕ ಇದೀಗ ನೀಡುತ್ತಿರುವ ಶಸ್ತ್ರಾಸ್ತ್ರಗಳು ರಷ್ಯಾ ವಿರುದ್ಧ ಉಕ್ರೇನ್ ಘರ್ಷಣೆ ನಡೆಸಲು ಚಳಿಗಾಲಕ್ಕೆ ನೀಡುತ್ತಿರುವ ಉಡುಗೊರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಏಕೆಂದರೆ ಚಳಿಗಾಲದ ಹೊತ್ತಿಗೆ ರಷ್ಯಾ ಮತ್ತು ಉಕ್ರೇನ್ ಸಂಪೂರ್ಣ ಮರಗಟ್ಟಿರುತ್ತವೆ. ಎಲ್ಲೆಲ್ಲೂ ಹಿಮ ಆವರಿಸಿ, ತಾಪಮಾನ ಮೈನಸ್ ಡಿಗ್ರಿಗೆ ತಲುಪಿಬಿಡುತ್ತೆ. ಇಂತಹ ಹೊತ್ತಲ್ಲಿ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗಿದೆ ಅಮೆರಿಕ. ಜೊತೆಗೆ ನ್ಯಾಟೋ ಪಡೆಗಳು ಕೂಡ ಉಕ್ರೇನ್ ಬೆಂಬಲಕ್ಕೆ ನಿಂತು ಪರೋಕ್ಷವಾಗಿ ರಷ್ಯಾ ವಿರುದ್ಧ ಹೋರಾಡುತ್ತಿವೆ.
ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?
ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾದ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ. ಈ ಬೆಳವಣಿಗೆ ನಡುವೆ ಉಕ್ರೇನ್ ಸೇನೆಗೆ ಅಮೆರಿಕ 300 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಈ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ಅಮೆರಿಕ 36 ಬಿಲಿಯನ್ ಡಾಲರ್ ನೆರವು ನೀಡಿದಂತಾಗಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ತಿಕ್ಕಾಟದಲ್ಲಿ ಜಗತ್ತು ಭಯಗೊಂಡಿದೆ. ವಿದೇಶದಿಂದ ಲಕ್ಷ ಲಕ್ಷ ಕೋಟಿ ಹಣವು ದಾನವಾಗಿ ಬರುತ್ತಿದೆ. ಯುದ್ಧದಲ್ಲಿ ಅಮೆರಿಕ ಪರೋಕ್ಷವಾಗಿ ಎಂಟ್ರಿ ಆಗುತ್ತಿರುವುದು, ರಷ್ಯಾ ಮತ್ತು ಅಮೆರಿಕ ನಡುವೆ ಬೆಂಕಿ ಹೊತ್ತಿಕೊಳ್ಳುವಂತೆ ಮಾಡುತ್ತಿದೆ. ಇದೆಲ್ಲಾ ಯಾವಾಗ ಮುಗಿಯುತ್ತೆ ಅಂತಾ ಜಗತ್ತು ಕಾಯುತ್ತಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧವನ್ನ 3ನೇ ಮಹಾಯುದ್ಧದ ತಯಾರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.












Click it and Unblock the Notifications